ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಶೀಘ್ರದಲ್ಲೇ ಬರಲಿದೆ. ಕೊನೇ ಹಂತದಲ್ಲಿ ರಕ್ಷಿತಾ ಶೆಟ್ಟಿ ಮನಸ್ಸು ಬದಲಾಗಿದೆ. ‘ಧ್ರುವಂತ್ ಅವರ ಬಗ್ಗೆ ನನಗೆ ದ್ವೇಷ ಇಲ್ಲ. ಆಗಾಗ ಪಾಪ ಎನಿಸುತ್ತದೆ. ಬೇಜಾರು ಆಗುತ್ತದೆ. ಅವರು ಅಷ್ಟು ಕೆಟ್ಟ ಮನುಷ್ಯ ಅಲ್ಲ’ ಎಂದಿದ್ದಾರೆ ರಕ್ಷಿತಾ ಶೆಟ್ಟಿ.
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ (Dhruvanth) ಅವರನ್ನು ಕಂಡರೆ ರಕ್ಷಿತಾ ಶೆಟ್ಟಿ ಅವರು ಉರಿದು ಬೀಳುತ್ತಿದ್ದರು. ಆದರೆ ಈಗ ಅವರ ಮನಸ್ಸು ಕರಗಿದೆ. ಅಶ್ವಿನಿ ಗೌಡ ಜೊತೆ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಧ್ರುವಂತ್ ಅವರ ಬಗ್ಗೆ ನನಗೆ ದ್ವೇಷ ಇಲ್ಲ. ಆಗಾಗಾ ಪಾಪ ಎನಿಸುತ್ತದೆ. ಬೇಜಾರು ಆಗುತ್ತದೆ. ಅವರು ಅಷ್ಟು ಕೆಟ್ಟ ಮನುಷ್ಯ ಅಲ್ಲ. ಸಿಟ್ಟಿನಲ್ಲಿ ಅವರ ಕೆಲವು ಮಾತುಗಳು ನನಗೆ ಇಷ್ಟ ಆಗಲ್ಲ’ ಎಂದು ರಕ್ಷಿತಾ ಶೆಟ್ಟಿ (Rakshitha Shetty) ಹೇಳಿದ್ದಾರೆ. ‘ಈ ಮನೆಯಲ್ಲಿ ನಾವು ಇರುವುದು ಇನ್ನು ಒಂದು ವಾರ ಮಾತ್ರ. ಎಲ್ಲವನ್ನೂ ಇಲ್ಲೇ ಬಿಟ್ಟು ಬಿಡಬೇಕು’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ಶೀಘ್ರದಲ್ಲೇ ಬರಲಿದೆ. ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಮ್ಯೂಟೆಂಟ್ ರಘು, ಧನುಷ್, ಕಾವ್ಯ ಶೈವ ಅವರು ಕೂಡ ಪೈಪೋಟಿ ನೀಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

