AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ.

Monsoon Foods:ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳಿವು
Lemongrass Tea
TV9 Web
| Edited By: |

Updated on: Jul 02, 2022 | 3:14 PM

Share

ಮಳೆಗಾಲದಲ್ಲಿ ಹಲವು ರೀತಿಯ ಸೋಂಕುಗಳು ಜನರನ್ನು ಕಾಡುತ್ತದೆ, ಕಲುಷಿತವಾದ, ನಿಂತ ನೀರಿನಿಂದಲೇ ಹಲವು ರೋಗಗಳು ನಿಮ್ಮನ್ನು ಆವರಿಸುತ್ತದೆ. ಮಳೆಗಾಲದಲ್ಲಿ ಶುಂಠಿ ಚಹಾದೊಂದಿಗೆ ಬಿಸಿ ಬಿಸಿ ಪಕೋಡಾ, ಬಜ್ಜಿ ಸೇರಿದಂತೆ ಎಣ್ಣೆ ಪದಾರ್ಥಗಳನ್ನೇ ಹೆಚ್ಚು ಸೇವನೆ ಮಾಡುತ್ತೇವೆ. ಇದರಿಂದ ಅಸಿಡಿಟಿ, ವಾಕರಿಕೆ, ತೂಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು.

ಹೀಗಾಗಿ ಮಳೆಗಾಲದಲ್ಲಿ ಸಾಧ್ಯವಾದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವ ಆಹಾರಗಳನ್ನು ಸೇವನೆ ಮಾಡಬೇಕು. ನೀವು ಸಕ್ಕರೆ ಹಾಕಿ ಚಹಾ ಕುಡಿಯುವ ಬದಲು ನಿಂಬೆ ಹುಲ್ಲಿನ ಚಹಾ ಕುಡಿಯಿರಿ. ಚಿಪ್ಸ್ ಹಾಗೂ ಇತರೆ ಕರಿದ ಎಣ್ಣೆ ಪದಾರ್ಥಗಳ ಬದಲು ಪಾಪ್​ಕಾರ್ನ್​ ತಿನ್ನಿ.

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಗಳನ್ನು ವೃದ್ಧಿಸುವ ಆಹಾರಗಳು ಪಾಪ್​ಕಾರ್ನ್​: ಮಳೆಗಾಲದಲ್ಲಿ ಹೆಚ್ಚು ಪಾಪ್​ಕಾರ್ನ್​ ಸೇವನೆ ಮಾಡಿ, ಹಳದಿ ಬಣ್ಣದ ಅಮೆರಿಕನ್ ಕಾರ್ನ್​ ಅಲ್ಲ ಲೋಕನ್ ಕಾರ್ನ್​ ಬಳಕೆ ಮಾಡಿ ಅದಕ್ಕೆ ಕಪ್ಪು ಸಾಲ್ಟ್​ ಬಳಸಿ ತಿನ್ನಿ. ಪಾಪ್​ಕಾರ್ನ್​ ಹೃದಯಾಘಾತ, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರ ಇಡುತ್ತದೆ.

ನೇರಳೆ ಹಣ್ಣು: ಆಯುರ್ವೇದದಲ್ಲಿ ಹಲವು ರೋಗಗಳನ್ನು ಗುಣಪಡಿಸಲು ನೇರಳೆ ಹಣ್ಣನ್ನು ಬಳಕೆ ಮಾಡಲಾಗುತ್ತದೆ. ಹೃದಯ ಸಂಬಂಧಿಕಾಯಿಲೆ, ಅಸ್ತಮಾ, ಆರ್ಥ್ರೈಟಿಸ್, ಡೀಸೆಂಟ್ರಿ ಸೇರಿದಂತೆ ಹಲವು ಸಮಸ್ಯೆಗಳ ನಿವಾರಣೆಗೆ ಬಳಕೆ ಮಾಡಲಾಗುತ್ತದೆ. ಇದಕ್ಕೆ ಕಿಡ್ನಿಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಇರುತ್ತದೆ.

ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿ: ಉಪ್ಪಿನಲ್ಲಿ ನೆನೆಸಿರುವ ನೆಲ್ಲಿಕಾಯಿಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು. ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗುವುದು, ಇದು ನಿಮ್ಮನ್ನು ಯಂಗ್ ಹಾಗೂ ಫ್ರೆಶ್​ ಆಗಿರಿಸುತ್ತದೆ.

ನಿಂಬೆಹುಲ್ಲಿನ ಚಹಾ: ನಿಂಬೆ ಹುಲ್ಲಿನಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ, ಒತ್ತಡವನ್ನು ಕೆಲವೇ ಕ್ಷಣಗಳಲ್ಲಿ ಕಡಿಮೆ ಮಾಡಬಹುದು. ಮುಂಗಾರಿನಲ್ಲಿ ಕಾಣಿಸಿಕೊಳ್ಳುವ ಹಲವು ಸೋಂಕುಗಳಿಂದ ದೂರವಿಡಬಹುದು.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ