Russia-Ukraine War: ಯುದ್ದ ನಿಲ್ಲಿಸಿ: ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಅನಸ್ತಾಸಿಯಾರಿಂದ ಮನಕಲಕುವ ಸಂದೇಶ

Anastasia Pavlyuchenkova: ಅನೇಕ ರಷ್ಯಾನ್ನರೇ ರಷ್ಯಾದ ಈ ನಡೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್‌ಯುಚೆಂಕೋವಾ ಯುದ್ದವನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

Russia-Ukraine War: ಯುದ್ದ ನಿಲ್ಲಿಸಿ: ರಷ್ಯಾದ ಸ್ಟಾರ್ ಟೆನಿಸ್ ಆಟಗಾರ್ತಿ ಅನಸ್ತಾಸಿಯಾರಿಂದ ಮನಕಲಕುವ ಸಂದೇಶ
Anastasia Pavlyuchenkova
Follow us
TV9 Web
| Updated By: Vinay Bhat

Updated on: Mar 01, 2022 | 8:46 AM

ರಷ್ಯಾ ಆಕ್ರಮಣದಿಂದಾಗಿ ಯುದ್ಧಪೀಡಿತ ಪ್ರದೇಶವಾಗಿರುವ ಉಕ್ರೇನ್‌ನ (Ukraine) ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಷ್ಯಾ ಅಧ್ಯಕ್ಷ ಪುಟಿನ್ (Putin) ಅವರು ದೂರದರ್ಶನದ ಮೂಲಕ ತಾವು ಉಕ್ರೇನ್ ಮೇಲೆ  ದಾಳಿ ಮಾಡುತ್ತಿರುವುದಾಗಿ ಘೋಷಿಸಿ ಆರಂಭವಾದ ಯುದ್ಧ ಇನ್ನೂ ಅಂತ್ಯಕಂಡಿಲ್ಲ. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದರೂ ಶಸ್ತ್ರಾಸ್ತ್ರಗಳಲ್ಲಿ ಪ್ರಬಲವಾಗಿರುವ ರಷ್ಯಾದೊಂದಿಗೆ ಉಕ್ರೇನ್‌ ಏಕಾಂಗಿಯಾಗಿ ಹೋರಾಡುತ್ತಿದೆ. ಇತ್ತ ಉಕ್ರೇನ್-ರಷ್ಯಾ ದೇಶಗಳ ನಡುವೆ ನಡೆದ ಶಾಂತಿ ಸಭೆ ಅಪೂರ್ಣವಾಗಿದ್ದು, ಯುದ್ಧ ಮುಂದುವರೆದಿದೆ. ಉಕ್ರೇನ್ ರಾಜಧಾನಿ ಕೀವ್​ ಮೇಲಿನ ದಾಳಿ ರಷ್ಯಾ ಸೇನೆ ಸಿದ್ಧತೆ ಮಾಡಿಕೊಂಡಿದೆ. ನಗರದಿಂದ ಹೊರಗೆ ಹೋಗಬೇಕು ಎಂದು ಜನರಿಗೆ ರಷ್ಯಾ ಸೇನೆ ತಾಕೀತು ಮಾಡುತ್ತಿದೆ. ರಷ್ಯಾ ಸೇನೆಯ ದಾಳಿಗೆ ಉಕ್ರೇನ್ ಸೇನೆ ಪ್ರತಿರೋಧ ತೋರುತ್ತಿದೆ. ಹೀಗಿರುವಾಗ ಅನೇಕ ರಷ್ಯಾನ್ನರೇ ರಷ್ಯಾದ ಈ ನಡೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಅನಸ್ತಾಸಿಯಾ ಪಾವ್ಲ್‌ಯುಚೆಂಕೋವಾ (Anastasia Pavlyuchenkova) ಯುದ್ದವನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅನಸ್ತಾಸಿಯಾ, “ನಾನು ಚಿಕ್ಕಂದಿನಿಂದಲೂ ಟೆನಿಸ್ ಆಡುತ್ತಿದ್ದೆ. ಇಂದಿನ ವರೆಗೆ ನಾನು ರಷ್ಯಾವನ್ನು ಪ್ರತಿನಿಧಿಸಿದ್ದೇನೆ. ಇದು ನನ್ನ ಮನೆ ಮತ್ತು ನನ್ನ ದೇಶ. ಆದರೀಗ ಪರಿಸ್ಥಿತಿ ಬದಲಾಗುತ್ತಿದೆ. ನನ್ನ ಸ್ನೇಹಿತರು ಮತ್ತು ಕುಟುಂಬದವರಂತೆ ನಾನುಕೂಡ ಭಯದಲ್ಲಿದ್ದೇನೆ. ಹಾಗೆಂದು ನನ್ನ ನಿಲುವನ್ನು ನಾನು ಸ್ಪಷ್ಟವಾಗಿ ಹೇಳಲು ಹೆದರುವುದಿಲ್ಲ. ನಾನು ಈ ಯುದ್ಧ ಮತ್ತು ಹಿಂಸೆಯ ವಿರುದ್ಧವಾಗಿದ್ದೇನೆ.”

“ವೈಯಕ್ತಿಕ ಮಹತ್ವಾಕಾಂಕ್ಷೆಗಳು ಅಥವಾ ರಾಜಕೀಯಕ್ಕಾಗಿ ಈರೀತಿಯ ಹಿಂಸೆಯನ್ನು ನನ್ನಿಂದ ಸಮರ್ಥಿಸಲು ಸಾಧ್ಯವಿಲ್ಲ. ಇದು ನಮ್ಮ ಜೀವನವನ್ನು ಮಾತ್ರವಲ್ಲ, ನಮ್ಮ ಮಕ್ಕಳ ಭವಿಷ್ಯವನ್ನೂ ಕಸಿದುಗೊಳ್ಳುತ್ತದೆ. ಈರೀತಿಯ ಕಷ್ಟದ ಸಂದರ್ಭದಲ್ಲಿ ಹೇಗೆ ಸಹಾಯ ಮಾಡಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ರಾಜಕಾರಣಿ ಅಲ್ಲ, ಸಾರ್ವಜನಿಕ ವ್ಯಕ್ತಿಯೂ ಅಲ್ಲ, ಇದರಲ್ಲಿ ನನಗೆ ಅನುಭವ ಕೂಡ ಇಲ್ಲ. ನಾನು ಕೇವಲ ಟೆನಿಸ್ ಆಡುವ ಕ್ರೀಡಾಪಟುವಷ್ಟೆ. ಹಿಂಸೆ ಮತ್ತು ಯುದ್ಧವನ್ನು ನಿಲ್ಲಿಸಿ,” ಎಂದು ಬರೆದುಕೊಂಡಿದ್ದಾರೆ.

ಶಾಂತಿ ಸಂಧಾನ ಸಭೆ ಅಪೂರ್ಣ:

ರಷ್ಯಾ ಮತ್ತು ಉಕ್ರೇನ್ ನಿಯೋಗಗಳ ಮಧ್ಯೆ ಬೆಲರೂಸ್ ಗಡಿಯಲ್ಲಿ ಶಾಂತಿ ಮಾತುಕತೆ ನಡೆಯಿತು.ಉಕ್ರೇನ್ ದೇಶದ ಸೇನೆಯು ಶಸ್ತ್ರ ತ್ಯಜಿಸಬೇಕು. ತಟಸ್ಥ ಸ್ಥಿತಿ ಖಾತ್ರಿಪಡಿಸಬೇಕೆಂದು ರಷ್ಯಾ ಷರತ್ತು ವಿಧಿಸಿತು. ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಬೇಕು. ಸೇನೆಯನ್ನ ವಾಪಸ್ ಕರೆಸಿಕೊಳ್ಳಬೇಕು ಎಂದು ಉಕ್ರೇನ್ ತನ್ನ ಷರತ್ತು ಹೇಳಿತು. ಹೀಗಾಗಿ ಉಕ್ರೇನ್, ರಷ್ಯಾದ ಶಾಂತಿ ಸಂಧಾನ ಸಭೆ ಅಪೂರ್ಣವಾಗಿದೆ.

ಭಾರತಕ್ಕೆ ಆಗಮಿಸಲಿವೆ ಮೂರು ವಿಮಾನಗಳು:

ವಿದ್ಯಾಭ್ಯಾಸಕ್ಕಾಗಿ ಹಾಗೂ ಇನ್ನಿತರ ಕಾರಣಗಳಿಂದ ಉಕ್ರೇನ್‌ಗೆ ತೆರಳಿದವರು ತಮ್ಮ ತಾಯಿನಾಡಿಗೆ ಮರಳಲು ಸಾಧ್ಯವಾಗದೆ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಹೀಗೆ ಸಾವಿರಾರು ಭಾರತೀಯರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇಂದು 3 ವಿಮಾನಗಳು ಭಾರತಕ್ಕೆ ಬರಲಿವೆ. ಈಗಾಗಲೇ 1406 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ಇಂದು 3 ವಿಮಾನಗಳು ಭಾರತಕ್ಕೆ ಬರಲಿವೆ. 6 ವಿಮಾನಗಳು ಈಗಾಗಲೇ ಬಂದಿದ್ದು ಆರನೇ ವಿಮಾನದಲ್ಲಿ ಐವರು ಕನ್ನಡಿಗರು ಇದ್ದರು. ಇನ್ನೂ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಸತತ ಪ್ರಯತ್ನ ನಡೆಸಿದೆ. ಜೊತೆಗೆ ಉಕ್ರೇನ್‌ಗೆ ಪರಿಹಾರ ಸಾಮಾಗ್ರಿಯನ್ನು ಸಾಗಿಸಲು ಯೋಚಿಸಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಭಾರತೀಯರಿಗೆ ಇಲ್ಲಿಂದಲೇ ಪರಿಹಾರ ಕಿಟ್ ಕಳುಹಿಸಲು ನಿರ್ಧರಿಸಲಾಗಿದ್ದು ಇಂದು ಮೊದಲ ಕಿಟ್ ಕಳುಹಿಸಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಉಕ್ರೇನ್‌ ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಇನ್ನಿಲದ ಪ್ರಯತ್ನ ಮಾಡುತ್ತಿದೆ.

IPL 2022: ಗುಜರಾತ್ ಟೈಟಾನ್ಸ್​ಗೆ ಬಿಗ್ ಶಾಕ್: 2 ಕೋಟಿಗೆ ಖರೀದಿಸಿದ ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ