ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಜಲಂಧರ್‌ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
ಜಲಂಧರ್, ಜನವರಿ 8: ಪಂಜಾಬ್ನ ಜಲಂಧರ್‌ನ ಜನವಸತಿ ಪ್ರದೇಶಕ್ಕೆ ನುಗ್ಗಿದ ಜಿಂಕೆಯನ್ನು ಅರಣ್ಯ ಇಲಾಖೆಯಿಂದ ಬಹಳ ಕಷ್ಟಪಟ್ಟು ಹಿಡಿದು, ವಾಪಾಸ್ ಕಾಡಿಗೆ ಬಿಟ್ಟಿದ್ದಾರೆ. ಜಲಂಧರ್‌ನ ಆದಂಪುರ್‌ನ ಜನವಸತಿ ಪ್ರದೇಶಕ್ಕೆ ಜಿಂಕೆ (Deer) ಇದ್ದಕ್ಕಿದ್ದಂತೆ ಬಂದಾಗ ಜನರು ಭಯಭೀತರಾದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ಆ ಜಿಂಕೆಯನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಯಿತು.
ಈ ಘಟನೆ ಆದಂಪುರ ಬಳಿಯ ವಸತಿ ಪ್ರದೇಶದಲ್ಲಿ ನಡೆದಿದ್ದು, ರಸ್ತೆಯಲ್ಲಿ ಜಿಂಕೆ ಓಡುತ್ತಿರುವುದನ್ನು ಜನರು ನೋಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಆ ಜಿಂಕೆಯನ್ನು ಬೀದಿ ನಾಯಿಗಳು ಬೆನ್ನಟ್ಟುತ್ತಿದ್ದವು. ಇದರಿಂದಾಗಿ ಅದು ತುಂಬಾ ಭಯಭೀತವಾಗಿ ಕಂಡಲ್ಲೆಲ್ಲ ಓಡುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

