‘ಟಾಕ್ಸಿಕ್’ ಟೀಸರ್: ಯಶ್ ಜೊತೆ ಕಾರಿನಲ್ಲಿರುವ ನಟಿ ಇವರೇ ನೋಡಿ
Toxic Teaser: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ‘ಟಾಕ್ಸಿಕ್’ ಸಿನಿಮಾ ಸಖತ್ ಹಾಟ್ ಆಗಿಯೂ ಸಖತ್ ಮಾಸ್ ಆಗಿಯೂ ಮೂಡಿ ಬಂದಿದೆ. ಟೀಸರ್ನಲ್ಲಿ ಯಶ್ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಟೀಸರ್ನಲ್ಲಿ ಯಶ್ ಜೊತೆ ಇರುವ ಯುವತಿ ಯಾರು ಗೊತ್ತೆ? ಇಲ್ಲಿದೆ ನೋಡಿ ಆಕೆಯ ಬಗ್ಗೆ ಮಾಹಿತಿ...
Updated on:Jan 08, 2026 | 4:01 PM

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಇಂದು (ಜನವರಿ 08) ಯಶ್ ಹುಟ್ಟುಹಬ್ಬದ ಪ್ರಯುಕ್ತ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಸಖತ್ ಹಾಟ್ ಆಗಿಯೂ ಸಖತ್ ಮಾಸ್ ಆಗಿಯೂ ಇದೆ.

ಟೀಸರ್ನಲ್ಲಿ ಯಶ್ ಕಾರೊಂದರಲ್ಲಿ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯುವತಿಯ ಕೆಲವು ಹಾಟ್ ದೃಶ್ಯಗಳು ಟೀಸರ್ನಲ್ಲಿ ಇವೆ. ಅಷ್ಟಕ್ಕೂ ಆ ಯುವತಿ ಯಾರು?

‘ಟಾಕ್ಸಿಕ್’ ಟೀಸರ್ನಲ್ಲಿ ಯಶ್ ಜೊತೆಗೆ ಇರುವ ನಟಿಯ ಹೆಸರು ನಟೇಲಿ ಬರ್ನ್. ಈ ನಟಿ ಮೂಲತಃ ಉಕ್ರೇನ್ವರು ಆದರೆ ಹಾಲಿವುಡ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟೇಲಿ ಬರ್ನ್ ನಟಿ ಆಗಿರುವ ಜೊತೆಗೆ ನಿರ್ಮಾಪಕಿ ಮತ್ತು ಚಿತ್ರಕತೆ ಬರಹಗಾರ್ತಿಯೂ ಆಗಿದ್ದಾರೆ. ಕೆಲವು ಇಂಗ್ಲೀಷ್ ಸಿನಿಮಾಗಳಿಗೆ, ಕಿರು ಚಿತ್ರಗಳಿಗೆ ಬಂಡವಾಳ ಸಹ ಹೂಡಿದ್ದಾರೆ.

7 ಹೆವೆನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿರುವ ನಟೇಲಿ ಬರ್ನ್, ನಟರ ತರಬೇತಿ ಮತ್ತು ಸ್ಟುಡಿಯೋ ‘ಬಾರ್ನ್ ಟು ಬರ್ನ್’ ನ ಸಿಇಓ ಸಹ ಆಗಿದ್ದಾರೆ. ಆಕ್ಟರ್ಸ್ ಸ್ಟುಡಿಯೋ ಮತ್ತು ಟೆಲಿವಿಷನ್ ಅಕಾಡೆಮಿಯ ಸದಸ್ಯೆಯೂ ಆಗಿದ್ದಾರೆ.

ನಟೇಲಿ ಬರ್ನ್ ಹಾಲಿವುಡ್ನ ‘ದಿ ಎಕ್ಸ್ಪ್ಯಾಂಡೆಬಲ್ಸ್ 3’, ‘ಮೆಕ್ಯಾನಿಕ್ ರಿಸರಕ್ಷನ್’, ‘ಫಾರ್ಸೆಸ್ಟ್ರೆಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
Published On - 3:33 pm, Thu, 8 January 26




