Health Tips: ಹಾಲು ಮತ್ತು ಮಾಂಸವನ್ನು ಒಟ್ಟಿಗೆ ಸೇವಿಸಲೇ ಬೇಡಿ, ಸೇವಿಸಿದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ

ಮಾಂಸಹಾರಿ ಆಹಾರದೊಂದಿಗೆ ಹಾಲನ್ನು ಸಂಯೋಜಿಸಿ ಸೇವಿಸುವುದು ಆರೋಗ್ಯಕ್ಕೆ ಹಾನಿತಂದೊಡ್ಡಬಹುದು ಎಂದು ಆಯುರ್ವೇದ ವೈದ್ಯೆ ಡಾ.ನಿತಿಕಾ ಕೊಹ್ಲಿ ಹೇಳುತ್ತಾರೆ. ಹಾಗಿದ್ದರೆ ಎಷ್ಟು ಗಂಟೆಯ ಅಂತರದಲ್ಲಿ ಅವರೆಡನ್ನು ಸೇವಿಸಬೇಕು? ಇಲ್ಲಿದೆ ಮಾಹಿತಿ.

Health Tips: ಹಾಲು ಮತ್ತು ಮಾಂಸವನ್ನು ಒಟ್ಟಿಗೆ ಸೇವಿಸಲೇ ಬೇಡಿ, ಸೇವಿಸಿದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on: Jul 04, 2022 | 7:02 AM

ಊಟದ ನಂತರ ಅಥವಾ ಊಟ ಮಾಡುವಾಗ ಸಾಮಾನ್ಯವಾಗಿ ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ. ಇದು ನಿಮ್ಮ ತಿನ್ನುವ ಅನುಭವವನ್ನು ಉತ್ಕೃಷ್ಟಗೊಳಿಸಬಹುದಾದರೂ ಆಯುರ್ವೇದವು ಹಾಲಿನ ಉತ್ಪನ್ನಗಳನ್ನು ಉಪ್ಪುಸಹಿತ ಊಟಗಳೊಂದಿಗೆ ಸಂಯೋಜಿಸುವ ಅಭ್ಯಾಸವನ್ನು ಬೆಂಬಲಿಸುವುದಿಲ್ಲ, ವಿಶೇಷವಾಗಿ ಅಂತಹ ಆಹಾರ ಮಾಂಸಾಹಾರಿ ಆಗಿದ್ದರೆ. ಆಯುರ್ವೇದದಲ್ಲಿ ಕೆಲವು ಆಹಾರ ಸಂಯೋಜನೆಗಳನ್ನು ನಿಷೇಧಿಸಲಾಗಿದೆ ಮತ್ತು ವಿರುದ್ಧ ಆಹಾರ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಒಟ್ಟಿಗೆ ಸೇವಿಸಿದರೆ ಜೀರ್ಣಕಾರಿ ತೊಂದರೆ, ಚರ್ಮದ ಸಮಸ್ಯೆ ಸೇರಿದಂತೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: Cancer: ರೋಗಿಯು ನಿದ್ರೆಯಲ್ಲಿದ್ದಾಗ ಕ್ಯಾನ್ಸರ್ ಕೋಶಗಳು ದೇಹದ ಇತರೆ ಭಾಗಕ್ಕೆ ಚಲಿಸುತ್ತವೆ!

ಪುರಾತನ ವೈದ್ಯಕೀಯ ಪದ್ಧತಿಯ ಪ್ರಕಾರ ಉಪ್ಪು ಮತ್ತು ಹಾಲು, ಮಾಂಸಾಹಾರಿ ಆಹಾರ ಮತ್ತು ಹಾಲು ಕೆಟ್ಟ ಸಂಯೋಜನೆಯಾಗಿದೆ. ಆಯುರ್ವೇದ ವೈದ್ಯೆ ಡಾ.ನಿತಿಕಾ ಕೊಹ್ಲಿ ಹೇಳುವಂತೆ, ವಿಭಿನ್ನ ಜೀರ್ಣಕಾರಿ ಪರಿಸರಕ್ಕೆ ಅಗತ್ಯವಿರುವ ಆಹಾರಗಳನ್ನು ಪ್ರತ್ಯೇಕವಾಗಿ ಸೇವಿಸುವ ಅಗತ್ಯದ ಬಗ್ಗೆ ಆಯುರ್ವೇದದ ತತ್ವ ಹೇಳುತ್ತದೆ ಎಂದಿದ್ದಾರೆ. ಆರೋಗ್ಯವನ್ನು ಹಾಳುಮಾಡುವುದನ್ನು ತಪ್ಪಿಸಲು ಸರಿಯಾದ ಸಮಯ ಅಥವಾ ಮಧ್ಯಂತರದಲ್ಲಿ ಸರಿಯಾದ ಸಂಯೋಜನೆಯ ಆಹಾರ ತಿನ್ನುವುದು ಕಡ್ಡಾಯವಾಗಿದೆ.

ಹಾಲಿನ ಜೀರ್ಣಕ್ರಿಯೆ ಪ್ರಕ್ರಿಯೆಯು ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ಕೋಳಿ ಮಾಂಸದ ಜೀರ್ಣಕ್ರಿಯೆಗಿಂತ ಭಿನ್ನವಾಗಿದೆ. ಹೀಗಾಗಿ ಹಾಲಿನ ಜೀರ್ಣಕ್ರಿಯೆ ಪ್ರಕ್ರಿಯೆಯು ಕೋಳಿಯೊಂದಿಗೆ ಅಥವಾ ಯಾವುದೇ ಮಾಂಸಾಹಾರಿ ಆಹಾರದೊಂದಿಗೆ ಸಂಯೋಜಿಸಿ ಸೇವಿಸುವುದು ಉತ್ತಮ ಉಪಾಯವಲ್ಲ ಎಂದು ಡಾ.ಕೊಹ್ಲಿ ತಮ್ಮ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. “ಹಾಲು ಮತ್ತು ಚಿಕನ್ ಸೇವನೆಯು ದೇಹದಲ್ಲಿ ವಿಷಕಾರಿ ಅಂಶಗಳನ್ನು ಅಭಿವೃದ್ಧಿಪಡಿಸಲು ಮತ್ತು ಶೇಖರಣೆಗೆ ಕಾರಣವಾಗಬಹುದು” ಎಂದಿದ್ದಾರೆ.

ಇದನ್ನೂ ಓದಿ: Swollen Gums: ಮಕ್ಕಳ ವಸಡಿನಲ್ಲಿ ಊತ ಕಾಣಿಸಿಕೊಳ್ಳಲು ಕಾರಣಗಳೇನು?

ಹಾಲು ಮತ್ತು ಮಾಂಸದ ಸಂಯೋಜನೆಯ ಸೇವನೆಯು ದೀರ್ಘಾವಧಿಯಲ್ಲಿ ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹೊಟ್ಟೆ ನೋವು, ವಾಕರಿಕೆ, ಅಜೀರ್ಣ, ಗ್ಯಾಸ್ಟಿಕ್, ಉಬ್ಬುವಿಕೆ, ಹುಣ್ಣುಗಳು, ಕೆಟ್ಟ ವಾಸನೆ, ಮಲಬದ್ಧತೆ, ಆಸಿಡ್ ರಿಫ್ಲಕ್ಸ್ ಮತ್ತು ಅನೇಕ ತೀವ್ರವಾದ ಚರ್ಮದ ಅಸ್ವಸ್ಥತೆಗಳಂತಹ ಕರುಳಿನ ಸಂಬಂಧಿತ ಸಮಸ್ಯೆಗಳು ಬರಬಹುದು” ಎಂದು ಹೇಳಿದ್ದಾರೆ.

ಹಾಲು ಮತ್ತು ಮಾಂಸವನ್ನು ಪ್ರತ್ಯೇಕವಾಗಿ ಹಾಗೂ 2 ಗಂಟೆಗಳ ಅಂತರದಲ್ಲಿ ಸೇವಿಸುವುದು ಸೂಕ್ತ ಎಂದು ಹೇಳುವ ಡಾ.ಕೊಹ್ಲಿ, ಆರೋಗ್ಯಕರ ಆಹಾರಕ್ರಮವನ್ನು ಅನುಸರಿಸದರಿವುದು ಕರುಳು ಅಥವಾ ಹೊಟ್ಟೆಯ ಮೇಲೆ ಅನಗತ್ಯ ಹೊರೆಗಳನ್ನು ಹಾಕಿದಂತಾಗುತ್ತದೆ, ಇದು ಅನಿವಾರ್ಯ ಕಾಯಿಲೆಗಳಿಗೆ ಕಾರಣವಾಗಬಹುದು” ಎಂದಿದ್ದಾರೆ.

ಇದನ್ನೂ ಓದಿ: Mental Health: ನಿದ್ರೆಯಲ್ಲಿ ಮಾತನಾಡುವುದು ಕೂಡ ಮಾನಸಿಕ ಸಮಸ್ಯೆಯಾಗಿರಬಹುದು

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ