Mustard seed: ಸಾಸಿವೆ ಇಲ್ಲದೆ ಒಗ್ಗರಣೆಯೇ ಇಲ್ಲ ಅಲ್ವಾ!? ಹೌದು ಈ ಸಾಸಿವೆಯಲ್ಲಿದೆ ಆರೋಗ್ಯದ ಖಜಾನೆ, ಏನದು? ಇಲ್ಲಿದೆ ವಿವರ

ಉತ್ತರ ಭಾರತದಲ್ಲಿ ಅಡುಗೆಯಲ್ಲಿ ಸಾಸಿವೆ ಎಣ್ಣೆಯ ಬಳಕೆ ಹೆಚ್ಚು. ಇದರ ಸೊಪ್ಪನ್ನು ತರಕಾರಿಯಂತೆ ಉಪಯೋಗಿಸುತ್ತಾರೆ. ಸಾಸಿವೆ ಕಾಳು ಹಾಗೂ ಸಾಸಿವೆ ಎಣ್ಣೆಯಲ್ಲಿ ಅಸಾಮಾನ್ಯ ಔಷಧೀಯ ಗುಣಗಳು ಇವೆ. ಉಪ್ಪಿನ ಕಾಯಿ ಕೆಡದಂತೆ ಇರಲು ಉಪ್ಪು ಎಷ್ಟು ಮುಖ್ಯವೋ ಹಾಗೆ ಸಾಸಿವೆಯದ್ದೂ ಪ್ರಧಾನ ಪಾತ್ರವಿದೆ.

Mustard seed: ಸಾಸಿವೆ ಇಲ್ಲದೆ ಒಗ್ಗರಣೆಯೇ ಇಲ್ಲ ಅಲ್ವಾ!? ಹೌದು ಈ ಸಾಸಿವೆಯಲ್ಲಿದೆ ಆರೋಗ್ಯದ ಖಜಾನೆ, ಏನದು? ಇಲ್ಲಿದೆ ವಿವರ
ಸಾಸಿವೆ ಇಲ್ಲದೆ ಒಗ್ಗರಣೆಯೇ ಇಲ್ಲ ಅಲ್ವಾ!? ಹೌದು ಈ ಸಾಸಿವೆಯಲ್ಲಿದೆ ಆರೋಗ್ಯದ ಖಜಾನೆ, ಏನದು? ಇಲ್ಲಿದೆ ವಿವರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 15, 2022 | 6:06 AM

ಸಾಸಿವೆಯು ಬ್ರಾಸೀಕಾ ಮತ್ತು ಸಿನ್ಯಾಪಿಸ್ ಪಂಗಡಗಳಲ್ಲಿನ ಒಂದು ಸಸ್ಯ ಜಾತಿ. ಇದರ ಸಣ್ಣದಾದ ಬೀಜಗಳನ್ನು ಒಂದು ಸಂಬಾರ ಪದಾರ್ಥವಾಗಿ ಬಳಸಲಾಗುತ್ತದೆ ಮತ್ತು, ಅವುಗಳನ್ನು ಅರೆದು ನೀರು, ವಿನಿಗರ್ ಅಥವಾ ಇತರ ದ್ರವಗಳೊಂದಿಗೆ ಸೇರಿಸಿ ಮಸ್ಟರ್ಡ್ ಎಂಬ ವ್ಯಂಜನವನ್ನು ತಯಾರಿಸಲಾಗುತ್ತದೆ. ಬೀಜಗಳನ್ನು ಕಿವುಚಿ ಸಾಸಿವೆ ಎಣ್ಣೆಯನ್ನೂ ತಯಾರಿಸಲಾಗುತ್ತದೆ, ಮತ್ತು ಎಲೆಗಳನ್ನು ಸೊಪ್ಪಾಗಿಯೂ ತಿನ್ನಬಹುದು (Mustard seed).

ಈ ಸಾಸಿವೆ ವೈದ್ಯಕೀಯವಾಗಿ ಬಹಳ ಪ್ರಯೋಜನಕಾರಿ. ಪ್ರಕೃತಿ ಚಿಕಿತ್ಸೆಯಲ್ಲಿ ಇದರ ಉಪಯೋಗ ಅತ್ಯಮೂಲ್ಯ, ಇದನ್ನು ಮಂಡಿ ನೋವು (ಆರ್ಥರೈಟೀಸ್) ನಿವಾರಣೆಗಾಗಿ ಸಾಸಿವೆ ಪಟ್ಟಿ ಮಾಡಿ ಉಪಯೋಗಿಸುತ್ತಾರೆ. ಈ ಸಾಸಿವೆ ಪಟ್ಟಿಯು ಇಂತಹ ನೋವುಗಳಲ್ಲಿ ಧೀರ್ಘಕಾಲಿಕ ಉಪಯೋಗ ಸಿಗುತ್ತದೆ.

ಸಂಸ್ಕೃತ ಭಾಷೆಯಲ್ಲಿ ರಾಜಿಕಾ, ರಾಜಿ, ಆಸುರಿ, ತೀಕ್ಷ್ಣ ಗಂಧಾ ಎಂದು ಕರೆಯಲ್ಪಡುವ ಈ ಕಾಳುಗಳಿಗೆ ಕನ್ನಡ ಭಾಷೆಯಲ್ಲಿ ಸಾಸಿವೆ, ಸಾಸಿವೆ ಕಾಳು ಎಂದೂ ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ರಾಯಿ, ಮೊಹರಿ ಹಾಗೂ ಆಂಗ್ಲ ಭಾಷೆಯಲ್ಲಿ Indian mustard, Black Mustard ಎನ್ನುತ್ತಾರೆ. ಸಾಸಿವೆ ಕಾಳಿನಲ್ಲಿ ಕಪ್ಪು ಸಾಸಿವೆ, ಕಂದು ಬಣ್ಣದ ಸಾಸಿವೆ ಪ್ರಮುಖವಾಗಿ ಕಂಡು ಬರುತ್ತವೆ. ಇದರಲ್ಲಿ ಹಳದಿ , ಬಿಳಿ ಸಾಸಿವೆ ಕೂಡ ಇವೆ. ಸಾಸಿವೆ ಇಲ್ಲದೇ ಒಗ್ಗರಣೆಯೇ ಇಲ್ಲವೆನ್ನಬಹುದು.

ಉತ್ತರ ಭಾರತದಲ್ಲಿ ಅಡುಗೆಯಲ್ಲಿ ಸಾಸಿವೆ ಎಣ್ಣೆಯ ಬಳಕೆ ಹೆಚ್ಚು. ಇದರ ಸೊಪ್ಪನ್ನು ತರಕಾರಿಯಂತೆ ಉಪಯೋಗಿಸುತ್ತಾರೆ. ಸಾಸಿವೆ ಕಾಳು ಹಾಗೂ ಸಾಸಿವೆ ಎಣ್ಣೆಯಲ್ಲಿ ಅಸಾಮಾನ್ಯ ಔಷಧೀಯ ಗುಣಗಳು ಇರುವ ಕಾರಣ ಸಾಸಿವೆಗೆ ಅಡುಗೆ ಮನೆಯ ವೈದ್ಯೆ ಎಂದು ಹೇಳಲಾಗುತ್ತದೆ. ಉಪ್ಪಿನ ಕಾಯಿ ಕೆಡದಂತೆ ಇರಲು ಉಪ್ಪು ಎಷ್ಟು ಮುಖ್ಯವೋ ಹಾಗೆ ಸಾಸಿವೆಯದ್ದೂ ಪ್ರಧಾನ ಪಾತ್ರವಿದೆ.

ಸಾಸಿವೆಯ ಪ್ರಯೋಜನಗಳು

  1. * ಕಣ್ಣಿನ ರೆಪ್ಪೆಗಳ ಮೇಲೆ ಆಗುವ ಕುರು/ಕಣ್ಣ ಚುಟ್ಟಲಿ ಆದಾಗ ಸಾಸಿವೆ ಪುಡಿಯನ್ನು ತುಪ್ಪದಲ್ಲಿ ಪೇಸ್ಟ್ ಮಾಡಿ ಹಚ್ಚಬೇಕು. 
  2. * ಹಲ್ಲು ನೋವಿಗೆ ಸಾಸಿವೆ ಕಾಳು ಅಗಿದು ಉಗುಳ ಬೇಕು , ಅಥವಾ ಸಾಸಿವೆ ಪುಡಿ ನೀರಿನಲ್ಲಿ ಬೆರೆಸಿ ಮುಕ್ಕಳಿಸಬಹುದು. 
  3. * ತಲೆ ನೋವಿಗೆ ಸಾಸಿವೆ ಅರೆದು ಹಣೆಯ ಮೇಲೆ ಲೇಪಿಸಬೇಕು. ಮಕ್ಕಳ ಕಫ ಕೆಮ್ಮುಗಳಿಗೆ ಸಾಸಿವೆ ಎಣ್ಣೆಯನ್ನು ತುಸು ಬೆಚ್ಚಗೆ ಮಾಡಿ ಎದೆಗೆ ಮಾಲಿಶ್ ಮಾಡ ಬಹುದು. 
  4. * ಚೇಳು ಕಚ್ಚಿದಾಗ ಸಾಸಿವೆ ಕಾಳು ಹತ್ತಿ ಗಿಡದ ಎಲೆಗಳನ್ನು ಅರೆದು ಲೇಪಿಸಬೇಕು.  ಹಿಮ್ಮಡಿ ನೋವಿಗೆ ಸಾಸಿವೆ ಅರೆದು ಕರ್ಪುರ ಸೇರಿಸಿ ಲೇಪಿಸಬಹುದು. 
  5. * ಚರ್ಮ ರೋಗಗಳಿಗೆ ಸಾಸಿವೆ ಹಿಟ್ಟಿನಲ್ಲಿ ಹಸುವಿನ ಹಳೆಯ ತುಪ್ಪ ಬೆರೆಸಿ ಮುಲಾಮು ತಯಾರಿಸಿ ಹಚ್ಚ ಬೇಕು.  ಕೈ ಕಾಲು ಉಳುಕಿದ ಬಾವು ನೋವುಗಳಿಗೆ ಔಡಲ ಎಲೆಗಳನ್ನು ಬೆಚ್ಚಗೆ ಮಾಡಿ ಸಾಸಿವೆ ಅರೆದು ಎಲೆಗಳ ಮೇಲೆ ಲೇಪಿಸಿ ಕಟ್ಟಬೇಕು. 
  6. * ಸಾಸಿವೆ ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳು, ಲಕ್ಕಿ ಗಿಡದ ಎಲೆಗಳನ್ನು ಹಾಕಿ ಕುದಿಸಿ ನಂತರ ಪಚ್ಛ ಕರ್ಪೂರ ಬೆರೆಸಿದರೆ ನೋವು ನಿವಾರಕ ಎಣ್ಣೆ ಸಿದ್ಧ. 
  7. * ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಸಮ ಪ್ರಮಾಣದಲ್ಲಿ ಸೇರಿಸಿ ಮೆಂತೆ ಕಾಳು, ಕರಿಬೇವಿನ ಎಲೆ, ಮದರಂಗಿ ಎಲೆ, ದಾಸವಾಳದ ಹೂವು ಮತ್ತು ಎಲೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿದರೆ ಉತ್ತಮವಾದ ಹೇರ್ ಆಯಿಲ್ ಸಿದ್ಧವಾಗುತ್ತದೆ. ಇದಲ್ಲದೇ ಇನ್ನೂ ಹಲವಾರು ರೀತಿಯಲ್ಲಿ ಸಾಸಿವೆ ಕಾಳು ಹಾಗೂ ಎಣ್ಣೆ ಆಹಾರ ಹಾಗೂ ಔಷಧೀಯ ರೂಪದಲ್ಲಿ ಬಳಕೆಯಾಗುತ್ತಿವೆ. ( ಸಂಗ್ರಹ ಮಾಹಿತಿ -ಎಸ್​​ ಹೆಚ್​ ನದಾಫ್)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ