ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP

ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP
ಪಿಎಸ್ಐ ಆಕ್ರಮದ ನಡುವೆ ಮತ್ತೊಂದು ಪ್ರಕರಣ ಬಯಲು; ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆದ ವಿಡಿಯೋ ಬಿಡುಗಡೆ ಮಾಡಿದ AAP

ಕಾಮಗಾರಿ ಬಿಲ್ ಮಂಜೂರಿಗಾಗಿ ಲಂಚ ಪಡೆಯುತ್ತಿರುವ ವಿಡಿಯೋ ಬಿಡುಗಡೆಯಾಗಿದೆ. ಲಂಚ ಸ್ವೀಕರಿಸಿದ ವಿಡಿಯೋವನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬಿಡುಗಡೆ ಮಾಡಿದ್ದಾರೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Apr 28, 2022 | 5:13 PM

ಕಲಬುರಗಿ: ಕೆಲ ದಿನಗಳ ಹಿಂದಷ್ಟೇ ಕಾಮಗಾರಿಯ ಬಿಲ್ ಆಗದೇ ಪರದಾಡಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇನ್ನು ಮಾಸಿಲ್ಲಾ. ಆದ್ರೆ ರಾಜ್ಯದಲ್ಲಿ ಗುತ್ತಿಗೆದಾರರಿಂದ ಅಧಿಕಾರಿಗಳು ಕಾಮಗಾರಿಯ ಬಿಲ್ ಮಂಜೂರು ಮಾಡಲು ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಗುತ್ತಿಗೆದಾರನಿಂದ ಇಂಜನೀಯರ್ ಹಣ ಪಡೆದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೋಡಿದರಲ್ಲಾ, ಹಣ ಕೊಟ್ಟಾಕ್ಷಣ ಮುಖ ಅರಳಿಸಿಕೊಂಡು, ನಗುತಾ ಎಷ್ಟು ಅಂತ ಕೇಳ್ತಾನೆ,,,ಎದುರಿಗಿದ್ದ ವ್ಯಕ್ತಿ, ಮೂವತ್ತು ಇದೆ ಅನ್ನೋದನ್ನು ಸಿಗ್ನಲ್ ಮೂಲಕ ತೋರಿಸಿದಾಗ ಕಡಿಮೆಯಾಯ್ತು ಅಂತಾನೆ. ಮೇಲಿನ ಅನೇಕರಿಗೆ ನೀಡಬೇಕು ಅಂತ ಬೇರೆ ಹೇಳ್ತಾನೆ. ಮೂರನೇ ಪಾರ್ಟಿ ಇನ್ಸಪೆಕ್ಸನ್ ಆಗಬೇಕು. ಅವರಿಗೂ ಕೊಡಬೇಕು ಅಂತ ಹೇಳ್ತಾನೆ. ಹಣ ಸಿಕ್ಕ ಮೇಲೆ, ನೀವು ಡೋಂಟ್ ವರಿ, ಎಲ್ಲಾ ನಾನು ಮಾಡಿಸಿಕೊಡ್ತೇನೆ. ನೀವು ವಿಳಂಭ ಮಾಡಿದ್ರೆ, ಇಲ್ಲದಿದ್ದರೆ, ನಿಮ್ಮ ಬಿಲ್ ಮೊದಲೇ ಆಗಬೇಕಿತ್ತು ಅಂತ ದೈರ್ಯ ಕೂಡಾ ಹೇಳ್ತಾನೆ. ಗುತ್ತಿಗೆದಾರ ಸರ್ ನಾನು ಸಾಲ ಮಾಡಿ ಹಣ ತಂದು ಕೊಡ್ತಿದ್ದೇನೆ ಅಂತ ಹೇಳ್ತಾನೆ. ಹೌದು ಈ ರೀತಿಯಾಗಿ ಹಣ ಪಡೆದಿರೋದು ಬೇರಲ್ಲೂ ಅಲ್ಲಾ, ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಅನ್ನೋದು ದುರ್ದೈವದ ಸಂಗತಿ. ಅಷ್ಟಕ್ಕೂ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಹೀಗೆ ಖುಲ್ಲಂ ಖುಲ್ಲಾ ಹಣ ಪಡೆದಿದ್ದು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜನೀಯರ ವೆಂಕಟೇಶ್ ಬಿರಾದಾರ್.

ಹೌದು ಕಲಬುರಗಿ ಜಿಲ್ಲೆಯ ಚಿಂಚೋಳಿ ಉಪ ವಿಭಾಗದಲ್ಲಿ ಸಹಾಯಕ ಇಂಜನೀಯರ್ ಆಗಿರುವ ವೆಂಕಟೇಶ್ ಬಿರಾದಾರ್, ರಸ್ತೆ ಕಾಮಗಾರಿಯ ಬಿಲ್ ಮಂಜುರು ಮಾಡಲು ಹಣ ಪಡೆಯುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಇಂದು ಬಿಡುಗಡೆ ಮಾಡಿದ್ದಾರೆ. ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನೆಡಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಗುತ್ತಿಗೆದಾರನ ಪರವಾಗಿ ತಾವೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪೋತಂಗಲ್ ಗ್ರಾಮದಲ್ಲಿ ಗುತ್ತಿಗೆದಾರನೋರ್ವ, ಒಂದು ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿಯನ್ನು ಮಾಡಿದ್ದಾನಂತೆ. ಕಳೆದ ಡಿಸೆಂಬರ್ ನಲ್ಲಿಯೇ ಕಾಮಗಾರಿ ಮುಗಿದಿದ್ದು, ಪೆಬ್ರವರಿಯಲ್ಲಿ ಬಿಲ್ ಆಗಬೇಕಿತ್ತಂತೆ. ಆದ್ರೆ ಅಧಿಕಾರಿಗಳಿಗೆ ಲಂಚ ನೀಡದೆ ಇದ್ದಿದ್ದರಿಂದ ಬಿಲ್ ನ್ನು ವಿಳಂಭ ಮಾಡಿದ್ದರಂತೆ. ಲೋಕೋಪಯಾಗಿ ಇಲಾಖೆಯ ಇಂಜನೀಯರ್ ವೆಂಕಟೇಶ್ ಬಿರಾದಾರ್, ಟೆಂಡರ್ ಮೊತ್ತದ ಒಂದು ಪರ್ಸೆಂಟೇಜ್ ತನಗೆ, ಎಇಇ, ಇಇ ಗೆ ಕೂಡಾ ಎರಡರಿಂದ ಮೂರು ಪರ್ಸೆಂಟೇಜ್ ಕೊಡಬೇಕು ಅಂತ ಹೇಳಿದ್ದನಂತೆ. ಆದ್ರೆ ಹತ್ತು ದಿನದ ಹಿಂದೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ವೆಂಕಟೇಶ್ ಬಿರಾದರ್ ನನ್ನು ಕೆರಸಿದ್ದ ಗುತ್ತಿಗೆದಾರ್, ಮೂವತ್ತು ಸಾವಿರ ಹಣವನ್ನು ನೀಡಿದ್ದ. ಹಣವನ್ನು ನೀಡುವ ವಿಡಿಯೋವನ್ನು ಕೂಡಾ ಮಾಡಿಕೊಳ್ಳಲಾಗಿತ್ತು.

ಕೆಲ ದಿನಗಳ ಹಿಂದಷ್ಟೇ ಕಾಮಗಾರಿ ನಡೆಸಿದ ಬಿಲ್ ಗಾಗಿ ಅಂದಿನ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ನಲವತ್ತು ಪರ್ಸೆಂಟೇಜ್ ಕೇಳಿದ್ದಾರೆ. ಕಮಿಷನ್ ನೀಡದೆ ಇದ್ದಿದ್ದಕ್ಕೆ ತನ್ನ ಬಿಲ್ ಪಾಸ್ ಮಾಡಿಸಿಲ್ಲಾ ಅಂತ ಆರೋಪಿಸಿ, ಬೆಳಗಾವಿಯೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣ ಮಾಸುವ ಮುನ್ನವೇ, ಕಲಬುರಗಿಯಲ್ಲಿ ಅಧಿಕಾರಿಗಳು ಬಿಲ್ ಪಾಸ್ ಮಾಡಲು ಹಣಕ್ಕೆ ಬೇಡಿಕೆ ಇಟ್ಟು, ಹಣ ಪಡೆದಿರುವ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗಿದೆ. ಇನ್ನು ರಾಜ್ಯ ಸರ್ಕಾರ ನಲವತ್ತು ಪರ್ಸೆಂಟ್ ಸರ್ಕಾರವಿದೆ. ಇಲ್ಲಿ ಹಣ ನೀಡಿದ್ರೆ ಮಾತ್ರ ಬಿಲ್ ಆಗುತ್ತದೆ ಅಂತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೇ ನೀಡಲು ಇಂಜನೀಯರ್ ವೆಂಕಟೇಶ್ ಬಿರಾದಾರ್ ನನ್ನು ಟಿವಿ9 ತಂಡ ಸಂಪರ್ಕಿಸಿತು. ಆದ್ರೆ ಅವರು ಕಾಲ್ ರಿಶಿವ್ ಮಾಡಿಲ್ಲಾ. ಮೆಸೆಜ್ ಗೆ ಕೂಡಾ ಉತ್ತರಿಸಿಲ್ಲಾ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಕೇಳಿದ್ರೆ, ಶಾಸಕರಿಗೆ ಸೇರಿದಂತೆ ಅನೇಕರಿಗೆ ಹಣ ನೀಡಬೇಕಾಗುತ್ತದೆ. ನೀವು ಏನ ಬೇಕಾದ್ರು ಮಾಡಿಕೊಳ್ಳಿ ಅಂತ ಹೇಳಿದ್ದಾರಂತೆ. ಈ ಬಗ್ಗೆ ತನಿಖೆಯಾದ್ರೆ ಅಕ್ರಮದ ಡೀಲ್ ಹೊರಬೀಳುತ್ತದೆ.

ಸಂಜಯ್.ಟಿವಿ9 ಕಲಬುರಗಿ

ಇದನ್ನೂ ಓದಿ: ‘ರಾಜ್​ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರನ್ನು ಬಾಲಿವುಡ್​ ಗುರುತಿಸಲಿಲ್ಲ’; ತೆಲುಗು ನಟ ಚಿರಂಜೀವಿ ಬೇಸರ

Follow us on

Related Stories

Most Read Stories

Click on your DTH Provider to Add TV9 Kannada