ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉಕ್ರೇನಲ್ಲಿ ಮಡಿದ ನವೀನ್ ಮನಗೆ ಭೇಟಿ ನೀಡಿ ತಂದೆತಾಯಿಗಳನ್ನು ಸಂತೈಸಿದರು

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಉಕ್ರೇನಲ್ಲಿ ಮಡಿದ ನವೀನ್ ಮನಗೆ ಭೇಟಿ ನೀಡಿ ತಂದೆತಾಯಿಗಳನ್ನು ಸಂತೈಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 02, 2022 | 4:08 PM

ಸಚಿವರ ಮಾತಿನಿಂದ ಕನ್ವಿನ್ಸ್ ಆಗದ ಸಮನ್ ತಂದೆ, ತಾವು ಹೇಳಿದ್ದನ್ನೇ ಪುನರಾವರ್ತಿಸಿದಾಗ ಸಚಿವರ ಪಕ್ಕ ಕೂತಿರುವ ವ್ಯಕ್ತಿಯೊಬ್ಬರು, ಸಚಿವರು ಹೇಳಿದ್ದಾರಲ್ಲ, ಅವರು ವ್ಯವಸ್ಥೆ ಮಾಡುತ್ತಾರೆ ಬಿಡಿ ಅಂತ ಹೇಳಿದಾಗ ಅವರಿಗೆ ರೇಗುತ್ತದೆ

ರಷ್ಯನ್ ದಾಳಿಗೆ ತುತ್ತಾಗಿರುವ ಉಕ್ರೇನಲ್ಲಿ (Ukraine) ಮಂಗಳವಾರ ದಾರುಣ ಮರಣವನ್ನಪ್ಪಿದ ನವೀನ್ ಶೇಖರಪ್ಪ (Naveen Shekharappa) ಅವರ ದುಃಖತಪ್ತ ಕುಟುಂಬಕ್ಕೆ ಧಾರವಾಡದ ಸಂಸದ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಅವರು ಸಾಂತ್ವನ ನೀಡಿದರು. ನವೀನ್ ತಂದೆತಾಯಿಗಳಿಗೆ ಆಘಾತದಿಂದ ಚೇತರಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಸಚಿವರು ಮಾತಾಡುವಾಗ ಆವರು ತಲೆಬಗ್ಗಿಸಿ ಮೌನವಾಗಿ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆಯುತ್ತಿದ್ದರು. ಇದೇ ಊರಿನ (ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮ) ಮತ್ತೊಬ್ಬ ವಿದ್ಯಾರ್ಥಿ ಸುಮನ್ ಸಹ ಉಕ್ರೇನಲ್ಲಿ ವೈದ್ಯಕೀಯ ವಿಜ್ಞಾನ ವ್ಯಾಸಂಗ ಮಾಡುತ್ತಿದ್ದಾರೆ. ಸುಮನ್ ತಂದೆ, ಸಚಿವ ಜೋಷಿ ಅವರಿಗೆ ತಮ್ಮ ಮಗ ಸುರಕ್ಷಿತವಾಗಿ ವಾಪಸ್ಸು ಬರಲು ಏರ್ಪಾಟು ಮಾಡಬೇಕು ಅಂತ ಕೈ ಜೋಡಿಸಿ ವಿನಂತಿಸಿಕೊಂಡರು. ವಿಡಿಯೋನಲ್ಲಿ ಜೋಷಿ ಆಡುತ್ತಿರುವ ಮಾತುಗಳು ಕೇಳಿಸುತ್ತಿಲ್ಲ. ಆದರೆ, ಕೇಂದ್ರ ಸರ್ಕಾರ ಮಾಡಿರುವ ವ್ಯವಸ್ಥೆಯನ್ನು ವಿವರಿಸಿದರು.

ಸಚಿವರ ಮಾತಿನಿಂದ ಕನ್ವಿನ್ಸ್ ಆಗದ ಸಮನ್ ತಂದೆ, ತಾವು ಹೇಳಿದ್ದನ್ನೇ ಪುನರಾವರ್ತಿಸಿದಾಗ ಸಚಿವರ ಪಕ್ಕ ಕೂತಿರುವ ವ್ಯಕ್ತಿಯೊಬ್ಬರು, ಸಚಿವರು ಹೇಳಿದ್ದಾರಲ್ಲ, ಅವರು ವ್ಯವಸ್ಥೆ ಮಾಡುತ್ತಾರೆ ಬಿಡಿ ಅಂತ ಹೇಳಿದಾಗ ಅವರಿಗೆ ರೇಗುತ್ತದೆ. ಅವರನ್ನು ಸುಮ್ಮನಿರುವಂತೆ ಅಸಹನೆಯಿಂದ ಹೇಳಿ ಸಚಿವರೊಂದಿಗೆ ಮಾತು ಮುಂದುವರಿಸುತ್ತಾರೆ. ಆಗಿದ್ದು ಆಗಿ ಹೋಯ್ತು, ಮತ್ತೇ ಹೀಗಾಗೋದು ಬೇಡ ಅಂತ ಹೇಳುವ ನವೀನ್ ಕುಟುಂಬದ ಪರವಾಗಿ ಬ್ಯಾಟ್ ಮಾಡಲಾರಂಭಿಸುತ್ತಾರೆ.

ನವೀನ್ ಕುಟುಂಬಕ್ಕೆ ಆದಷ್ಟು ಬೇಗ ಪರಿಹಾರ ಸಿಗುವಂತೆ ಮಾಡಿ, ನವೀನ್ ಹಿರಿಯ ಸಹೋದರ ಪಿ ಹೆಚ್ ಡಿ ಮಾಡಿಕೊಂಡಿದ್ದಾನೆ, ಅವನಿಗೆ ಒಂದು ಸರ್ಕಾರಿ ಕೆಲಸ ಕೊಡಿಸಿ ಅಂತ ಸುಮನ್ ತಂದೆ ಕೋರುತ್ತಾರೆ. ಅಲ್ಲಿ ನೆರೆದವರಿಗೆ ಅವರ ವರ್ತನೆ ಅಧಿಕಪ್ರಸಂಗಿತನ ಅನಿಸುತ್ತದೆ. ಇನ್ನೂ ನವೀನ್ ದೇಹ ಕೂಡ ಊರು ತಲುಪಿಲ್ಲ. ಇಂಥ ಸಮಯದಲ್ಲಿ ಅವರು ಬೇರೆಯವರ ಕುಟುಂಬದ ಪರವಾಗಿ ಪರಿಹಾರ ಧನಕ್ಕೆ ಮೊರೆಯಿಟ್ಟಿದ್ದು ಯಾರಿಗೂ ಸರಿಯೆನಿಸಲಿಲ್ಲ.

ಅವರ ಮಗ ಇನ್ನೂ ಉಕ್ರೇನಲ್ಲಿ ಸಿಲುಕಿರುವುದರಿಂದ ಅವರ ಅಸಹಾಯಕತೆ ಮತ್ತು ಆತಂಕ ಅರ್ಥವಾಗುತ್ತದೆ. ಅದನ್ನು ಬಿಟ್ಟು ಬೇರೆ ಮಾತಾಡಿದ್ದು ಸರಿಯೆನಿಸಲಿಲ್ಲ.

ಇದನ್ನೂ ಓದಿ: ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು

Published on: Mar 02, 2022 04:07 PM