AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Russia-Ukraine War: ಪಂದ್ಯದ ನಡುವೆ ಉಕ್ರೇನ್ ಸ್ಟ್ರೈಕರ್ ಮೈದಾನಕ್ಕೆ ಬಂದಾಗ ನಡೆಯಿತು ವಿಶೇಷ ಘಟನೆ

Roman Yaremchuk: ರಷ್ಯಾ ಅಧ್ಯಕ್ಷ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವುದಾಗಿ ಘೋಷಿಸಿ ಆರಂಭವಾದ ಯುದ್ಧ ಇನ್ನೂ ಅಂತ್ಯಕಂಡಿಲ್ಲ. ಸಾವು ನೋವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರೈಮಿರಾ ಲಿಗಾ ಹಣಾಹಣಿಯಲ್ಲಿ ಉಕ್ರೇನ್ನ ರೋಮನ್ ಯಾರೆಮ್ಚುಕ್ ಅವರಿಗೆ ವಿಟೋರಿಯಾ ಎಸ್ಸಿ ವಿರುದ್ಧದ ಪಂದ್ಯದಲ್ಲಿ ಬೆನ್ಫಿಕಾ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ.

Russia-Ukraine War: ಪಂದ್ಯದ ನಡುವೆ ಉಕ್ರೇನ್ ಸ್ಟ್ರೈಕರ್ ಮೈದಾನಕ್ಕೆ ಬಂದಾಗ ನಡೆಯಿತು ವಿಶೇಷ ಘಟನೆ
Roman Yaremchuk Ukraine
TV9 Web
| Edited By: |

Updated on: Feb 28, 2022 | 2:19 PM

Share

ರಷ್ಯಾ ಆಕ್ರಮಣದಿಂದಾಗಿ ಯುದ್ಧಪೀಡಿತ ಪ್ರದೇಶವಾಗಿರುವ ಉಕ್ರೇನ್‌ನ (Ukraine) ಸ್ಥಿತಿ ಚಿಂತಾಜನಕವಾಗಿದೆ. ಗುರುವಾರ ರಷ್ಯಾ ಅಧ್ಯಕ್ಷ ಪುಟಿನ್ (Putin) ಅವರು ದೂರದರ್ಶನದ ಮೂಲಕ ತಾವು ಉಕ್ರೇನ್ ಮೇಲೆ  ದಾಳಿ ಮಾಡುತ್ತಿರುವುದಾಗಿ ಘೋಷಿಸಿ ಆರಂಭವಾದ ಯುದ್ಧ ಇನ್ನೂ ಅಂತ್ಯಕಂಡಿಲ್ಲ. ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದರೂ ಶಸ್ತ್ರಾಸ್ತ್ರಗಳಲ್ಲಿ ಪ್ರಬಲವಾಗಿರುವ ರಷ್ಯಾದೊಂದಿಗೆ ಉಕ್ರೇನ್‌ ಏಕಾಂಗಿಯಾಗಿ ಹೋರಾಡುತ್ತಿದೆ. ಈ ಮಧ್ಯೆ ಪ್ರೈಮಿರಾ ಲಿಗಾ ಹಣಾಹಣಿಯಲ್ಲಿ ವಿಶೇಷ ಘಟನೆಯೊಂದು ನಡೆದಿದೆ. ಉಕ್ರೇನ್‌ನ ರೋಮನ್ ಯಾರೆಮ್‌ಚುಕ್ (Roman Yaremchuk) ಅವರಿಗೆ ವಿಟೋರಿಯಾ ಎಸ್‌ಸಿ ವಿರುದ್ಧದ ಪಂದ್ಯದಲ್ಲಿ ಬೆನ್‌ಫಿಕಾ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಇಡೀ ಉಕ್ರೇನ್ ದೇಶವೇ ಕಣ್ಣೀರಿನಲ್ಲಿ ಮುಳುಗುತ್ತಿದ್ದರೆ ಇತ್ತ ಪ್ರೈಮಿರಾ ಲಿಗಾನಲ್ಲಿ ನಡೆದ ಈ ಘಟನೆ ಮತ್ತಷ್ಟು ಭಾವುಕರನ್ನಾಗಿ ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉಕ್ರೇನಿಯನ್ ಸ್ಟ್ರೈಕರ್ ಆರಂಭದಲ್ಲಿ ಆಡುವ 11ರ ಬಳಗದಲ್ಲಿ ಇರಲಿಲ್ಲ.  ಆದರೆ ಇವರು ಪಂದ್ಯದ 62ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಪ್ರವೇಶ ಪಡೆದರು. ಇವರು ಮೈದಾನಕ್ಕೆ ಕಾಲಿಟ್ಟಿದ್ದೇ ತಡ ಬೆನ್‌ಫಿಕಾ ತಂಡದ ಬೆಂಬಲಿಗರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಯಾರೆಮ್‌ಚುಕ್ ತಾಯ್ನಾಡನ್ನು ಬೆಂಬಲಿಸಿ ಬೆನ್‌ಫಿಕಾ ಬೆಂಬಲಿಗರು ಗೌರವ ಸೂಚಿಸಿದರು. ರೋಮನ್ ಯಾರೆಮ್‌ಚುಕ್​ಗೆ ನಾಯಕನ ಆರ್ಮ್‌ಬ್ಯಾಂಡ್ ಅನ್ನು ಸಹ ನೀಡಲಾಯಿತು. ಈ ಸಂದರ್ಭ ದುಃಖ ತಾಳಲಾರದೆ ಇವರು ಕೂಡ ಕಣ್ಣೀರು ಸುರಿಸಿದರು.

ಬೆನ್​​ಫಿಕಾ ತಂಡವು  ಎಸ್ಟಾಡಿಯೊ ಡ ಲುಝ್ ನಲ್ಲಿ ನಡೆದ ಪಂದ್ಯವನ್ನು 3-0 ಅಂತರದಿಂದ ಗೆದ್ದುಕೊಂಡಿತು. ಡಾರ್ವಿನ್ ನುನೆಝ್  ಎರಡು ಗೋಲು ಗಳಿಸಿದರು. ಇದೇ ವೇಳೆ ಗೊನ್ಕಾಲೊ ರಾಮೋಸ್ ಕೂಡ ಗೋಲು ದಾಖಲಿಸಿದರು. ರಷ್ಯಾ ವಿರುದ್ಧ ಇಂಗ್ಲೆಂಡ್ ತನ್ನ ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಘೋಷಿಸುವುದರೊಂದಿಗೆ ಯುರೋಪಿನ ಹಲವು ಫುಟ್ಬಾಲ್ ರಾಷ್ಟ್ರಗಳಿಂದ ಉಕ್ರೇನ್ ಬೆಂಬಲವನ್ನು ಪಡೆದುಕೊಂಡಿದೆ.

ಖಾರ್ಕಿವ್ ಬಿಟ್ಟು ಕೊಡದ ಉಕ್ರೇನ್:

ಉಕ್ರೇನ್​ನ 2ನೇ ಅತಿದೊಡ್ಡ ನಗರ ಖಾರ್ಕಿವ್ ಅನ್ನು ವಶಪಡಿಸಿಕೊಳ್ಳುವ ರಷ್ಯಾ ಸೇನೆಯ ಪ್ರಯತ್ನ ವಿಫಲಗೋಳಿಸಿದ್ದು, ಖಾರ್ಕಿವ್ ತಮ್ಮ ವಶದಲ್ಲಿರುವುದಾಗಿ ಉಕ್ರೇನ್ ಘೋಷಿಸಿದೆ. ರಷ್ಯಾ ಶಾಂತಿ ಮಾತುಕತೆಯ ಹಾದಿಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದೆ ಎಂದು ಆರೋಪಿಸಿರುವ ಉಕ್ರೇನ್ ಸೇನಾ ಮೂಲಗಳು, ರಷ್ಯಾ ಸೇನೆ ನಮ್ಮ ನಾಗರಿಕ ಮತ್ತು ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ. ಆದರೆ ರಷ್ಯಾ ಸೇನೆಯ ಎಲ್ಲಾ ಕಾರ್ಯಾಚರಣೆಯನ್ನು ವಿಫಲಗೊಳಿಸಿರುವುದಾಗಿ ಉಕ್ರೇನ್ ತಿರುಗೇಟು ನೀಡಿದೆ.

ಮಾತುಕತೆಗೆ ಸಜ್ಜಾದ ವೇದಿಕೆ:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಪರಮಾಣು ದಾಳಿ ಬೆದರಿಕೆಯ ಬಳಿಕ ಉಕ್ರೇನ್​ ಶಾಂತಿ ಮಾತುಕತೆಗೆ ಒಪ್ಪಿಗೆ ನೀಡಿದ್ದು, ಬೆಲಾರಸ್​ ಗಡಿಯಲ್ಲಿ ಉಭಯ ರಾಷ್ಟ್ರಗಳ ನಿಯೋಗ ಮಾತುಕತೆಗೆ ಮುಂದಾಗಲಿವೆ. ಸಂಧಾನಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ನಿಯೋಗಗಳ ಆಗಮನಕ್ಕೆ ಕಾದಿದ್ದೇವೆ ಎಂದು ಬೆಲಾರಸ್​ ಸರ್ಕಾರ ತಿಳಿಸಿದೆ. ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನಿಯನ್ ನಿಯೋಗ ಬೆಲಾರಸ್‌ಗೆ ತಲುಪಿದೆ. ಇನ್ನು ರಷ್ಯಾದ ವಿದೇಶಾಂಗ, ರಕ್ಷಣೆ ಮತ್ತು ಅಧ್ಯಕ್ಷರ ಕಚೇರಿ ಅಧಿಕಾರಿಗಳನ್ನೊಳಗೊಂಡ ನಿಯೋಗ ಕೂಡ ಬೆಲಾರಸ್​ನಲ್ಲಿದೆ ಎಂದು ತಿಳಿದು ಬಂದಿದೆ. ಉಭಯ ದೇಶಗಳ ಮಧ್ಯೆ ಯುದ್ಧ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಸಂಧಾನ ಸಭೆ ಇದಾಗಿದೆ.

Follow Us
TV9 Web
TV9 Web

TV9 Kannada

Read More
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!