Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದಲ್ಲಿ ಶೌರ್ಯ ಯಾತ್ರೆ ನಡೆಸಿದರು. ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿದರು. ಈ ವೇಳೆ ಕೇರಳದ ಸಾಂಪ್ರದಾಯಿಕ ಚೆಂಡೆಯನ್ನು ಬಾರಿಸಿ ಗಮನ ಸೆಳೆದರು. 108 ಕುದುರೆಗಳ ಮೆರವಣಿಗೆ ಶೌರ್ಯ ಮತ್ತು ತ್ಯಾಗದ ಸಂಕೇತವಾಗಿತ್ತು. ಘಜ್ನಿ, ಔರಂಗಜೇಬರ ದಾಳಿಯ ಹೊರತಾಗಿಯೂ ಸೋಮನಾಥ ದೇವಾಲಯ ಅಚಲವಾಗಿ ನಿಂತಿದೆ ಎಂದು ಮೋದಿ ಹೇಳಿದರು.
ಅಹಮದಾಬಾದ್, ಜನವರಿ 11: ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಶೌರ್ಯ ಯಾತ್ರೆಯನ್ನು ನಡೆಸಿದ್ದಾರೆ. ಈ ವೇಳೆ ಕೇರಳದ ಚೆಂಡೆಯನ್ನು ಬಾರಿಸಿ ಎಲ್ಲರ ಗಮನ ಸೆಳೆದರು. ಇದೀಗ ಈ ವಿಡಿಯೋವನ್ನು ಬಿಜೆಪಿ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಶೌರ್ಯ ಯಾತ್ರೆಯು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು. ಪ್ರಧಾನಿ ಮೋದಿ ಮತ್ತೆ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

