Garbhageete: 6ನೇ ತಿಂಗಳಲ್ಲಿ ಗರ್ಭಿಣಿಯು ಅನುಸರಿಸಬೇಕಾದ ಕ್ರಮಗಳೇನು?
ಆರನೇ ತಿಂಗಳಲ್ಲಿ ಗರ್ಭಿಣಿ ಆರೈಕೆ ಹೇಗಿರಬೇಕು, ಎಂಥಾ ಆಹಾರ ಸೇವನೆ ಮಾಡಬೇಕು, ಗರ್ಭಿಣಿ ಎದುರಿಸುವ ಸವಾಲುಗಳೇನು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಆರನೇ ತಿಂಗಳು ಗರ್ಭಿಣಿಯಾಗಿದ್ದಾಗ ಭ್ರೂಣಕ್ಕೆ ಶಕ್ತಿ ಮತ್ತು ಚರ್ಮದ ಬಣ್ಣ ಬರುತ್ತದೆ, ರೋಗ ನಿರೋಧಕ ತತ್ವವಾದ ತೇಜಸ್ಸು, ಭ್ರೂಣದ ಉತ್ಪತ್ತಿಯಾಗುತ್ತದೆ.
ಆರನೇ ತಿಂಗಳಲ್ಲಿ ಗರ್ಭಿಣಿ ಆರೈಕೆ ಹೇಗಿರಬೇಕು, ಎಂಥಾ ಆಹಾರ ಸೇವನೆ ಮಾಡಬೇಕು, ಗರ್ಭಿಣಿ ಎದುರಿಸುವ ಸವಾಲುಗಳೇನು ಎಂಬುದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಆರನೇ ತಿಂಗಳು ಗರ್ಭಿಣಿಯಾಗಿದ್ದಾಗ ಭ್ರೂಣಕ್ಕೆ ಶಕ್ತಿ ಮತ್ತು ಚರ್ಮದ ಬಣ್ಣ ಬರುತ್ತದೆ, ರೋಗ ನಿರೋಧಕ ತತ್ವವಾದ ತೇಜಸ್ಸು, ಭ್ರೂಣದ ಉತ್ಪತ್ತಿಯಾಗುತ್ತದೆ.
ಈ ಹಂತದಲ್ಲಿ ಮಾಂಸಖಂಡಗಳ ಬೆಳವಣಿಗೆಗಳು ಪೂರ್ಣವಾಗುತ್ತದೆ. ಮಾಸು ಬೆಳೆಯುತ್ತದೆ, ಅತ್ಯಾವಶ್ಯಕವಾದ ಆಮ್ಲಜನಕವು ಸೇರಿದಂತೆ ಎಲ್ಲಾ, ಪೋಷಕ ವಸ್ತುಗಳು ತಾಯಿಯಿಂದ ಭ್ರೂಣಕ್ಕೆ ರವಾನೆಯಾಗಿ ಭ್ರೂಣದಲ್ಲಿ ಉತ್ಪನ್ನವಾಗುವ ಮಲ ತಾಯಿಯ ರಕ್ತ ಪರಿಚಲನೆಯಲ್ಲಿ ಸೇರುತ್ತದೆ.
ಅದನ್ನು ಅವಳು ತನ್ನ ದೇಹದಲ್ಲಿ ಉತ್ಪತ್ತಿಯಾಗುವ ಮಲದೊಡನೆ ಹೊರಹಾಕುತ್ತಿರುತ್ತಾಳೆ. ಈ ಹಂತದಲ್ಲಿ ಗರ್ಭಿಣಿಯು ಅನ್ನ ಪಾನಗಳ ವಿಚಾರದಲ್ಲಿ ಜಾಗರೂಕವಾಗಿದ್ದು, ನಿಯಮಿತವಾಗಿ ನಡಿಗೆ ಅಥವಾ ಸರಳ ವ್ಯಾಯಾಮ ಖಡ್ಡಾಯವಾಗಿ ಮಾಡಬೇಕು.
ಕೆಲವು ಸಂಶೋಧನೆಗಳಿಂದ ತಿಳಿದುಬಂದಿದ್ದೇನೆಂದರೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದ ಗರ್ಭಿಣಿಯರು ಆರೋಗ್ಯಕರ, ಸಹಜ ತೂಕದ ಮಗುವಿಗೆ ಜನ್ಮ ನೀಡಿದರೆ, ವ್ಯಾಯಾಮ ಮಾಡದ ಮಹಿಳೆಯರು ಹೆತ್ತ ಮಕ್ಕಳು ಕಡಿಮೆ ತೂಕ ಹೊಂದಿದ್ದು, ಅನಾರೋಗ್ಯ ಪೀಡಿತವಾಗಿದ್ದವು.
ಈ ಸಮಯದಲ್ಲಿ ಗರ್ಭಿಣಿಯು ಕರಿದ ಪದಾರ್ಥ, ಅತಿ ಮಸಾಲೆ ಖಾರದಿಂದ ಕೂಡಿದ ಆಹಾರ ಸೇವನೆ ಮಾಡಬಾರದು. ಇಂತಹ ಪದಾರ್ಥಗಳನ್ನು ಹೆಚ್ಚು ಸೇವಿಸಿದರೆ ಮಗುವಿನ ಬೆಳವಣಿಗೆ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ಅಜೀರ್ಣದಿಂದಾಗುವ ತೊಂದರೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಸನ್ನಿ ಮುಂತಾದವುಗಳಿಂದ ನರಳುತ್ತಿರುವುದನ್ನು ಹೆಚ್ಚು ಕಾಣುತ್ತಿದ್ದೇವೆ.
ಅಜೀರ್ಣ ಉಂಟು ಮಾಡುವ ಆಹಾರ ಪದಾರ್ಥಗಳ ಅಧಿಕ ಸೇವನೆಯಿಂದ ಜಠರದಲ್ಲಿ ವಿಷ ವಸ್ತುಗಳು ಶೇಖರವಾಗಿ ಕೊಳೆಯುತ್ತವೆ ಈ ವಿಷ ವಸ್ತುಗಳು ಜಠರದಲ್ಲಿದ್ದು, ಅವುಗಳ ಸ್ವಲ್ಪ ಭಾಗ ಮೂತ್ರಕೋಶಗಳ ಮೂಲಕ ಮೂತ್ರದಲ್ಲಿ, ಮಲವಿಸರ್ಜನೆ ರೂಪದಲ್ಲಿ ಹಾಗೂ ಬೆವರಿನ ಗ್ರಂಥಿಗಳ ಮೂಲಕ ಬೆವರಾಗಿಯೂ ಹೊರಹೋಗುತ್ತದೆ.
ಇವುಗಳಿಂದ ಹೊರಹೋಗದೆ ಆಚೆ ಉಳಿದ ವಿಷ ವಸ್ತುಗಳು, ರಕ್ತ ಪರಿಚಲನೆಯಲ್ಲಿ ಸೇರಿ ದೇಹ, ಜೈವಿಕೆ ಕ್ರಿಯೆಗಳನ್ನು ಜೀವಕೋಶದಲ್ಲಿ ಹಾಗೂ ಇಡೀ ದೇಹದ ಕ್ರಿಯೆಗಳಲ್ಲಿ ಏರು ಪೇರುಗೊಳಿಸುತ್ತದೆ. ಈ ವಿಷ ವಸ್ತುಗಳು ದೇಹದ ರೋಗ ನಿರೊಧಕ ಶಕ್ತಿಯನ್ನು ಕುಂಠಿತಗೊಳಿಸಿ ಸುಲಭವಾಗಿ ರೋಗಗಳಿಗೆ ಈಡುಮಾಡುತ್ತದೆ.
ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆಯುರ್ವೇದದಲ್ಲಿ ವಿಶೇಷವಾದ ಆಹಾರಗಳನ್ನು ಗರ್ಭಿಣಿಗೆ ಹಾಲಿನಿಂದ ಪಡೆದ ತುಪ್ಪ, ಸಿಹಿ ದ್ರವ್ಯಗಳಿಂದ ಸಂಸ್ಕರಿತವಾದ ಹಾಗೂ, ಗೋಕ್ಷುಕರ ಮುಂತಾದ ವನಸ್ಪತಿಗಳನ್ನು ಸೇರಿಸಿ ತಯಾರಿಸಿದ ಅನ್ನದ ಗಂಜಿಯನ್ನು ಗರ್ಭಿಣಿಯರು ಸೇರಿಸಬೇಕು ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಪ್ರಜನನಾಂಗಗಳ ಸಾಮರ್ಥ್ಯವೂ ಹೆಚ್ಚುತ್ತದೆ.
ಇದು ಹೃದಯದ ರಕ್ತಪರಿಚಲನೆಯನ್ನೂ ಹೆಚ್ಚಿಸುತ್ತದೆ. ದೇಹದಲ್ಲಿ ಊತ, ಉರಿಗಳಿರುವಾಗ ಸಿಹಿ ಬೆರೆಸಿದ ಮೊಸರನ್ನು ಸೇವಿಸಬೇಕು, ಇದು ಜನನಾಂಗದ ಹಾಗೂ ಮೂತ್ರನಾಳದ ಸೋಂಕು ಇರುವಾಗಲೂ ಉಪಯುಕ್ತ ಹಾಗಾಗಿ ಈ ಹಂತದಲ್ಲಿ ಗಭಿರ್ಣಿಯು ಮೊಸರನ್ನು ಬಳಸಬೇಕು.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.