Health Tips: ಆಹಾರ ಸೇವನೆ ನಂತರ ಹೊಟ್ಟೆ ಭಾರವಾದಂತೆ ಆಗುತ್ತಿದ್ದರೆ ಈ ಮನೆಮದ್ದುಗಳ ಸಹಾಯ ಪಡೆದುಕೊಳ್ಳಿ

Home Remedies: ನೀವು ಆಹಾರ ಸೇವಿಸಿದ ನಂತರ ಹೊಟ್ಟೆ ಭಾರವಾದ ಭಾವನೆ ಉಂಟಾಗಬಹುದು. ಇದನ್ನು ಹೋಗಲಾಡಿಸಲು ವೈದ್ಯರ ಸಲಹೆಯ ಜೊತೆಗೆ ಮನೆಮದ್ದುಗಳನ್ನೂ ಅಳವಡಿಸಿಕೊಳ್ಳಬಹುದು. ಮನೆಯಲ್ಲಿ ಅದನ್ನು ತೊಡೆದುಹಾಕಲು ಕೆಲವು ಸಲಹೆಗಳನ್ನು ಇಲ್ಲಿ ತಿಳಿಯಿರಿ.

| Updated By: ganapathi bhat

Updated on: Mar 01, 2022 | 8:17 AM

ಜೇನುತುಪ್ಪ: ಆಹಾರವನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿನ ಭಾರವನ್ನು ತೆಗೆದುಹಾಕುವಲ್ಲಿ ಜೇನುತುಪ್ಪ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಇದಕ್ಕಾಗಿ ಆಹಾರ ಸೇವಿಸಿದ ನಂತರ ಸ್ವಲ್ಪ ಜೇನುತುಪ್ಪವನ್ನು ಸವಿಯುವುದನ್ನು ರೂಢಿಸಿಕೊಳ್ಳಿ. ಇದು ಭಾರದ ಹೊರತಾಗಿ ಇತರ ಹೊಟ್ಟೆಯ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ.

1 / 5
ಏಲಕ್ಕಿ: ಚಹಾ ಅಥವಾ ಆಹಾರದ ರುಚಿಯನ್ನು ಹೆಚ್ಚಿಸುವ ಹಸಿರು ಏಲಕ್ಕಿ, ಹೊಟ್ಟೆಯ ಭಾರವನ್ನು ಹೋಗಲಾಡಿಸಲು ಕೂಡ ಸಹಾಯ ಮಾಡುತ್ತದೆ. ಅದನ್ನು ಕೂಡ ಔಷಧವಾಗಿ ಬಳಸಬಹುದು. ಊಟ, ತಿಂಡಿ ತಿಂದ ನಂತರ ನೀವು ಹೊಟ್ಟೆಯ ಭಾರದಿಂದ ತೊಂದರೆಗೊಳಗಾಗಿದ್ದರೆ, ಹಸಿರು ಏಲಕ್ಕಿಯನ್ನು ಅಗಿಯಿರಿ. ಹೀಗೆ ಮಾಡುವುದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ.

2 / 5
ಓಮದ ಕಾಳು ಮತ್ತು ಕಪ್ಪು ಉಪ್ಪು: ಈ ಎರಡೂ ವಸ್ತುಗಳು ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ. ಗ್ಯಾಸ್ ಮೇಲೆ ಒಂದು ಗ್ಲಾಸ್ ನೀರನ್ನು ಇಟ್ಟು ಕಾಯಲು ಬಿಡಿ. ಮತ್ತು ಅದಕ್ಕೆ ಎರಡು ಚಮಚ ಓಮದ ಕಾಳು ಹಾಗೂ ಅರ್ಧ ಚಮಚ ಕಪ್ಪು ಉಪ್ಪನ್ನು ಬೆರೆಸಿ ಕುದಿಸಿ. ನಂತರ ಕುಡಿಯಿರಿ. ಇದರಿಂದ ಹೊಟ್ಟೆ ಭಾರವಾಗುವಂತಹ ಸಮಸ್ಯೆಗಳು ಪರಿಹಾರ ಆಗುತ್ತವೆ.

3 / 5
ಸೋಂಪು ಕಾಳುಗಳು ಮತ್ತು ಸಕ್ಕರೆ ಕ್ಯಾಂಡಿ: ಸಾಮಾನ್ಯವಾಗಿ ಹೊಟೇಲುಗಳಲ್ಲಿ ಊಟ, ತಿಂಡಿಯ ನಂತರ ಈ ಕಾಳುಗಳನ್ನು ಬಿಲ್ ಜೊತೆಗೆ ನೀಡುತ್ತಾರೆ. ಅದನ್ನು ನೀವು ತಿಂದೂ ಇರುತ್ತೀರಿ. ಸೋಂಪು ಮತ್ತು ಸಕ್ಕರೆ ಮಿಠಾಯಿಗಳನ್ನು ಒಟ್ಟಿಗೆ ತಿಂದರೆ ಹೊಟ್ಟೆಯ ಭಾರ ಹಗುರಾದಂತೆ ಆಗುತ್ತದೆ. ಊಟ ಅಥವಾ ತಿಂಡಿಯ ನಂತರ ಸೋಂಪು ಕಾಳುಗಳನ್ನು ತುಂಡು ಕಲ್ಲುಸಕ್ಕರೆಯೊಂದಿಗೆ ಕೂಡ ತಿನ್ನಬಹುದು. ಇದರಿಂದ ಇತರ ಹೊಟ್ಟೆಯ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ.

4 / 5
ಅಗಸೆ ಬೀಜಗಳು: ಆಗಾಗ್ಗೆ ನಿಮಗೆ ಹೊಟ್ಟೆ ಭಾರವಾದಂತೆ ಅನುಭವ ಆಗುವ ಸಮಸ್ಯೆ ಇರಬಹುದು. ನೀವು ಅದನ್ನು ಮೂಲದಿಂದ ತೊಡೆದುಹಾಕಲು ಅಗಸೆ ಬೀಜಗಳ ಸಹಾಯವನ್ನು ಪಡೆದುಕೊಳ್ಳಬಹುದು. ಅಗಸೆ ಬೀಜಗಳನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯಬಹುದು.

5 / 5
Follow us
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ

ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?

ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್

ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ

ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ

ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ

ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!

ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ