ವೈಯಕ್ತಿಕ ಕಾರ್ಯಗಳಿಗೆ ಸಮಯ ಹೊಂದಾಣಿಕೆ ಕಷ್ಟವಾಗಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ, ಶುಕ್ರವಾರ ಅರೆಕಾಲಿಕ ವೃತ್ತಿ, ಅಸತ್ಯದಿಂದ ಕೆಲಸ ಹಾಳು, ನಿಮ್ಮವರಿಂದ ವಂಚನೆ ಇದೆಲ್ಲ ಈ ದಿನದ ವಿಶೇಷ.ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ : ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಪಂಚಮೀ ನಿತ್ಯನಕ್ಷತ್ರ : ಆರ್ದ್ರಾ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ – 06 : 10 am, ಸೂರ್ಯಾಸ್ತ – 06 : 48 pm, ಇಂದಿನ ಶುಭಾಶುಭಕಾಲ: ರಾಹು ಕಾಲ 10:55 – 12:30, ಯಮಘಂಡ ಕಾಲ 15:39 – 17:14, ಗುಳಿಕ ಕಾಲ 07:46 – 09:20
ಮೇಷ ರಾಶಿ: ವಯಸ್ಸಿಗೆ ಸಹಜವಾದ ಮಾತುಗಳಿರಲಿ. ನಿಮ್ಮ ಕೆಲಸದ ಒತ್ತಡದಿಂದಾಗಿ ನೀವು ಇಂದು ಬಳಲುವ ಸಾಧ್ಯತೆ ಇದೆ, ಆದ್ದರಿಂದ ಸಾಕಷ್ಟು ವಿಶ್ರಾಂತಿ ಪಡೆಯಿರಿ. ಅರೆಕಾಲಿಕ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಖಿನ್ನತೆ ಎದುರಾದರೆ, ಅನುಭವಿಗಳ ಸಲಹೆ ಪಡೆಯಿರಿ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮವರೆದು ಕಠೋರ ಮಾತುಗಳನ್ನು ಆಡುವರಿ. ಸುತ್ತಾಡುವ ಮನಸ್ಸಿರಲಿದೆ. ನಿಮ್ಮನ್ನು ನಿಂದಿಸಲು ಕೆಲವು ಹೊಂಚು ಹಾಕಿದ್ದು ತಿಳಿದು ಅದನ್ನು ಸರಿ ಮಾಡಿಕೊಳ್ಳುವಿರಿ. ಧನಾಭಾವದಿಂದ ಸಾಲವನ್ನು ಮಾಡುವ ಸಾಧ್ಯತೆಯಿದೆ. ಹಳೆಯ ಅನುಭವಗಳು ಇಂದು ಕೆಲಸಕ್ಕೆ ಬರಲಿದೆ. ವಾಹನ ಖರೀದಿಯ ವಿಚಾರದಲ್ಲಿ ಗೊಂದಲಗಳು ಇರಬಹುದು. ಕೆಲವು ಹವ್ಯಾಸಗಳು ಚಟವಾಗಿಯೂ ಪರಿವರ್ತನೆ ಆಗಬಹುದು. ಬಿಡುಗಡೆ ಸಿಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಹೊಂದಿ ಅವರ ತೇಜೋವಧೆ.
ವೃಷಭ ರಾಶಿ: ನಿಮ್ಮ ಮಾತುಗಳು ನಂಬಿಕೆ ತರುವಂತೆ ಇರಲಿ. ಇಂದು ಅನಾನುಕೂಲವನ್ನು ಹೆಚ್ಚಾಗಿ ಅನುಭವಿಸಬಹುದು, ಆದರೆ ಹೊಸ ದೃಷ್ಠಿಕೋನದಿಂದ ಪ್ರಯತ್ನಿಸುವುದು ಉತ್ತಮ. ಕಷ್ಟಗಳು ನಿಮ್ಮನ್ನು ಗಟ್ಟಿಗೊಳಿಸಬಹುದು. ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ಶಾಂತಿ ದೊರೆಯುತ್ತದೆ. ನಿಮ್ಮ ಕ್ರಿಯೆಗಳು ಕೆಲವರ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಎಂತಹ ನೋವಲ್ಲೂ ಉಪಕಾರವನ್ನು ಮರೆಯಲಾರಿರಿ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನ. ವೃತ್ತಿಯಲ್ಲಿ ಹೊಸ ಪ್ರೋತ್ಸಾಹವನ್ನು ಕಾಣಬಹುದು. ಅಪರಿಚಿತ ದೂರವಾಣಿಯು ನಿಮ್ಮನ್ನು ದಿಗಿಲುಗೊಳಿಸಬಹುದು. ಸುಳ್ಳಾಡಿ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಶತ್ರುಗಳು ಸಹಾಯವನ್ನು ಕೇಳಬಹುದು. ಒತ್ತಡದಿಂದ ನಿಮಗೆ ವಿಶ್ರಾಂತಿಯ ಅವಶ್ಯಕತೆ ಇರುತ್ತದೆ. ಕೆಲವರ ಮಾತು ಉತ್ಸಾಹವನ್ನು ಹಾಳು ಮಾಡುವುದು. ನೀವು ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು. ದೂರದ ಬಂಧುಗಳು ನಿಮ್ಮ ಪರಿಚಯವನ್ನು ಮಾಡಿಕೊಂಡಾರು.
ಮಿಥುನ ರಾಶಿ: ನಿಮ್ಮ ಯೋಜನೆಯನ್ನು ಉದ್ಯೋಗದಲ್ಲಿ ಸ್ಥಾಪಿಸಲು ಸಾಧ್ಯವಾಗದು. ಮನಸ್ಸು ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವಿರಿ ನಿಮ್ಮ ಸೃಜನ ಶೀಲ ಮನಸ್ಸು ಹೊಸದನ್ನು ಕಂಡು ಹಿಡಿಯುವಲ್ಲಿ ಕರೆದೊಯ್ಯುತ್ತದೆ. ನಿಮ್ಮ ದೃಢನಿಶ್ಚಯ ಮತ್ತು ಬುದ್ಧಿವಂತಿಕೆಯಿಂದ ಭವಿಷ್ಯಕ್ಕಾಗಿ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮುಖ್ಯ ಯೋಜನೆಯಲ್ಲಿ ಮಹಿಳೆಯರಿಗೆ ಅವರ ಪರಿಶ್ರಮಕ್ಕಾಗಿ ಮಾನ್ಯತೆ ನೀಡುವಿರಿ. ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ಪುಣ್ಯಕ್ಷೇತ್ರಗಳ ಭೇಟಿಯಿಂದ ನಿಮಗೆ ಸಂತಸ ಸಿಗಲಿದೆ. ನಿಮ್ಮವರಿಂದಲೇ ವಂಚಿತರಾಗುವಿರಿ. ಆಪ್ತರೆಂದು ನಿಮ್ಮ ಎಲ್ಲ ವಿಚಾರಗಳನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ಹಗುರವಾದ ಮಾತುಗಳು ನಿಮಗೆ ಅಪಮಾನವನ್ನು ಮಾಡುವುದು. ನಿದ್ರೆಯಿಲ್ಲದೇ ಮನಸ್ಸು ಕಿರಿಕಿರಿಯನ್ನು ಅನುಭವಿಸುವುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ.
ಕರ್ಕಾಟಕ ರಾಶಿ: ಕಾರ್ಯದ ಒತ್ತಡದಿಂದ ಉದ್ಯೋಗವನ್ನು ಬದಲಿಸಿಲುವಿರಿ. ನೀವು ದುಶ್ಚಟದಿಂದ ದೂರವಿರಲು ಮನಸ್ಸು ಮಾಡುವಿರಿ. ಉದ್ಯೋಗದಲ್ಲಿ ಭಡ್ತಿಯನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಸಂತೋಷಕರವಾದ ವಾರ್ತೆಯು ಇರುತ್ತದೆ. ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇಂದು ಸೂಕ್ತ ದಿನವಲ್ಲ. ಕೆಲಸದಲ್ಲಿನ ಅನಿರೀಕ್ಷಿತ ತೊಂದರೆಗಳನ್ನು ಧೈರ್ಯ ಮತ್ತು ಸ್ಥಿರತೆಯಿಂದ ಎದುರಿಸಿ. ಸಂಗಾತಿಯ ಭಯದಿಂದ ಎಲ್ಲವನ್ನೂ ಸರಿಯಾಗಿ ಮಾಡುವಿರಿ. ಇದು ನಿಮಗೆ ಭವಿಷ್ಯದ ಸುಧಾರಣೆಗೆ ಸಹಕಾರಿ. ಲಭ್ಯವಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರಿಂದ ಭವಿಷ್ಯದ ಭದ್ರತೆಯನ್ನು ಹೆಚ್ಚಿಸಬಹುದು. ವಾಹನದಲ್ಲಿ ಸಂಚಾರ ಮಾಡಿ ಖುಷಿ ಪಡುವಿರಿ. ಬಂಧುಗಳ ಮನೆಯಲ್ಲಿ ಇಂದು ನಿಮ್ಮ ವಾಸವಿರಲಿದೆ. ಮಕ್ಕಳು ಕಲಿಕೆಯಲ್ಲಿ ಆಸಕ್ತಿಯನ್ನು ತೋರಿಸದೇ ಇರುವುದರಿಂದ ಬೈಯ್ಯುವಿರಿ. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ.
ಸಿಂಹ ರಾಶಿ: ವೈಯಕ್ತಿಕ ಕಾರ್ಯಗಳಿಗೆ ಸಮಯ ಹೊಂದಾಣಿಕೆ ಕಷ್ಟವಾಗಬಹುದು. ಬಲವು ಸಾಮಾಜಿಕ ಕಾರ್ಯದಿಂದ ಟೀಕೆಗೆ ಗುರಿಯಾಗುವಿರಿ. ಕಟ್ಟಡವನ್ನು ನಿರ್ಮಿಸುವ ಕಾರ್ಯದಲ್ಲಿ ನೀವು ಯಶಸ್ವಿಯಾಗುವಿರಿ. ಸ್ಥಿರಾಸ್ತಿಯ ಖರೀದಿಯನ್ನು ಮಾಡುವಿರಿ. ಇಂದು ನಿಮ್ಮ ಉಜ್ವಲ ಪ್ರೀತಿಯು ನಿಮ್ಮ ಸುತ್ತಲಿರುವವರನ್ನು ಪ್ರೇರೇಪಿಸುತ್ತದೆ. ಆದರೆ ನಿಷ್ಕ್ರಿಯತೆ ಮತ್ತು ಆಯಾಸದಿಂದ ನೀವು ಸ್ವಲ್ಪ ಅಸಹಜವಾಗಿ ಅನುಭವಿಸಬಹುದು. ದಿನದ ಅಂತ್ಯದ ವೇಳೆಗೆ ಸಂತೋಷಕರ ಸುದ್ದಿ ನಿಮಗೆ ಮನಶ್ಶಾಂತಿಯನ್ನು ತರಬಹುದು. ಇಂದು ಅಶಕ್ತರಿಗೆ ನಿಮ್ಮ ಬಳಿ ಇರುವುದನ್ನು ಕೊಡುವಿರಿ. ಬಟ್ಟೆ ಉದ್ಯಮ ಕ್ಷೇತ್ರದವರಿಗೆ ಲಾಭವು ಅಧಿಕವಾಗಲಿದೆ. ಆರ್ಥಿಕವಾಗಿ ಇಂದು ಸಬಲರಾಗುವಿರಿ. ವಾತಾವರಣದ ಕಾರಣದಿಂದ ಅನಾರೋಗ್ಯವು ಉಂಟಾಗಬಹುದು. ಜೋಪಾನವಾಗಿ ಇರಿಸಿಕೊಂಡಿರುವ ನಿಮ್ಮ ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗಿದ್ದು ಇಂದು ತಿಳಿಯಲಿದೆ. ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ.
ಕನ್ಯಾ ರಾಶಿ: ಸ್ಥಾನದಿಂದ ವಂಚಿತರಾಗುವ ಸಾಧ್ಯತೆ ಇದೆ. ನಿಮ್ಮದಲ್ಲದ ವಸ್ತುವನ್ನು ಪಡೆದಾಗ ಜೋಪಾನ ಮಾಡುವುದು ಅವಶ್ಯಕ. ಇಂದು ನಿಮ್ಮ ವೇಗಕ್ಕೆ ಕೆಲಸಗಳು ಆಗುತ್ತಿಲ್ಲ ಎಂಬ ತುಡಿತ ಇರಲಿದೆ. ನಿಮ್ಮ ವಿಶ್ಲೇಷಣಾ ಶಕ್ತಿ ಮತ್ತು ನೈತಿಕತೆಯು ಇಂದು ನಿಮ್ಮ ಸುತ್ತಮುತ್ತಲಿನವರಿಂದ ಮೆಚ್ಚುಗೆ ಪಡೆಯಲಿದೆ. ಧಾರ್ಮಿಕ ವಿಷಯದಲ್ಲಿ ಅಶ್ರದ್ಧೆ ತೋರಿಸುವಿರಿ. ಜನರು ನಿಮ್ಮ ಸಲಹೆಗಳನ್ನು ಕೇಳಲು ಬರಬಹುದು, ನಿಮ್ಮ ಒಳನೋಟಗಳು ಪ್ರಭಾವಶಾಲಿಯಾಗಿರುತ್ತವೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನೀವು ಯೋಜಿಸಿದ್ದರೂ, ಅದನ್ನು ಮುಂದೂಡಬೇಕಾಗಬಹುದು. ತಾಳ್ಮೆಯಿಂದಿರಿ. ಅಲಂಕಾರದ ವಸ್ತುಗಳನ್ನು ಇಷ್ಟಪಟ್ಟು ಖರೀದಿಸುವಿರಿ. ಏಕಾಗ್ರತೆಗಾಗಿ ಮಾಡಿದ ಪ್ರಯತ್ನಗಳು ಇಂದು ನಿಮಗೆ ಫಲವನ್ನು ಕೊಡುವುದು. ನಿಮಗೆ ಕುಟುಂಬವು ಬೆಂಬಲವನ್ನು ನೀಡುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಸಿದ್ಧರಾಗುತ್ತೀರಿ. ದುಬಾರಿ ವಸ್ತುವನ್ನು ಖರೀದಿಸಲಿದ್ದೀರಿ. ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸುವುದು ಅಥವಾ ಕೆಲವು ದಿನಗಳ ಅನಂತರ ನಡೆಸುವುದು ಯೋಗ್ಯವಿದೆ.