Garbhageete: 7-8ನೇ ತಿಂಗಳಲ್ಲಿ ಭ್ರೂಣದ ಬೆಳವಣಿಗೆ ಹೇಗಿರುತ್ತೆ? ಗರ್ಭಿಣಿಯರು ಹೇಗೆಲ್ಲಾ ಜಾಗ್ರತೆವಹಿಸಬೇಕು?
ಗರ್ಭಿಣಿಯರು 7-8ನೇ ತಿಂಗಳಲ್ಲಿ ಹೇಗೆಲ್ಲಾ ಜಾಗ್ರತೆವಹಿಸಬೇಕು, ಮಗುವಿನ ಬೆಳವಣಿಗೆಯ ಬಗ್ಗೆ ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಏಳನೇ ತಿಂಗಳಿನಲ್ಲಿ ಗರ್ಭದಲ್ಲಿರುವ ಮಗುವಿನ ಎಲ್ಲಾ ಅಂಗಾಂಗಗಳು ಚೆನ್ನಾಗಿ ಬೆಳೆದಿರುತ್ತವೆ. ದೇಹದ ಎಲ್ಲಾ ಭಾಗಗಳು ಸ್ಪಷ್ಟವಾಗಿರುತ್ತವೆ. ಈ ಹಂತದಲ್ಲಿ ಮಗು ಹುಟ್ಟಿದಲ್ಲಿ ಅದು ಬದುಕುಳಿಯುತ್ತದೆ.

ಗರ್ಭಿಣಿಗೆ ಬಳಲಿಕೆ ಹೆಚ್ಚು ಅದಕ್ಕಾಗಿ ಹಣ್ಣಿನ ರಸ, ಎಳನೀರು, ಸಿಹಿ ಮಜ್ಜಿಗೆ, ರಾಗಿ ಗಂಜಿ ಮುಂತಾದವುಗಳನ್ನು ಹೆಚ್ಚು ಬಳಸಬೇಕು. ಇನ್ನು ಎಂಟನೇ ತಿಂಗಳಿನಲ್ಲಿ ಗರ್ಭಿಣಿಯ ಗರ್ಭಕೋಶದ ಕೆಳಭಾಗವು ಹಿಗ್ಗಿ ಭ್ರೂಣದ ತಲೆ ಅದರಲ್ಲಿ ಕೂಡುವಂತೆ ಅನು ಮಾಡುತ್ತದೆ. ಈ ಹಂತದಲ್ಲಿ ಮಗುವಿಗೆ ಸಂಪೂರ್ಣ ಕೊಬ್ಬು ಪೂರೈಕೆಯಾಗವುದರಿಂದ ಅದು ಗರ್ಭದ ಹೊರಗೆ ಜೀವಿಸುವ ಕ್ಷಮತೆಯನ್ನು ಹೊಂದಿರುತ್ತದೆ.
ಮಗುವಿನ ಮಾಂಸಖಂಡಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿ, ರಕ್ತ ಪರಿಚಲನೆ ಆರಮಭವಾಗಿ ತಿಂದ ಆಹಾರ ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಪಡೆದಿರುತ್ತದೆ. ಈ ವೇಳೆ ಗರ್ಭಿಣಿಯ ಮನೋಸ್ಥಿತಿ ಶಾಂತವಾಗಿರಬೇಕು, ಅದಕ್ಕಾಗಿ ಪ್ರಾರ್ಥನೆ, ಧ್ಯಾನ ಮಾಡುವುದು ಒಳ್ಳೆಯದು, ಹೆರಿಗೆ ಕುರಿತು ಅನವಶ್ಯಕವಾದ ಭಯವನ್ನು ಮನಸ್ಸಿನಿಂದ ತೆಗೆದುಹಾಕಬೇಕು.
ಇತರರ ಮಾತಿನ ಕಡೆ ಗಮನಕೊಟ್ಟು ಮನಸ್ಸಿಗೆ ನೋವು ಮಾಡಿಕೊಳ್ಳಬಾರದು. ಈ ಸಮಯದಲ್ಲಿ ಗರ್ಭಿಣಿಯು ದೈಹಿಕವಾಗಿ ಹಾಗೂ ಮಾನಸಿಕ ಸ್ಥೈರ್ಯ ಹೊಂದಿದಲ್ಲಿ ಆತಂಕ ಯಾವುದೇ ರೀತಿ ಕಾಡುವುದಿಲ್ಲ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.