ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ನಡೆಯುತ್ತಾ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಪತ್ತೆಯಾದ ನಂತರ, ಪುರಾತತ್ವ ಇಲಾಖೆ ಈ ಸ್ಥಳದ ಸೂಕ್ಷ್ಮ ಅಧ್ಯಯನಕ್ಕೆ ಮುಂದಾಗಿದೆ. ಪ್ರಾಚೀನ ಟಂಕಶಾಲೆ ಹಾಗೂ ರಾಜವಂಶಗಳ ಅವಶೇಷಗಳನ್ನು ಹೊಂದಿರುವ ಲಕ್ಕುಂಡಿಯಲ್ಲಿ, ರಾಜ್ಯ ಸರ್ಕಾರದಿಂದ ಮತ್ತಷ್ಟು ಉತ್ಖನನ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಅನುಮತಿಯಿಲ್ಲದೆ ನಿರ್ಮಾಣ ಕಾರ್ಯ ಮಾಡದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಗದಗ, ಜನವರಿ 11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾಗಿದ್ದು, ಆ ಬೆನ್ನಲ್ಲೇ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಈ ಪ್ರದೇಶವನ್ನು ಹಿಂದೆ ಚಿನ್ನದ ನಾಣ್ಯಗಳನ್ನು ತಯಾರಿಸುವ ಟಂಕಶಾಲೆ ಎಂದು ಗುರುತಿಸಲಾಗಿದ್ದು,ರಾಜ ಮಹಾರಾಜರ ಅವಶೇಷಗಳು ಮತ್ತು ನೂರಾರು ಬಾವಿಗಳು ಇಲ್ಲಿದ್ದ ಬಗ್ಗೆ ದಾಖಲೆಗಳಿವೆ. ಹೀಗಾಗಿ ನಿಧಿ ಪತ್ತೆಯಾದ ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ಖನನ ನಡೆಯಲಿದೆ. ಇದರಿಂದ ಗ್ರಾಮದ ಇತಿಹಾಸದ ಕುರಿತು ಇನ್ನಷ್ಟು ಮಹತ್ವದ ಅಂಶಗಳು ಹೊರಬರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 11, 2026 02:20 PM
