AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Down Syndrome Day 2026: ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ

ಮಗು ಹುಟ್ಟುವಾಗ 46 ಕ್ರೋಮ್‌ಸೋಮ್‌ಗಳಿರುತ್ತವೆ. ಆದರೆ ಈ ಕ್ರೋಮ್‌ಸೋಮ್‌ಗಳ ಸಂಖ್ಯೆಯೂ 46ಕ್ಕಿಂತ ಅಧಿಕವಾಗಿದ್ದಾಗ ಅಂತಹ ಮಗುವಿನಲ್ಲಿ ಡೌನ್ ಸಿಂಡ್ರೋಮ್‌ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಹೀಗಾಗಿ ಈ ಸಮಸ್ಯೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ಇಲ್ಲಿದೆ.

World Down Syndrome Day 2026: ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ Image Credit source: Pinterest
ಸಾಯಿನಂದಾ
|

Updated on: Mar 21, 2026 | 10:16 AM

Share

ಮಗುವು ಹೇಗೆಯೇ ಇರಲಿ, ತಾಯಿಗೆ ಅದುವೇ ಪ್ರಪಂಚ. ಆದರೆ ಕೆಲವೊಮ್ಮೆ ಹುಟ್ಟಿದ ಮಗು ಡೌನ್ ಸಿಂಡ್ರೋಮ್ ಸಮಸ್ಯೆಗೆ ಒಳಗಾಗುತ್ತದೆ. ಇದು ಮಗುವಿನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸ್ಥಿತಿಯಾಗಿದ್ದು, ಚಿಕಿತ್ಸೆಯಿಂದ ಗುಣಪಡಿಸಲಾಗದು. ಈ ಡೌನ್​ ಸಿಂಡ್ರೋಮ್​ ಬಗೆಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು (World Down Syndrome Day) ಆಚರಿಸಲಾಗುತ್ತಿದೆ.

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಇತಿಹಾಸವೇನು?

2005ರಲ್ಲಿ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಡೌನ್‌ ಸಿಂಡ್ರೋಮ್‌ ಇಂಟರ್‌ನ್ಯಾಷನಲ್‌ ಅನ್ನು ಸ್ಥಾಪಿಸಲಾಯಿತು. 2006ರಲ್ಲಿ ಮೊದಲ ಬಾರಿಗೆ ವಿಶ್ವ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆಯ ಬಳಿಕ ಬ್ರೆಜಿಲಿಯನ್‌ ಫೆಡರೇಶನ್‌ ಅಸೋಸಿಯೇಷನ್‌ ಆಫ್‌ ಡೌನ್‌ ಸಿಂಡ್ರೋಮ್‌ ಇದಕ್ಕೆ ಕೈ ಜೋಡಿಸಿತು. ಅದರೊಂದಿಗೆ ಡಿಎಸ್‌ಐ ಜೊತೆ ಕೆಲಸ ಮಾಡಲು ಮುಂದಾಯಿತು. ಸದಸ್ಯರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವನ್ನು ಪಡೆಯುವ ಸಲುವಾಗಿ ಕೆಲಸ ಮಾಡಲು ಕೈ ಹಾಕಿದರು. 2011ರ ನವೆಂಬರ್‌ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲು ಒಪ್ಪಿಗೆ ಸಿಕ್ಕಿತು. ಅಂದಿನಿಂದ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೇನು ತಿಳಿಯಿರಿ

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಮಹತ್ವ ಏನು?

ಡೌನ್‌ ಸಿಂಡ್ರೋಮ್‌ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಗೌರವಿಸುವುದಾಗಿದೆ. ಈ ಜನರನ್ನು ಬೇಧಭಾವವನ್ನು ಮಾಡದೇ ನಮ್ಮಂತೆಯೇ ನೋಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಈ ವಿಶೇಷ ದಿನದಂದು ಜಗತ್ತಿನಾದಂತ್ಯ ಮಾಹಿತಿ ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ