ಯಶ್ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್ ಸಿನಿಮಾ ಮೇಲೆ ದುಡ್ಡು ಸುರಿಯಲು ಇಡೀ ದೇಶಾದ್ಯಂತ ಇರುವ ನಿರ್ಮಾಪಕರು ರೆಡಿ ಇದ್ದಾರೆ ಎಂದು ಕೆ. ಮಂಜು ಅವರು ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಈ ಹಿನ್ನೆಲೆಯಲ್ಲಿ ಕೆ. ಮಂಜು ಮಾತನಾಡಿದ್ದಾರೆ. ಯಶ್ ಬೆಳೆದರೆ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದು ಎಂದು ಅವರು ಹೇಳಿದ್ದಾರೆ.
ನಟ ಯಶ್ (Yash) ಅವರು ‘ಟಾಕ್ಸಿಕ್’ ಸಿನಿಮಾ ಮೂಲಕ ಜಾಗತಿಕ ಮಟ್ಟದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅವರ ಪ್ಲ್ಯಾನ್ ಬಹಳ ದೊಡ್ಡದಾಗಿದೆ. ಈಗ ಬಿಡುಗಡೆ ಆಗಿರುವ ಟೀಸರ್ (Toxic Teaser) ನೋಡಿದರೆ ಇಡೀ ಸಿನಿಮಾದ ಝಲಕ್ ಕಾಣಿಸುತ್ತಿದೆ. ಯಶ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಆ ಬಗ್ಗೆ ನಿರ್ಮಾಪಕ ಕೆ. ಮಂಜು (K Manju) ಅವರು ಮಾತನಾಡಿದ್ದಾರೆ. ‘ಯಶ್ಗೆ ಹುಟ್ಟುಹಬ್ಬದ ಶುಭಾಶಯಗಳು. 40ನೇ ವಯಸ್ಸಿನಲ್ಲಿ ಊಹೆ ಮಾಡಿರದಷ್ಟು ಮಟ್ಟಕ್ಕೆ ತಲುಪಿದ್ದಾನೆ. ಅವನಿಗೆ ಮೊದಲೇ ಗಜಕೇಸರಿ ಯೋಗ ಇತ್ತು. 2011-12ರ ಸಮಯದಲ್ಲಿ ಅವನಿಗೆ ಗಜಕೇಸರಿ ಯೋಗ ಶುರು ಆಯಿತು. 45 ವರ್ಷಗಳ ತನಕ ಅವನನ್ನು ಯಾರೂ ಟಚ್ ಮಾಡೋಕೆ ಆಗಲ್ಲ. ಯಶ್ ರೀತಿ ಯಾರೂ ಪ್ಲ್ಯಾನ್ ಮಾಡಲ್ಲ. ಅವನು ಯಾರಿಗೂ ಹರ್ಟ್ ಮಾಡಲ್ಲ. ಯಶ್ಗೆ ಕನ್ನಡ ಚಿತ್ರರಂಗ ಎಂದರೆ ಪ್ರಾಣ. ಅವನು ಬೆಳೆದರೆ ಕನ್ನಡ ಚಿತ್ರಂಗಕ್ಕೆ ಒಳ್ಳೆಯದು’ ಎಂದಿದ್ದಾರೆ ಕೆ. ಮಂಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
