ಗಾಲಿ ಜನಾನರ್ಧನ ರೆಡ್ಡಿ ಕೈಗೆ ಕ್ರಿಕೆಟ್ ಬ್ಯಾಟ್ ಕೊಟ್ರೆ ಬಾಲನ್ನು ದೂರದವರೆಗೆ ಅಟ್ಟಬಲ್ಲರು! ಸಾಕ್ಷಿ ಇಲ್ಲಿದೆ

ಗಾಲಿ ಜನಾನರ್ಧನ ರೆಡ್ಡಿ ಕೈಗೆ ಕ್ರಿಕೆಟ್ ಬ್ಯಾಟ್ ಕೊಟ್ರೆ ಬಾಲನ್ನು ದೂರದವರೆಗೆ ಅಟ್ಟಬಲ್ಲರು! ಸಾಕ್ಷಿ ಇಲ್ಲಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 02, 2022 | 6:15 PM

ಸೋಜಿಗದ ಸಂಗತಿಯೆಂದರೆ ರೆಡ್ಡಿ ಬಾಲ್​ಗಳನ್ನು ಬ್ಯಾಟ್​ನಿಂದ ಕನೆಕ್ಟ್ ಮಾಡುತ್ತಾರೆ. ಎದುರಿಸಿದ ಎಸೆತಗಳೆಲ್ಲವನ್ನು ಅವರು ದೂರ ಅಟ್ಟುತ್ತಾರೆ, ಅವರ ಪ್ರತಿ ಹೊಡೆತಕ್ಕೆ ನೆರೆದ ಜನರಿಂದ ಕರತಾಡನ ಮತ್ತು ಶಿಳ್ಳೆ ಸಿಗುತ್ತವೆ.

ಮಾಜಿ ಸಚಿವ ಮತ್ತು ಬಳ್ಳಾರಿಯ ಗಣಿ ಧಣಿ ಗಾಲಿ ಜನಾರ್ಧನ ರೆಡ್ಡಿ (Gali Janardhana Reddy) ಅವರು ಕ್ರಿಕೆಟ್ ಪ್ರಿಯರೇ ಆಥವಾ ತಮ್ಮ ಓದಿನ ದಿನಗಳಲ್ಲಿ ಆಟವಾಡಿದ್ದರೆ? ಅವರು ಆಡಿರಲೇ ಬೇಕು. ಯಾಕೆ ಅಂತ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಮಂಗಳವಾರ ರಾತ್ರಿ ಅವರು ಬಳ್ಳಾರಿಯಲ್ಲಿ ಒಂದು ಹೊನಲು ಬೆಳಕಿನ (floodlit) ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದರು. ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಹೇಗಾಗುತ್ತದೆ ಅಂತ ನಿಮಗೆ ಗೊತ್ತಲ್ಲ? ಉದ್ಘಾಟಕರ ಕೈಯಲ್ಲಿ ಒಂದು ಬ್ಯಾಟ್ ನೀಡಿ ಅವರಿಗೆ ಬಾಲ್ ಗಳನ್ನು ಎಸೆಯಲಾಗುತ್ತದೆ. ಬಾಲು ಬ್ಯಾಟಿಗೆ ತಾಕಲಿ ಬಿಡಲಿ, ಉದ್ಘಾಟಕ ಒಮ್ಮೆ ಬ್ಯಾಟ್ ಬೀಸಿದರೆ ಅಯಿತು, ಟೂರ್ನಿಯ ಉದ್ಘಾಟನೆ (inauguration) ಆದಂತೆಯೇ! ಬಳ್ಳಾರಿಯಲ್ಲೂ ಅದೇ ಆಗಿದೆ. ಉದ್ಘಾಟಕ ಜನಾರ್ಧನ ರೆಡ್ಡಿ ಅವರ ಕೈಯಲ್ಲಿ ಒಂದು ಬ್ಯಾಟ್ ನೀಡಿ ಅವರಿಗೆ ಬೌಲಿಂಗ್ ಮಾಡಲಾಗುತ್ತದೆ.

ಸೋಜಿಗದ ಸಂಗತಿಯೆಂದರೆ ರೆಡ್ಡಿ ಬಾಲ್​ಗಳನ್ನು ಬ್ಯಾಟ್​ನಿಂದ ಕನೆಕ್ಟ್ ಮಾಡುತ್ತಾರೆ. ಎದುರಿಸಿದ ಎಸೆತಗಳೆಲ್ಲವನ್ನು ಅವರು ದೂರ ಅಟ್ಟುತ್ತಾರೆ, ಅವರ ಪ್ರತಿ ಹೊಡೆತಕ್ಕೆ ನೆರೆದ ಜನರಿಂದ ಕರತಾಡನ ಮತ್ತು ಶಿಳ್ಳೆ ಸಿಗುತ್ತವೆ. ರೆಡ್ಡಿಯವರು ಸಹ ಬಾಲನ್ನು ಬಾರಿಸಿದ ಕೂಡಲೇ ಖುಷಿ ಮತ್ತು ಸಂತೃಪ್ತಿಯ ನಗೆ ಬೀರುತ್ತಾರೆ. ಅವರು ಮೊದಲು ಕ್ರಿಕೆಟ್ ಆಡಿರದಿದ್ದರೆ ಬಾಲನ್ನು ಕನೆಕ್ಟ್ ಮಾಡುವುದು ಸಾಧ್ಯವಾಗುತ್ತಿರಲಿಲ್ಲ.

ಹಿಂದೆ ವಿಕೆಟ್ ಕೀಪರ್ ಯಾರಿದ್ದಾರೆ ಅಂತ ಗಮನಿಸಿದಿರಾ? ಸಾರಿಗೆ ಸಚಿವ ಮತ್ತು ಜನಾರ್ಧನ ರೆಡ್ಡಿ ಆಪ್ತಮಿತ್ರ ಬಿ ಶ್ರೀರಾಮುಲು. ರೆಡ್ಡಿ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ರೀಎಂಟ್ರಿ ಸಹಾಯ ಮಾಡುತ್ತಿರೋರು ಇದೇ ಶ್ರೀರಾಮುಲು. ರೆಡ್ಡಿ ಮತ್ತು ರಾಮುಲು ಅವರು ತಮ್ಮ ಕುಟುಂಬಗಳೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಸಂಗತಿಯನ್ನು ನಾವು ಇದಕ್ಕೆ ಮೊದಲು ಚರ್ಚಿಸಿದ್ದೇವೆ.

ಇದನ್ನೂ ಓದಿ:  ಸೋಮಶೇಖರ ರೆಡ್ಡಿ ಬಳಿಕ ಅವರ ಸಹೋದರ ಜನಾರ್ಧನ ರೆಡ್ಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ