ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ, ಅದರೆ ದೇಹವನ್ನು ಇಲ್ಲಿಗೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ: ಬೊಮ್ಮಾಯಿ

ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ, ಅದರೆ ದೇಹವನ್ನು ಇಲ್ಲಿಗೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ: ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 02, 2022 | 8:20 PM

ಕರ್ನಾಟಕ ಸರ್ಕಾರ ಉಕ್ರೇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಎಲ್ಲಕ್ಕಿಂತ ಮೊದಲು ನವೀನ್ ದೇಹವನ್ನು ರಾಯಭಾರಿ ಕಚೇರಿ ತನ್ನ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ.

ಯುದ್ಧಗ್ರಸ್ಥ ಉಕ್ರೇನಲ್ಲಿ ಮಂಗಳವಾರದಂದು ರಷ್ಯನ್ ಪಡೆಗಳ ಶೆಲ್ಲಿಂಗ್ ಗೆ (Shelling) ಬಲಿಯಾದ ಹಾವೇರಿ (Haveri) ಜಿಲ್ಲೆಯ ನವೀನ್ (Naveen) ಅವರ ಕುಟುಂಬಕ್ಕೆ ಕರ್ನಾಟಕ ಸರ್ಕಾರ ಪರಿಹಾರ ನೀಡುವ ವ್ಯವಸ್ಥೆ ಮಾಡಲಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಲ್ಲಿ ಬುಧವಾರ ಹೇಳಿದರು. ಆದರೆ ಸರ್ಕಾರದ ಮುಂದಿರುವ ಮೊದಲ ಆದ್ಯತೆ ನವೀನ್ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ತರುವುದಾಗಿದೆ. ನವೀನ್ ಅವರ ತಂದೆತಾಯಿ ಮತ್ತು ಕುಟುಂಬದ ಸದಸ್ಯರೆಲ್ಲ ದೇಹವನ್ನು ತರುವ ಏರ್ಪಾಟು ಮಾಡಿ ಅನ್ನುತ್ತಿದ್ದಾರೆ ಎಂದು ಅವರು ಹೇಳಿದರು. ನವೀನ್ ಸ್ನೇಹಿತರು ಮೃತದೇಹದ ಕೆಲ ಪೋಟೋಗಳನ್ನು ಕಳಿಸಿದ್ದಾರೆ. ಅದರಲ್ಲಿರೋದು ನವೀನ್ ಅವರೇನಾ ಅಥವಾ ಬೇರೆಯವರಾ ಅಂತ ದೃಢಪಡಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕರ್ನಾಟಕ ಸರ್ಕಾರ ಉಕ್ರೇನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಎಲ್ಲಕ್ಕಿಂತ ಮೊದಲು ನವೀನ್ ದೇಹವನ್ನು ರಾಯಭಾರಿ ಕಚೇರಿ ತನ್ನ ವಶಕ್ಕೆ ತೆಗೆದುಕೊಳ್ಳಬೇಕಾಗಿದೆ. ಒಮ್ಮೆ ದೇಹ ಸಿಕ್ಕಿತು ಅಂತಾದರೆ ಭಾರತಕ್ಕೆ ರವಾನಿಸಿಸುವುದಕ್ಕೆ ಅಥವಾ ಹೋಗಿ ತರುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.

ಭಾರತ ಸರಕಾರ ತನ್ನ ಯೋಜನಗಳೊಂದಿಗೆ ಮುಂದುವರಿಯುತ್ತಿದೆ. ಅಲ್ಲಿ ಇನ್ನೂ ಸಿಲುಕಿರುವ ವಿದ್ಯಾರ್ಥಿಗಳನ್ನು ಯುದ್ಧ ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿಸುವುದು ಸರ್ಕಾರ ಪ್ರಮುಖ ಉದ್ದೇಶವಾಗಿದೆ ಎಂದು ಬೊಮ್ಮಯಿ ಹೇಳಿದರು

ಇದನ್ನೂ ಓದಿ:  Russia-Ukraine War: ಯುದ್ದ ನಿಲ್ಲಿಸಿ: ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಅನಸ್ತಾಸಿಯಾರಿಂದ ಮನಕಲಕುವ ಸಂದೇಶ