AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fruits Juice: ಹಣ್ಣಿನ ಜೂಸ್ ಕುಡಿಯುವವರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ, ಬದಲಿಗೆ ಈ ವಿಧಾನಗಳನ್ನು ಅನುಸರಿಸಿ

ಜೂಸ್ ತಯಾರಿಸುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ. ಇದರಿಂದ ಅದರ ರುಚಿಯೂ ಕೂಡ ಹಾಳಾಗುತ್ತದೆ.

Fruits Juice: ಹಣ್ಣಿನ ಜೂಸ್ ಕುಡಿಯುವವರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ, ಬದಲಿಗೆ ಈ ವಿಧಾನಗಳನ್ನು ಅನುಸರಿಸಿ
ಹಣ್ಣಿನ ಜೂಸ್
TV9 Web
| Edited By: |

Updated on: Jul 04, 2022 | 7:15 AM

Share

ಮನೆಯಲ್ಲಿ ತಯಾರಿಸಲಾಗುವ ಹಣ್ಣಿನ ಜೂಸ್(Fruits Juice), ಆಚೆ ಅಂಗಡಿಗಳಲ್ಲಿ ಸಿಗುವ ಜೂಸ್ಗಿಂತ ಹೆಚ್ಚು ಪ್ರಯೋಜನಕಾರಿ. ಆದರೆ ಜೂಸನ್ನು ಮಾಡುವ ಸರಿಯಾದ ಮಾರ್ಗ ತಿಳಿಯಬೇಕು. ಹೆಚ್ಚಿನವರು ಮನೆಯಲ್ಲಿ ಜ್ಯೂಸ್ ತಯಾರಿಸಲು ಜೂಸರ್ ಮಿಕ್ಸರ್ ಬಳಸುತ್ತಾರೆ. ಆದರೆ ಜೂಸ್ ತಯಾರಿಸುವಾಗ ಕೆಲವು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇದನ್ನು ಮಾಡದಿದ್ದರೆ ಅದರ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯುವುದಿಲ್ಲ. ಇದರಿಂದ ಅದರ ರುಚಿಯೂ ಕೂಡ ಹಾಳಾಗುತ್ತದೆ. ಹಾಗಾಗಿ ಸರಿಯಾದ ಮಾರ್ಗದಲ್ಲಿ ಜೂಸ್ ತಯಾರಿಸಿ ಅದರ ಆರೋಗ್ಯದ(Health) ಪ್ರಯೋಜನಗಳನ್ನು ಪಡೆಯಿರಿ.

ಹಣ್ಣಿನ ಜೂಸ್ ಮಾಡುವಾಗ ಅನುಸರಿಸಬೇಕಾದ ವಿಧಾನಗಳು 1.ತರಕಾರಿಯನ್ನು ಫ್ರಿಡ್ಜ್ನಲ್ಲಿ ಇಡಬಹುದು ಆದ್ರೆ, ಜೂಸನ್ನು ಫ್ರಿಡ್ಜ್ನಲ್ಲಿಟ್ಟು ಕುಡಿಯಬಾರದು. ಇದು ಜೂಸಿನ ಪೌಷ್ಟಿಕಾಂಶದ ಮೌಲ್ಯವನ್ನು ಕಡಿಮೆ ಮಾಡುತ್ತದೆ 2. ಜೂಸ್ ತಯಾರಿಸಿ ಹೆಚ್ಚು ಸಮಯ ಕಾಯಿಸದೆ ಫ್ರೆಶ್ ಜೂಸನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು 3. ಕಾಯಿಲೆಗಾಗಿಯೇ ಜೂಸ್ ಕುಡಿಯುವವರು ಖಾಲಿ ಹೊಟ್ಟೆಯಲ್ಲಿ ಬೆಳಗಿನ ಜಾವ ಜೂಸ್ ತೆಗೆದುಕೊಳ್ಳಬೇಕು 4. ಜೂಸ್ ಕುಡಿದ ಅರ್ಧ ಗಂಟೆಯ ನಂತರ ಏನನ್ನಾದರೂ ತಿನ್ನಬಹುದು 5. ಒಂದು ಸಮಯಕ್ಕೆ ಒಂದು ಗ್ಲಾಸ್ ಕುಡಿಯುವುದು ಸೂಕ್ತ 6. ಕಾಯಿಲೆಗಾಗಿ ಜೂಸ್ ಕುಡಿಯುವವರು ಕನಿಷ್ಠ ಎರಡು ದಿವಸಕ್ಕೆ ಒಮ್ಮೆಯಾದರೂ ಕುಡಿಯಬೇಕು. ಅಥವಾ ಪ್ರತಿ ದಿನ ಜೂಸ್ ಕುಡಿದರೂ ಯಾವುದೇ ತೊಂದರೆ ಇಲ್ಲ 7. ತರಕಾರಿ ಜೂಸ್ ಮಾಡುವ ಮುನ್ನ ಆ ತರಕಾರಿಯನ್ನು ಉಪ್ಪು ನೀರಿನಲ್ಲಿ ತೊಳೆಯುವುದು ಸೂಕ್ತ 8. ಜೂಸ್ಗೆ ಸಕ್ಕರೆಯನ್ನು ಬಳಸಬಾರದು ಜೇನುತುಪ್ಪ ಯೋಗ್ಯ 9. ಡಯಟ್ ಮಾಡುವವರು ಎರಡರಿಂದ ಮೂರು ತರಕಾರಿಗಳನ್ನು ಕೂಡಿಸಿ ಜೂಸ್ ಕುಡಿಯಬಹುದು 10. ಹಣ್ಣಿನಲ್ಲಿ ಬೀಜಗಳಿದ್ದರೆ ಅವುಗಳನ್ನು ತೆಗೆಯಿರಿ. ಬೀಜಗಳಿಂದ ಜೂಸಿನ ರುಚಿ ಹಾಳಾಗುತ್ತದೆ ಮತ್ತು ಅದರಿಂದ ನಿಮಗೆ ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ 11. ಕಹಿ ರುಚಿಯನ್ನು ಹೊಂದಿರುವ ಎಲ್ಲಾ ತರಕಾರಿಗಳನ್ನು ಮಿಶ್ರಣ ಮಾಡಬೇಡಿ. ಇದು ಜೂಸಿನ ರುಚಿಯನ್ನು ಹಾಳು ಮಾಡುತ್ತದೆ ಮತ್ತು ನೀವು ಅದನ್ನು ಕುಡಿಯಲು ಸಾಧ್ಯವಾಗುವುದಿಲ್ಲ

ಇದನ್ನೂ ಓದಿ: ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗವಾಗಿರುತ್ತದೆ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಿತ್ ಶಾ