Health : ‘ಕಿಡ್ನಿ ಕ್ಯಾನ್ಸರ್’ ಸದ್ದಿಲ್ಲದೆ ನಿಮ್ಮನ್ನು…
Kidney Cancer : ಧೂಮಪಾನಿಗಳು, ಮದ್ಯಪಾನಿಗಳು ಕಿಡ್ನಿ ಕ್ಯಾನ್ಸರ್ಗೆ ಬಲಿಯಾಗುವುದು ಹೆಚ್ಚು. ಅಸ್ತವ್ಯಸ್ತ ಜೀವನಶೈಲಿ ರೂಢಿಸಿಕೊಂಡವರು ಕೂಡ ಈ ಕುರಿತು ಎಚ್ಚರಿಕೆಯಿಂದ ಇರಬೇಕು.
Kidney Cancer : ಕಿಡ್ನಿ ಕ್ಯಾನ್ಸರ್ ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ನೀವು ತಿಳಿದುಕೊಳ್ಳುವುದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯವಾಗಿದೆ. ಆದರೆ ಇದರ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಎಲ್ಲೆಡೆಯೂ ಹರಡಿ ಚಿಕಿತ್ಸೆ ವಿಳಂಬವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಣ್ಣ ಪುಟ್ಟ ಲಕ್ಷಣಗಳು ತೋರುತ್ತಿದ್ದಂತೆ ತಡಮಾಡದೆ ಚಿಕಿತ್ಸೆ ಪಡೆಯುವುದು ಸೂಕ್ತ. ಮೂತ್ರಪಿಂಡ ಕ್ಯಾನ್ಸರ್ ನ ಗುಣಲಕ್ಷಣಗಳು ಆರಂಭಿಕ ಹಂತಗಳಲ್ಲಿ ಅಸ್ಪಷ್ಟವಾಗಿರುತ್ತವೆ. ತುಂಬಾ ಗಂಭೀರವೆನ್ನಿಸುವ ಯಾವ ಲಕ್ಷಣಗಳನ್ನೂ ಇದು ತೋರದು. ಅಲ್ಟ್ರಾಸೌಂಡ್ ಅಥವಾ ವಿವರವಾದ ಪರೀಕ್ಷೆ ಮಾಡದ ಹೊರತು ಮೂತ್ರಪಿಂಡದಲ್ಲಿರುವ ಗೆಡ್ಡೆಯನ್ನು ನಿಖರವಾಗಿ ಪತ್ತೆ ಹಚ್ಚಲಾಗದು. ಮೂತ್ರದಲ್ಲಿ ರಕ್ತ, ತೀವ್ರ ನೋವು, ಹಸಿವು ಉಂಟಾಗದಿರುವುದು, ರಕ್ತಹೀನತೆ, ಹೊಟ್ಟೆ ಉಬ್ಬುವುದು ಮುಂತಾದ ಲಕ್ಷಣಗಳು ಮೂತ್ರಪಿಂಡ ಕ್ಯಾನ್ಸರ್ನ ಲಕ್ಷಣಗಳು. ಇವೆಲ್ಲವೂ ಹಂತಹಂತವಾಗಿ ಕಂಡುಬರುತ್ತವೆ. ಆದರೆ ಈ ಎಲ್ಲ ಲಕ್ಷಣಗಳಿಗಾಗಿ ಕಾಯದೆ ಸ್ವಲ್ಪ ಅಸಹಜತೆ ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಯಾರು ಅಪಾಯದಲ್ಲಿದ್ದಾರೆ?
ಧೂಮಪಾನಿಗಳು, ಮದ್ಯಪಾನಿಗಳು ಕಿಡ್ನಿ ಕ್ಯಾನ್ಸರ್ಗೆ ಬಲಿಯಾಗುವುದು ಹೆಚ್ಚು. ಅಸ್ತವ್ಯಸ್ತ ಜೀವನಶೈಲಿ ರೂಢಿಸಿಕೊಂಡವರು ಕೂಡ ಈ ಕುರಿತು ಎಚ್ಚರಿಕೆಯಿಂದ ಇರಬೇಕು. ಅಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ನಿರಂತರವಾಗಿ ಡಯಾಲಿಸಿಸ್ಗೆ ಒಳಗಾಗುವವರು ಮೂತ್ರಪಿಂಡದ ಕ್ಯಾನ್ಸರ್ಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಟ್ಯೂಬರಸ್ ಸ್ಕ್ಲೆರೋಸಿಸ್, ಕೌಟುಂಬಿಕವಾಗಿ ಮೂತ್ರಪಿಂಡದ ಸಮಸ್ಯೆ, ಕ್ಯಾನ್ಸರ್ ಇರುವವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದು ಆನುವಂಶಿಕವೂ ಎನ್ನುತ್ತದೆ ವೈದ್ಯಲೋಕ. ಇದು ವೇಗವಾಗಿ ಹರಡುವ ಕ್ಯಾನ್ಸರ್ ಆದ್ದರಿಂದ ಶ್ವಾಸಕೋಶ ಮತ್ತು ಮೂಳೆಗಳ ಮೇಲೂ ದಾಳಿ ಮಾಡಬಹುದು.
ಇದನ್ನೂ ಓದಿ : Health: ‘ಒನ್ ನೇಷನ್ ಒನ್ ಡಯಾಲಿಸಿಸ್’ ಯೋಜನೆ ಸದ್ಯದಲ್ಲೇ ಚಾಲನೆ
ಆದ್ದರಿಂದ ಆನುವಂಶಿಕ ಸಮಸ್ಯೆಗಳು ಇದ್ದಾಗ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ಅಲ್ಲದೆ, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಒಳ್ಳೆಯದು. ಸಮತೋಲನ ಆಹಾರ, ವ್ಯಾಯಾಮ, ಒತ್ತಡರಹಿತ ಜೀವನದೆಡೆ ಪ್ರಸ್ತುತ ದಿನಮಾನಗಳಲ್ಲಿ ಗಮನ ಹರಿಸುವುದು ಅತ್ಯವಶ್ಯ. ಉತ್ತಮ ಜೀವನಶೈಲಿ ರೂಢಿಸಿಕೊಂಡಾಗ ಮನಸ್ಸು ದೃಢವಾಗಿರುತ್ತದೆ. ಆಗ ನಿರಾತಂಕವಾಗಿ ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಆಗ ಆರೋಗ್ಯವೂ ಗಟ್ಟಿಮುಟ್ಟಾಗಿರುತ್ತದೆ.
ಇದನ್ನೂ ಓದಿ : Health: ಅಜೀರ್ಣಕ್ಕೆ ಅಜವಾನ್! ಔಷಧಿ ಅಂಗಡಿಗೆ ಹೋಗುವ ಮೊದಲು ಅಡುಗೆಮನೆಗೆ ಹೋಗಿ
ಎಲ್ಲವನ್ನೂ ಅಪಾಯದ ಗಂಟೆ ಬಾರಿಸುವ ತನಕ ಕಾಯಬಾರದು. ಅಪಾಯದ ಸೂಚನೆಗಳು ಗೊತ್ತಾಗುತ್ತಿದ್ದಂತೆ ಎಚ್ಚೆತ್ತುಕೊಳ್ಳುವುದು ಒಳಿತು.
Published On - 12:57 pm, Wed, 29 June 22