ಧನಿಷ್ಠಾ ನಕ್ಷತ್ರದಲ್ಲಿ ಜನಿಸಿದವರು ನಕ್ಷತ್ರಕ್ಕೆ ತಕ್ಕಂತೆ ಇರುವರು
ಈ ನಕ್ಷತ್ರ ಹೇಗಿದೆ, ಹಾಗೆ ಈ ನಕ್ಷತ್ರದಲ್ಲಿ ಜನಿಸಿದವರ ವರ್ತನೆ ಇರುತ್ತದೆ. ಪೂರ್ವಾರ್ಧ ಮಕರ ಹಾಗೂ ಉತ್ತರಾರ್ಧ ಕುಂಭ ರಾಶಿಯಲ್ಲಿ ಬರುವ ನಕ್ಷತ್ರ ಇದು. ಈ ನಕ್ಷತ್ರದ ಗಾ ಗೀ ಗೂ ಗೇ ಅಕ್ಷರಗಳಾಗಿವೆ. ಈ ನಕ್ಷತ್ರವೇ ನಿರ್ಧಾರ ಮಾಡುತ್ತದೆ ಇವರ ಕರ್ಮಫಲಗಳನ್ನು ಈ ನಕ್ಷತ್ರದಲ್ಲಿ ಜನಿಸದವರು ಯಾವೆಲ್ಲ ಗುಣಗಳನ್ನು ಇಟ್ಟುಕೊಂಡಿರುವರು ಎನ್ನುವುದು ನೋಡಬೇಕು. ಇಲ್ಲಿದೆ ನೋಡಿ.

ಪೂರ್ವಾರ್ಧ ಮಕರ ಹಾಗೂ ಉತ್ತರಾರ್ಧ ಕುಂಭ ರಾಶಿಯಲ್ಲಿ ಇರುವ ನಕ್ಷತ್ರ ಧನಿಷ್ಠಾ. ನಗಾರಿಯ ಆಕಾರದಲ್ಲಿ ನಾಲ್ಕು ನಕ್ಷತ್ರಗಳು ಖಗೋಳದಲ್ಲಿ ಕಾಣಿಸುತ್ತವೆ. ಇದರ ದೇವತೆ ದೇವಗಣದಲ್ಲಿ ಒಂದು ಭಾಗವಾದ ವಸು. ರಾಕ್ಷಸಗಣಕ್ಕೆ ಸೇರಿದ ನಕ್ಷತ್ರ ಇದಾಗಿದ್ದು, ಪಿತ್ತದೋಷವು ಪ್ರಧಾನವಾಗಿರುವುದು. ಮಧ್ಯನಾಡಿಯನ್ನು ಸೂಚಿಸುತ್ತದೆ. ಗಾ ಗೀ ಗೂ ಗೇ ಇವು ನಕ್ಷತ್ರದ ಅಕ್ಷರಗಳಾಗಿವೆ. ಶ್ರವಿಷ್ಠಾ ಎನ್ನುವುದು ಪ್ರಾಚೀನ ಹೆಸರು. ವೇದಗಳಲ್ಲಿ ಶ್ರವಿಷ್ಠಾ ಎಂದೇ ಪ್ರಸಿದ್ಧ. ಈ ನಕ್ಷತ್ರದಲ್ಲಿ ಜನಿಸದವರು ಯಾವೆಲ್ಲ ಗುಣಗಳನ್ನು ಇಟ್ಟುಕೊಂಡಿರುವರು ಎನ್ನುವುದು ನೋಡಬೇಕು.
- ಆಚಾರವಂತ : ಧಾರ್ಮಿಕ ಕ್ರಿಯೆಗಳ ಶ್ರದ್ಧೆ, ನಂಬಿಕೆ ಇರುವುದು. ಎಲ್ಲವನ್ನೂ ಮಾಡುವ ವಿಧಾನವನ್ನು ತಿಳಿದು ಮಾಡವನು. ಧರ್ಮಾಚರಣೆಗೆ ಮಹತ್ತ್ವ ಅಧಿಕವಾಗಿರುವುದು.
- ಗೌರವ : ಇವರ ವ್ಯಕ್ತಿತ್ವಕ್ಕೆ ಗೌರವ ತಾನಾಗಿಯೇ ಹುಡಿಕಿಕೊಂಡು ಬರುವುದು. ಇವರ ಮನೋಭಾವವೂ ಕೂಡ ಯಾರೂ ತಲೆಬಾಗುವಂತೆಯೇ ಇರುತ್ತದೆ. ತಲೆ ತಗ್ಗಿಸಿ ನಡೆಯಲಾರರು.
- ಶೀಲ : ಮಾನ ಮಾರ್ಯಾದೆಗೆ ಅಂಜುವರು. ಅದು ಹಾಳಾಗದಂತೆ ಬಹಳ ಜಾಗರೂಕತೆಯಿಂದ ತಮ್ಮ ಜೀವನವನ್ನು ನಡೆಸಲು ಇಷ್ಟಪಡುವರು ಹಾಗೂ ಪ್ರಯತ್ನದಲ್ಲಿಯೂ ಇರುವರು.
- ಧನಸಮೃದ್ಧಿ : ನಕ್ಷತ್ರದ ಹೆಸರೇ ಹೇಳುವಂತೆ ಧನವು ಇವರಲ್ಲಿ ಸಮೃದ್ಧವಾಗಿರುವುದು. ಈ ನಕ್ಷತ್ರದವರೂ ಸಂಪಾದನೆ ಮಾಡಬಹುದು ಅಥವಾ ಪೂರ್ವಾರ್ಜಿತ ಆಸ್ತಿಯೂ ಇವರ ಪಾಲಾಗಲಿದೆ.
- ಬಲವಾನ್ : ಮಾನಸಿಕವಾಗಿಯೂ ಹಾಗೂ ದೈಹಿಕವಾಗಿಯೂ ಬಲವುಳ್ಳವರಾಗಿದ್ದು ಯಾವ ನಿರ್ಧಾರವನ್ನೂ ಬದಲಿಸದೇ ತಾವು ಮಾಡುವುದನ್ನು ಮಾಡಿಯೇ ಮುಗಿಸುವರು
- ದಯೆ : ಇವರಲ್ಲಿ ಅಧಿಕ ದಯಾ ಗುಣವಿರುವುದು. ಇನ್ನೊಬ್ಬರ ನೋವಿಗೆ ಸ್ಪಂದನೆ, ಬೇಕಾದ ಸಹಾಯವನ್ನು ಮಾಡುವ ಮನಸ್ಸಿರುವುದು. ಯಾವ ಜೀವಿಯೂ ನೋವಿನಿಂದ ಇರುವುದನ್ನು ನೋಡಲಾರರು.
- ಉನ್ನತ ಸ್ಥಾನ : ಇವರ ಯೋಗ್ಯತೆಗೆ ತಕ್ಕಂತೆ ಉನ್ನತ ಸ್ಥಾನ, ಮಾನಗಳು ಪ್ರಾಪ್ತವಾಗಲಿವೆ. ಯಾವುದಾದರು ಮುಖ್ಯ ಹುದ್ದೆಯಲ್ಲಿ ಇವರು ಸ್ಥಾನವನ್ನು ಪಡೆಯುವರು.
- ಗೀತಪ್ರಿಯ : ಇವರು ಹೆಚ್ಚು ಸಂಗೀತದಲ್ಲಿ ಆಸಕ್ತಿಯುಳ್ಳವರು. ಸ್ವತಃ ಸಂಗೀತವನ್ನು ಹಾಡುವರು ಅಥವಾ ಹೆಚ್ಚು ಸಂಗೀತ ಮೊದಲಾದ ಲಲಿತಕಲೆಗಳನ್ನು ನೋಡಲು ಕೇಳಲು ಇಚ್ಛೆಯುಳ್ಳವರು.
- ಪ್ರಭೂತಸೇವಕ : ಇವರ ಮಾತುಗಳನ್ನು ಕೇಳುವ ಸೇವಕ ಗಡಣವಿರುವುದು. ಎಲ್ಲವನ್ನೂ ಸೇವಕರ ಮೂಲಕ ಮಾಡಿಸಿಕೊಳ್ಳುವರು. ಸೇವಕರಿಗೂ ಇವರು ಮೆಚ್ಚುಗೆ ಆಗುವರು.
- ನಿರೀಹ : ಇಷ್ಟೆಲ್ಲ ಗುಣಗಳಿದ್ದರೂ ಇವರ ಕ್ರಿಯಾರಹಿತರು. ಹೆಚ್ಚು ಕೆಲಸದಲ್ಲಿ ಅಥವಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಲಾರರು. ಕೇವಲ ಪಾಲನೆ, ರಕ್ಷಣೆ ಇಂತಹವುಗಳನ್ನು ಹೇಳಿ ಮಾಡಿಸುವರೇ ವಿನಃ ತಾವು ಮಾಡುವರಲ್ಲ.
ಇವೆಲ್ಲ ಉತ್ತಮ ಗುಣಗಳು ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬರಲಿದೆ. ಆದರೆ ಜನನ ಕಾಲದಲ್ಲಿ ಈ ನಕ್ಷತ್ರದಲ್ಲಿ ಶುಭಗ್ರಹತಿದ್ದರೆ ಇವೆಲ್ಲವನ್ನೂ ಕಾಣಬಹುದು. ದುಷ್ಟ ಗ್ರಹರಿದ್ದರೆ ವಿಪರೀತ ಪರಿಣಾಮ ಉಂಟಾಗಬಹುದು. ಆ ಬಗ್ಗೆ ಗಮನವಿಟ್ಟು ಫಲಾಫಲವನ್ನು ಹೇಳಬೇಕು.
– ಲೋಹಿತ ಹೆಬ್ಬಾರ್ – 8762924271
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Thu, 1 May 25