Garbhageete: 4 ತಿಂಗಳ ಗರ್ಭಿಣಿಯರ ಆಹಾರ ಪದ್ಧತಿ ಹೇಗಿರಬೇಕು? ತಜ್ಞರು ಏನಂತಾರೆ?

ಗರ್ಭಿಣಿಯರು ತಮ್ಮ ನಾಲ್ಕನೇ ತಿಂಗಳಿನಲ್ಲಿ ಹೇಗಿರಬೇಕು, ಎಂತಹ ಆಹಾರ ಸೇವಿಸಬೇಕು?, ಯಾವ ಆಹಾರ ಸೇವಿಸದರೆ ಏನೆಲ್ಲಾ ತೊಂದರೆಗಳು ಬಾಧಿಸಬಹುದು ಎಂಬುದೆಲ್ಲರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

Garbhageete: 4 ತಿಂಗಳ ಗರ್ಭಿಣಿಯರ ಆಹಾರ ಪದ್ಧತಿ ಹೇಗಿರಬೇಕು? ತಜ್ಞರು ಏನಂತಾರೆ?
Kamala Bharadwaj
Follow us
| Updated By: ನಯನಾ ರಾಜೀವ್

Updated on: Jun 29, 2022 | 8:30 PM

ಗರ್ಭಿಣಿಯರು ತಮ್ಮ ನಾಲ್ಕನೇ ತಿಂಗಳಿನಲ್ಲಿ ಹೇಗಿರಬೇಕು, ಎಂತಹ ಆಹಾರ ಸೇವಿಸಬೇಕು?, ಯಾವ ಆಹಾರ ಸೇವಿಸದರೆ ಏನೆಲ್ಲಾ ತೊಂದರೆಗಳು ಬಾಧಿಸಬಹುದು ಎಂಬುದೆಲ್ಲರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.

 ಸಿಹಿ: ಗರ್ಭಿಣಿಯರು ತುಂಬಾ ಸಿಹಿಯನ್ನು ಸೇವನೆ ಮಾಡಿದರೆ ಅದರಿಂದ ಮಧುಮೇಹ ಮೂತ್ರಕೋಶದ ರೋಗಗಳು, ಸ್ಥೂಲಕಾಯ ಇವೆಲ್ಲವೂ ಕಾಣಿಸಿಕೊಳ್ಳಬಹುದು.

ಹುಳಿ: ಹುಳಿಯನ್ನು ಹೆಚ್ಚು ಸೇವನೆ ಮಾಡುವುದರಿಂದ ಚರ್ಮ ಹಾಗೂ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಅವರನ್ನು ಕಾಡಬಹುದು.

ಉಪ್ಪು: ಉಪ್ಪಿನ ಸೇವನೆ ಹೆಚ್ಚು ಮಾಡಿದರೆ ಬಿಳಿ ಕೂದಲು, ಚರ್ಮ ಸುಕ್ಕುಗಟ್ಟುವ ಸಾಧ್ಯತೆ ಇದೆ, ಹಲ್ಲುಗಳ ಬೆಳವಣಿಗೆ ಸರಿಯಾಗಿ ಆಗದೇ ಇರಬಹುದು.

ಖಾರ: ಖಾರದ ಸೇವನೆ ಹೆಚ್ಚಾದರೆ ರಜೋದೋಷ, ವೀರ್ಯದೋಷ ಆಗುವ ಸಾಧ್ಯತೆ ಇದೆ.

ಕಹಿ : ಕಹಿ ಸೇವನೆ ಮಾಡಿದರೆ ಊತ, ದುರ್ಬಲತೆ, ಜೀರ್ಣಶಕ್ತಿಯಲ್ಲಿ ಕೊರತೆ, ಇವೆಲ್ಲದರ ಸಾಧ್ಯತೆ ಹೆಚ್ಚಿರುತ್ತದೆ.

ಒಗರು: ಒಗರುಳ್ಳ ಪದಾರ್ಥ ಸೇವನೆ ಮಾಡಿದರೆ ತೇಗು, ಎದೆಯುರಿ ಒಣಚರ್ಮದ ಸಮಸ್ಯೆ ಉಂಟಾಗಬಹುದು.

ಹಾಗಾದರೆ ಮಗು ಹೊಟ್ಟೆಯಲ್ಲಿದ್ದಾಗ ತಾಯಿ ಮಾಡಬೇಕಾಗಿದ್ದೇನು, ಮಾಡುವ ಊಟ ಹೇಗಿರಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ತಾಯಿ ಗರ್ಭಾವಸ್ಥೆಯಲ್ಲಿರುವಾಗ ಯಾವ ಆಹಾರವನ್ನು ಹೆಚ್ಚು ತೆಗೆದುಕೊಳ್ಳುತ್ತಾಳೋ ಅದೆಲ್ಲಕ್ಕೂ ಅದರದ್ದೇ ಆದ ದುಷ್ಪರಿಣಾಮಗಳಿವೆ. ಊಟದಲ್ಲಿ ಸಮತೋಲವನ್ನು ಕಾಯ್ದುಕೊಳ್ಳಬೇಕು.

ಊಟ ಹೀಗಿರಲಿ ಬಾಳೆಎಲೆಯಲ್ಲಿ ಬಡಿಸುವ ಹಾಗೆ ಬಲಭಾಗಕ್ಕೆ ಪಾಯಸ, ಎಡ ಭಾಗಕ್ಕೆ ಚಿತ್ರಾನ್ನ ಅಥವಾ ಪುಳಿಯೊಗರೆಯನ್ನು ಬಿಡುವುದು, ಬಾಳೆಯ ಮೇಲ್ಭಾಗ ಎರಡು ಬಗೆಯ ಕೋಸಂಬರಿ, ಎರಡು ರೀತಿಯ ಪಲ್ಯ, ಒಂದು ಗೊಜ್ಜು, ಎಡ ಭಾಗದಲ್ಲಿ ಸ್ವಲ್ಪ ಉಪ್ಪು, ಉಪ್ಪಿನಕಾಯಿ ಹಾಗೂ ಚಟ್ನಿಯನ್ನು ಹಾಕಲಾಗುತ್ತದೆ.

ಮಧ್ಯ ಭಾಗದಲ್ಲಿ ಅನ್ನ ತೊವೆ, ಸಾರು, ಸಾಂಬಾರು, ಕೊನೆಯಲ್ಲಿ ಮಜ್ಜಿಗೆ ಹಾಕಲಾಗುತ್ತದೆ. ಹಾಗೆಯೇ ಕರಿದ ತಿಂಡಿ, ಸಿಹಿ ಪದಾರ್ಥಗಳನ್ನು ಬಡಿಸಲಾಗುತ್ತದೆ.

ನಾವು ಬಲಗೈನಲ್ಲಿ ಊಟ ಮಾಡುವ ಕಾರಣ ಊಟವನ್ನು ಎಂದೂ ಬಲಗಡೆಯಿಂದಲೇ ಪ್ರಾರಂಭಿಸಬೇಕು, ಅಂದರೆ ಸಿಹಿಯಿಂದ ಪ್ರಾರಂಭಿಸಬೇಕು. ಉಪ್ಪನ್ನು ಎಡಗಡೆ ಅಂದರೆ ಬಲಗೈಯಿಂದ ಆದಷ್ಟು ದೂರದಲ್ಲಿರುತ್ತದೆ. ಹಾಗಾಗಿ ಉಪ್ಪನ್ನು ಅತಿಯಾಗಿ ಬಳಸಬಾರದು ಎಂಬುದು ನಮ್ಮ ತಲೆಯಲ್ಲಿರಬೇಕು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ