Coronavirus: ಭಾರತದಲ್ಲಿ ಕೊರೊನಾ ಸೋಂಕು ಏರಿಕೆ; 17073 ಮಂದಿಗೆ ಹೊಸದಾಗಿ ಸೋಂಕು, ಒಂದೇ ದಿನದಲ್ಲಿ ಶೇ 45ರಷ್ಟು ಹೆಚ್ಚಳ

ಭಾರತದ ವಿವಿಧ ರಾಜ್ಯಗಳಲ್ಲಿ ಸೋಮವಾರ (ಜೂನ್ 27) ಒಟ್ಟು 17,073 ಮಂದಿಯಲ್ಲಿ ಹೊಸದಾಗಿ ಸೋಂಕು (Covid-19 ದೃಢಪಟ್ಟಿದೆ.

Coronavirus: ಭಾರತದಲ್ಲಿ ಕೊರೊನಾ ಸೋಂಕು ಏರಿಕೆ; 17073 ಮಂದಿಗೆ ಹೊಸದಾಗಿ ಸೋಂಕು, ಒಂದೇ ದಿನದಲ್ಲಿ ಶೇ 45ರಷ್ಟು ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 27, 2022 | 10:14 AM

ದೆಹಲಿ: ಭಾರತದಲ್ಲಿ ಕೊವಿಡ್-19 (Coronavirus) ಸೋಂಕು ಪ್ರಕರಣಗಳು ಏಕಾಏಕಿ ಹೆಚ್ಚಾಗಿವೆ. ಭಾರತದ ವಿವಿಧ ರಾಜ್ಯಗಳಲ್ಲಿ ಸೋಮವಾರ (ಜೂನ್ 27) ಒಟ್ಟು 17,073 ಮಂದಿಯಲ್ಲಿ ಹೊಸದಾಗಿ ಸೋಂಕು (Covid-19 ದೃಢಪಟ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 4,34,07,046 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 94,420 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಭಾನುವಾರ ಭಾರತದಲ್ಲಿ 11,739 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.

ದೇಶದ ವಿವಿಧೆಡೆ ಭಾನುವಾರ ಒಟ್ಟು 21 ಮಂದಿ ಕೊವಿಡ್-19 ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತರ ಒಟ್ಟು ಸಂಖ್ಯೆಯು 5,25,020ಕ್ಕೆ ಏರಿಕೆಯಾಗಿದೆ. ದೇಶದ ಒಟ್ಟು ಚೇತರಿಕೆ ಪ್ರಮಾಣವು ಶೇ 98.57 ಇದೆ. ದೈನಂದಿನ ಪಾಸಿಟಿವಿಟಿ ಸರಾಸರಿಯು ಶೇ 5.62 ಇದೆ. ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ 3.39 ಇದೆ. ಸೋಂಕಿನಿಂದ ಸಾವನ್ನಪ್ಪುವ ಸಂಖ್ಯೆಯ ಸರಾಸರಿ ಶೇ 1.21 ಇದೆ. ಚೇತರಿಸಿಕೊಂಡಿರುವವರ ಒಟ್ಟು ಸಂಖ್ಯೆಯು 4,27,87,606ಕ್ಕೆ ಮುಟ್ಟಿದೆ. ದೇಶದಲ್ಲಿ ಈವರೆಗೆ 197.11 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಕರ್ನಾಟಕದಲ್ಲಿ ಒಮಿಕ್ರಾನ್ ಉಪತಳಿ ಪತ್ತೆ

ಕರ್ನಾಟಕದಲ್ಲಿ ಕೊರೊನಾ ಸೋಂಕು ಪ್ರಕರಣಗಳ (Coronavirus) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಒಮಿಕ್ರಾನ್ (Omicron)​ ರೂಪಾಂತರಿಯ ಉಪತಳಿ ಎನಿಸಿರುವ BA.3, BA.4, BA.5 ವೈರಾಣುಗಳು ಪತ್ತೆಯಾಗಿವೆ. ಜೂನ್​ 2ರಿಂದ 9ರ ನಡುವೆ ಸಂಗ್ರಹಿಸಿದ್ದ 44 ಮಾದರಿಗಳ ಪೈಕಿ 38ರಲ್ಲಿ BA.5 ಉಪತಳಿ ಪತ್ತೆಯಾಗಿದೆ. ಸದ್ಯ ರಾಜ್ಯದಲ್ಲಿ BA.2 ಉಪತಳಿ ಹೆಚ್ಚಾಗಿ ವ್ಯಾಪಿಸುತ್ತಿದ್ದು, ಶೇ 82ರಷ್ಟು ಸೋಂಕು ಇದೇ ಉಪತಳಿಯಿಂದ ಹರಡುತ್ತಿದೆ. ಹೊಸದಾಗಿ ಪತ್ತೆಯಾಗಿರುವ ತಳಿಗಳ ಬಗ್ಗೆ ಆರೋಗ್ಯ ಇಲಾಖೆ ನಿಗಾವಹಿಸಿದೆ. ಈ ಹೊಸತಳಿಗಳಿಂದ ಕೊರೊನಾ 4ನೇ ಅಲೆ ವ್ಯಾಪಿಸಬಹುದು ಎಂಬ ಆತಂಕ ಕಾಣಿಸಿಕೊಂಡಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ಪತ್ತೆಯಾದ ಕೊರೊನಾ ರೂಪಾಂತರಗಳ ವಿವರ ಹೀಗಿದೆ… ಡೆಲ್ಟಾ- 3, ಇತರೆ- 14, ಬಿಎ1.1.529- 189, ಬಿಎ1- 1, ಬಿಎ2- 1964, ಬಿಎ3- 2, ಬಿಎ4- 4, ಬಿಎ5- 38, ಒಟ್ಟು ಪರೀಕ್ಷೆಗೆ ಒಳಪಡಿಸಿದ ಸ್ಯಾಂಪಲ್​ಗಳು- 2215.

Published On - 10:14 am, Mon, 27 June 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್