AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜ್​ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರನ್ನು ಬಾಲಿವುಡ್​ ಗುರುತಿಸಲಿಲ್ಲ’; ತೆಲುಗು ನಟ ಚಿರಂಜೀವಿ ಬೇಸರ

ಪಾರ್ಟಿ ಏರ್ಪಡಿಸಿದ್ದ ಸ್ಥಳದಲ್ಲಿ ಪೃಥ್ವಿರಾಜ್​ ಕಪೂರ್ ಅವರಿಂದ ಹಿಡಿದು ಅಮಿತಾಭ್​ ಬಚ್ಚನ್​ವರೆಗೆ ಎಲ್ಲಾ ಬಾಲಿವುಡ್ ಸ್ಟಾರ್ ನಟರ​ ಫೋಟೋಗಳಿದ್ದವು. ಅವರು ಮಾಡಿದ ಸಾಧನೆ ಏನು ಎಂಬುದನ್ನು ಬರೆಯಲಾಗಿತ್ತು. ಆದರೆ, ದಕ್ಷಿಣ ಭಾರತದ ಖ್ಯಾತ ನಟರ ಫೋಟೋಗಳು ಅಲ್ಲಿ ಇರಲಿಲ್ಲ.  

‘ರಾಜ್​ಕುಮಾರ್, ವಿಷ್ಣುವರ್ಧನ್ ಅವರಂತಹ ದಿಗ್ಗಜರನ್ನು ಬಾಲಿವುಡ್​ ಗುರುತಿಸಲಿಲ್ಲ’; ತೆಲುಗು ನಟ ಚಿರಂಜೀವಿ ಬೇಸರ
ರಾಜ್​ಕುಮಾರ್-ಚಿರಂಜೀವಿ-ವಿಷ್ಣುವರ್ಧನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Apr 28, 2022 | 1:55 PM

Share

ಬಾಲಿವುಡ್​ನಲ್ಲಿ (Bollywood) ಈಗ ದಕ್ಷಿಣ ಭಾರತದ ಸಿನಿಮಾಗಳು ಪಾರುಪತ್ಯ ಸಾಧಿಸಿವೆ. ಆದರೆ, ಮೊದಲು ಈ ರೀತಿ ಇರಲಿಲ್ಲ. ಬಾಲಿವುಡ್ ಎಂದರೆ ಭಾರತೀಯ ಚಿತ್ರರಂಗ, ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂದು ಬಿಂಬಿಸಲಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳಿಗೆ ಪ್ರಾದೇಶಿಕ ಸಿನಿಮಾಗಳು ಎನ್ನುವ ಹಣೆಪಟ್ಟಿ ಕಟ್ಟಲಾಗಿತ್ತು. ಇದರಿಂದ ಸ್ಟಾರ್ ನಟ ಚಿರಂಜೀವಿಗೆ (Chiranjeevi) ಅವಮಾನ ಆಗಿತ್ತು. ದಕ್ಷಿಣದವರನ್ನು ಈ ರೀತಿ ಕಡೆಗಣಿಸಿದ್ದಕ್ಕೆ ತುಂಬಾನೇ ಬೇಸರ ಆಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದಾರೆ. ಒಂದು ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ.

ಅದು 1989ರಲ್ಲಿ ನಡೆದ ಘಟನೆ. ಚಿರಂಜೀವಿ ನಟನೆಯ ‘ರುದ್ರವೇಣಿ’ ಸಿನಿಮಾಗೆ ‘ನರ್ಗೀಸ್ ದತ್​ ಅವಾರ್ಡ್’​ ಸಿಕ್ಕಿತ್ತು. ಈ ಅವಾರ್ಡ್ ಪಡೆಯಲು ಅವರು ದೆಹಲಿಗೆ ತೆರಳಿದ್ದರು. ಈ ಕಾರ್ಯಕ್ರಮದ ಹಿಂದಿನ ದಿನ ಒಂದು ಟೀ ಪಾರ್ಟಿ ಏರ್ಪಡಿಸಲಾಗಿತ್ತು. ಇದರಲ್ಲಿ ಚಿರಂಜೀವಿ ಭಾಗಿ ಆಗಿದ್ದರು.

ಪಾರ್ಟಿ ಏರ್ಪಡಿಸಿದ್ದ ಸ್ಥಳದಲ್ಲಿ ಪೃಥ್ವಿರಾಜ್​ ಕಪೂರ್ ಅವರಿಂದ ಹಿಡಿದು ಅಮಿತಾಭ್​ ಬಚ್ಚನ್​ವರೆಗೆ ಎಲ್ಲಾ ಬಾಲಿವುಡ್ ಸ್ಟಾರ್ ನಟರ​ ಫೋಟೋಗಳಿದ್ದವು. ಅವರು ಮಾಡಿದ ಸಾಧನೆ ಏನು ಎಂಬುದನ್ನು ಬರೆಯಲಾಗಿತ್ತು. ಆದರೆ, ದಕ್ಷಿಣ ಭಾರತದ ಖ್ಯಾತ ನಟರ ಫೋಟೋಗಳು ಅಲ್ಲಿ ಇರಲಿಲ್ಲ.

‘ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಏನನ್ನಾದರೂ ಬರೆದಿರುತ್ತಾರೋ ಎಂಬುದನ್ನು ನೋಡಿದೆ. ಆದರೆ, ಅಲ್ಲಿ ಜಯಲಲಿತಾ-ಎಂಜಿಆರ್ ಒಟ್ಟಾಗಿ ಇರುವ ಒಂದು ಸ್ಟಿಲ್ ಹಾಗೂ ಪ್ರೇಮ್ ನಜೀರ್ ಫೋಟೋವನ್ನು ಹಾಕಿ, ಇದಕ್ಕೆ ಅವರು ಅದನ್ನು ದಕ್ಷಿಣ ಭಾರತದ ಸಿನಿಮಾ ಎಂದು ಕರೆದಿದ್ದರು. ದಿಗ್ಗಜರಾದ ರಾಜ್​ಕುಮಾರ್, ವಿಷ್ಣುವರ್ಧನ್, ಎನ್.ಟಿ. ರಾಮರಾವ್, ನಾಗೇಶ್ವರರಾವ್, ಶಿವಾಜಿ ಗಣೇಶನ್ ಅಥವಾ ನಮ್ಮ ಇಂಡಸ್ಟ್ರಿಯ ಖ್ಯಾತ ಚಿತ್ರ ನಿರ್ದೇಶಕರನ್ನು ಅವರು ಗುರುತಿಸಲಿಲ್ಲ. ಆ ಕ್ಷಣ ನನಗೆ ತುಂಬಾ ಅವಮಾನವಾಯಿತು. ಅವರು ಹಿಂದಿ ಚಿತ್ರರಂಗವನ್ನು ಭಾರತೀಯ ಸಿನಿಮಾ ಎಂದು ಬಿಂಬಿಸಿದರು. ಇತರ ಚಿತ್ರಗಳನ್ನು ಪ್ರಾದೇಶಿಕ ಸಿನಿಮಾಗಳು ಎಂದು ವರ್ಗೀಕರಿಸಿದರು ಮತ್ತು ಗೌರವವನ್ನು ನೀಡಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಚಿರಂಜೀವಿ.

‘ಆರ್​ಆರ್​ಆರ್ ಚಿತ್ರದಿಂದ ನಮ್ಮ ನಿರ್ದೇಶಕರು, ನಟರು ಹಾಗೂ ಇಲ್ಲಿನ ಬರಹಗಾರರನ್ನು ಅವರು ಗುರುತಿಸುವಂತಾಯಿತು. ಯಶ್ ನಟನೆಯ ಕೆಜಿಎಫ್ 2 ಹಾಗೂ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಮಾಡಿದ ಸಾಧನೆ ಕೂಡ ದೊಡ್ಡದು. ಈ ಮೂರು ಚಿತ್ರಗಳ ಯಶಸ್ಸಿನಿಂದ ನಮ್ಮ ಹೀರೋಗಳು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ

‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

Published On - 1:55 pm, Thu, 28 April 22

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ