Cancer: ರೋಗಿಯು ನಿದ್ರೆಯಲ್ಲಿದ್ದಾಗ ಕ್ಯಾನ್ಸರ್ ಕೋಶಗಳು ದೇಹದ ಇತರೆ ಭಾಗಕ್ಕೆ ಚಲಿಸುತ್ತವೆ!

ರೋಗಿಯು ನಿದ್ರೆಯಲ್ಲಿದ್ದಾಗ ಕ್ಯಾನ್ಸರ್​ನ ಕೋಶಗಳು ದೇಹದ ಇತರೆ ಭಾಗಗಳಿಗೆ ಚಲಿಸುತ್ತವೆ ಎಂಬುದನ್ನು ಹೊಸ ಸಂಶೋಧನೆಯೊಂದು ಪತ್ತೆ ಹಚ್ಚಿದೆ. ವೈದ್ಯಕೀಯ ವಿಜ್ಞಾನ ಎಷ್ಟೇ ಪ್ರಗತಿ ಹೊಂದಿದ್ದರೂ ಕ್ಯಾನ್ಸರ್ ಅನ್ನು ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದಾದರೂ, ಇದು ಇನ್ನೂ ಮಾರಣಾಂತಿಕವಾಗಿ ಉಳಿದಿದೆ.

Cancer: ರೋಗಿಯು ನಿದ್ರೆಯಲ್ಲಿದ್ದಾಗ ಕ್ಯಾನ್ಸರ್ ಕೋಶಗಳು ದೇಹದ ಇತರೆ ಭಾಗಕ್ಕೆ ಚಲಿಸುತ್ತವೆ!
Cancer
Follow us
TV9 Web
| Updated By: ನಯನಾ ರಾಜೀವ್

Updated on: Jul 03, 2022 | 4:18 PM

ರೋಗಿಯು ನಿದ್ರೆಯಲ್ಲಿದ್ದಾಗ ಕ್ಯಾನ್ಸರ್​ನ ಕೋಶಗಳು ದೇಹದ ಇತರೆ ಭಾಗಗಳಿಗೆ ಚಲಿಸುತ್ತವೆ ಎಂಬುದನ್ನು ಹೊಸ ಸಂಶೋಧನೆಯೊಂದು ಪತ್ತೆ ಹಚ್ಚಿದೆ. ವೈದ್ಯಕೀಯ ವಿಜ್ಞಾನ ಎಷ್ಟೇ ಪ್ರಗತಿ ಹೊಂದಿದ್ದರೂ ಕ್ಯಾನ್ಸರ್ ಅನ್ನು ಸ್ವಲ್ಪ ಮಟ್ಟಿಗೆ ಗುಣಪಡಿಸಬಹುದಾದರೂ, ಇದು ಇನ್ನೂ ಮಾರಣಾಂತಿಕವಾಗಿ ಉಳಿದಿದೆ.

ವಿಶೇಷವಾಗಿ ಈ ಕೋಶಗಳು ರಕ್ತಕ್ಕೆ ಸಂಚರಿಸಿ ರಕ್ತದ ಮೂಲಕ ದೇಹದ ಮತ್ತೊಂದು ಅಂಗಕ್ಕೆ ತಗುಲುತ್ತದೆ. ಮೆಟಾಸ್ಟ್ಯಾಟಿಕ್ ಕ್ಯಾನ್ಸರ್ ಎಂದರೆ ದೇಹದ ಒಂದು ಭಾಗದಲ್ಲಿ ಹುಟ್ಟಿಕೊಂಡ ಗಡ್ಡೆಯ ಕೋಶಗಳು ರಕ್ತದ ಮೂಲಕ ಇನ್ನೊಂದು ಭಾಗಕ್ಕೆ ಜಿಗಿಯುವುದು.

ಸ್ತನ ಕ್ಯಾನ್ಸರ್​ಗೆ ತುತ್ತಾಗಿರುವ ಒಟ್ಟು 30 ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು, ಅವರನ್ನು ಹಗಲು ಮತ್ತು ರಾತ್ರಿ ಎರಡು ಬಾರಿ ಪರೀಕ್ಷೆ ಮಾಡಲಾಗುತ್ತಿತ್ತು. ಹಗಲಿಗಿಂತ ರಾತ್ರಿ ಸಮಯದಲ್ಲಿ ಕ್ಯಾನ್ಸರ್ ಕೋಶಗಳು ಚಲಿಸುತ್ತವೆ ಎಂಬುದು ತಿಳಿದುಬಂದಿದೆ.

ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಕಳಪೆ ಆಹಾರ ಆಯ್ಕೆಗಳು ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಸಂಬಂಧಿ ರೋಗಗಳಿಗೆ ಕಾರಣವಾಗಬಹುದು. ಕೆಲವರಿಗೆ ಸಮಯಕ್ಕೆ ಸರಿಯಾಗಿ ಪತ್ತೆಯಾದರೆ ಚಿಕಿತ್ಸೆ ನೀಡಬಹುದಾದರೂ, ಕ್ಯಾನ್ಸರ್‌ನಂತಹ ರೋಗಗಳು ಜೀವಕ್ಕೆ ಅಪಾಯವನ್ನುಂಟು ಮಾಡುತ್ತವೆ.

ನಿಮ್ಮ ಆಹಾರದ ಆಯ್ಕೆ ಹೇಗೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ? ವಿಶ್ವಾದ್ಯಂತ ಕ್ಯಾನ್ಸರ್ ಕೂಡ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಆದರೆ ಇದನ್ನು ಸಂಬಂಧಿತ ಜೀವನಶೈಲಿ ಬದಲಾವಣೆ ಮಾಡುವುದರ ಮೂಲಕ ತಡೆಯಬಹುದು. ವಿವಿಧ ಕಾರಣಗಳಿಂದಾಗಿ ಕ್ಯಾನ್ಸರ್ ಕೋಶಗಳು ದೇಹದಲ್ಲಿ ಬೆಳೆಯುತ್ತವೆ, ಇದರಲ್ಲಿ ಅನಾರೋಗ್ಯಕರ ಆಹಾರವು ಕೂಡ ಒಂದು.

ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಬೊಜ್ಜು, ಮದ್ಯಪಾನ ಮತ್ತು UV ಕಿರಣಗಳಿಗೆ ಒಡ್ಡಿಕೊಳ್ಳುವುದು ಸೇರಿದಂತೆ ಇತರ ಕೆಲವು ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ನಮ್ಮ ಆಹಾರ ಪದ್ಧತಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು ಎಂಬುದಕ್ಕೆ ಹಲವು ನಿದರ್ಶನಗಳಿವೆ.