ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಹೋರಾಟ ವಿಚಾರ; ಮಹಿಳೆಯರ ತಲೆ ಮೇಲೆ ಕೈ ಇಟ್ಟು ನ್ಯಾಯ ಕೊಡಿಸುತ್ತೇನೆಂದ ಸಿಎಂ ಬೊಮ್ಮಾಯಿ

ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ವಿಚಾರ ಮಾಡುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಏನು ಸಹಾಯ ಮಾಡಲು ಆಗುತ್ತದೆ, ಅದನ್ನು ಮಾಡುತ್ತೇನೆ ಎಂದು ಮಹಿಳೆಯರ ತಲೆ ಮೇಲೆ ಕೈ ಇಟ್ಟು ನ್ಯಾಯ ಕೊಡಿಸುತ್ತೇನೆಂದ ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಹೋರಾಟ ವಿಚಾರ; ಮಹಿಳೆಯರ ತಲೆ ಮೇಲೆ ಕೈ ಇಟ್ಟು ನ್ಯಾಯ ಕೊಡಿಸುತ್ತೇನೆಂದ ಸಿಎಂ ಬೊಮ್ಮಾಯಿ
ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 28, 2022 | 2:36 PM

ಹಾವೇರಿ: ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ (women) ಯರ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ಸಮಸ್ಯೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಆಲಿಸಿದ್ದಾರೆ. ಸಿಎಂ ಮುಂದೆ ಸಮಸ್ಯೆ ಹೇಳಿದ ಮಹಿಳೆ ಶಾಂತಮ್ಮ ಕಣ್ಣೀರು ಹಾಕಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಣೆಬೆನ್ನೂರಲ್ಲಿ ವೈದ್ಯ 1500 ಜನರಿಗೆ ಗರ್ಭಕೋಶ ತೆಗೆದು ಅನ್ಯಾಯ ಮಾಡಿದ್ದಾನೆ ಅನ್ನೋ ಕೇಸ್ ನಡಿತಿದೆ. ಅವನ ಬಗ್ಗೆ ಈಗಾಗಲೆ ಹಲವು ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಇನ್ನೂ ಕೆಲವೆಲ್ಲ ಕೋರ್ಟಿನಲ್ಲಿವೆ. ಈ ಕುರಿತು ಸಮಗ್ರ ವರದಿ ಕೊಡಲು ಜಿಲ್ಲಾಧಿಕಾರಿಗೆ ಹೇಳಿದ್ದೇನೆ. ಸಮಗ್ರ ವರದಿ ಪಡೆದುಕೊಂಡು ಯಾರು ತಪ್ಪಿತಸ್ಥರು ಇದ್ದಾರೆ ಅವರಿಗೆ ಶಿಕ್ಷೆ ಮತ್ತು ಮಹಿಳೆಯರಿಗೆ ಏನಾದ್ರೂ ಸಹಾಯ ಸಾಧ್ಯವಿದ್ದರೆ ಖಂಡಿತವಾಗಿ ಸರಕಾರದಿಂದ ಸಹಾಯ ಮಾಡುತ್ತೇನೆ. ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಣೆ ವಿಚಾರ ಮಾಡುತ್ತೇನೆ. ಕಾನೂನಿನ ಚೌಕಟ್ಟಿನಲ್ಲಿ ಏನು ಸಹಾಯ ಮಾಡಲು ಆಗುತ್ತದೆ, ಅದನ್ನು ಮಾಡುತ್ತೇನೆ ಎಂದು ಮಹಿಳೆಯರ ತಲೆ ಮೇಲೆ ಕೈ ಇಟ್ಟು ನ್ಯಾಯ ಕೊಡಿಸುತ್ತೇನೆಂದ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಭೇಟಿ ನಂತರ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ ಮಂಜಮ್ಮ ಹೇಳಿಕೆ ನೀಡಿದ್ದು, ನಿಮಗ ಅನ್ಯಾಯ ಆಗಿದೆ, ಸಹಾಯ ಮಾಡ್ತೇನೆ. ನಿಮ್ಮ ಕಷ್ಟವನ್ನು ನಾನು ನೋಡಿದ್ದೇನೆ, ಪರಿಹಾರ ಕೊಡುತ್ತೇನೆ ಎಂದು ಆಣೆ ಮಾಡಿ ಹೋಗಿದ್ದಾರೆ. ನಿಮಗೆ ಅನ್ಯಾಯ ಮಾಡಿದವರಿಗೆ ನಾವು ಬಿಡುವುದಿಲ್ಲ ಎಂದರು. ನಿಮಗೆ ಸಹಾಯ ಮಾಡುತ್ತೇನೆ ಚಿಂತೆ ಮಾಡಬೇಡಮ್ಮ ಎಂದು ಆಣೆ ಮಾಡಿ ಹೋಗಿದ್ದಾರೆ. ಮಹಿಳೆಯರ ತಲೆ ಮೇಲೆ ಕೈ ಇಟ್ಟು ಸಿಎಂ ಹೇಳಿ ಹೋಗಿದ್ದಕ್ಕೆ ಪರಿಹಾರ ಸಿಗುವ ಭರವಸೆಯಲ್ಲಿ ಮಹಿಳೆಯರು ಹಾಗೂ ಹೋರಾಟಗಾರರು ವಾಪಸ್ಸಾಗಿದ್ದಾರೆ.

ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರು ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಸರ್ಕಾರಕ್ಕೆ (Government) ಆಗ್ರಹಿಸಿ ಹೋರಾಟ ನಡೆಸಿದ್ದರು. ಏಪ್ರಿಲ್ 25ರಿಂದ ಪಾದಯಾತ್ರೆ ಹೊರಟಿದ್ದರು. ಸದ್ಯ ಜಿಲ್ಲಾಡಳಿತ ಮಹಿಳೆಯರ ಬೇಡಿಕೆಯನ್ನು ಇಡೇರಿಸುವುದಾಗಿ ಭರವಸೆ ನೀಡಿದೆ. ಹೀಗಾಗಿ ಇಂದು (ಏಪ್ರಿಲ್ 27) ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ.ಶಾಂತ, ಸುಮಾರು 1,522 ಮಹಿಳೆಯರಿಗೆ ವಿನಾಕಾರಣ ಗರ್ಭಕೋಶವನ್ನೇ ತೆಗೆದು ಹಾಕಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯ ಡಾ.ಪಿ ಶಾಂತ ಟಿವಿ9ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಗೋಕಾಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಘಟನೆಯಾಗಿ ಈಗಾಗಲೇ ಹನ್ನೆರಡು ವರ್ಷ ಆಗಿದೆ. ಸರ್ಕಾರದ ಮಟ್ಟದಲ್ಲಿ ತನಿಖೆಯಾಗಿ ನನಗೆ ಮತ್ತೆ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ಅವಶ್ಯಕತೆ ಇದ್ದವರಿಗೆ ಅನುಮತಿ ಪತ್ರ ಪಡೆದು ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಈಗ 1500ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಿದ್ದೇನೆ ಅಂತಿದ್ದಾರೆ. ಇದರಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾತ್ರ ಇಲ್ಲಾ, ಎಲ್ಲಾ ಆಪರೇಷನ್ ಸೇರಿಸಿ ಹೇಳುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ;

ಬಾಲಿವುಡ್​ನಲ್ಲಿ ಹಾಸಿಗೆಯನ್ನೇ ಉದ್ದ ಮಾಡಿ ಕಾಲು ಚಾಚಿದ ರಾಕಿ; ‘ಟೈಗರ್..’, ‘ಪಿಕೆ’ ಕಲೆಕ್ಷನ್ ಹಿಂದಿಕ್ಕಿದ ‘ಕೆಜಿಎಫ್ 2’

ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್