Eye Care Tips: ಮಳೆಗಾಲದಲ್ಲಿ ಕಣ್ಣಿನ ಆರೈಕೆ ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ

Eye Care Tips for Monsoon: ಮಳೆಗಾಲದಲ್ಲಿ ಕಣ್ಣುಗಳಿಗೆ ವಿಶೇಷ ಕಾಳಜಿ ಬೇಕು. ಕಣ್ಣುಗಳು ಬಹಳ ಸೂಕ್ಷ್ಮವಾಗಿರುತ್ತವೆ ಮತ್ತು ಅವುಗಳ ಆರೈಕೆಯಲ್ಲಿ ಅಜಾಗರೂಕತೆಯು ಸಮಸ್ಯೆಗೆ ಗುರಿಯಾಗಬಹುದು. ಈ ಕುರಿತಾಗಿ ತಜ್ಞರು ಹೇಳುವುದು ಏನು? ಇಲ್ಲಿದೆ ಮಾಹಿತಿ.

Eye Care Tips: ಮಳೆಗಾಲದಲ್ಲಿ ಕಣ್ಣಿನ ಆರೈಕೆ ಹೇಗೆ? ತಜ್ಞರ ಸಲಹೆ ಏನು? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 01, 2022 | 8:00 AM

ಪ್ರತಿಯೊಬ್ಬರಿಗೂ ಮಳೆಗಾಲ (Monsoon) ವೆಂದರೆ ಬಹಳ ಇಷ್ಟು. ಚಿಕ್ಕ ಮಕ್ಕಳಂತೂ ಮಳೆಯನ್ನು ಆನಂದಿಸಲು ಬಯಸುತ್ತಾರೆ.  ಮಳೆಯಲ್ಲಿ ಮೋಜು ಮಾಡಲು ಇಷ್ಟಪಡುತ್ತಾರೆ. ಈ ಋತುವಿನಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಒಂದು ಸವಾಲಾಗಿದೆ. ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುತ್ತವೆ. ಕೆಲವೊಮ್ಮೆ ಕಣ್ಣುಗಳಲ್ಲಿ ಕೊಳಕು ನೀರು ಹೋಗಿ ಸೋಂಕು ಮತ್ತು ಕಣ್ಣುಗಳು ಕೆಂಪ್ಪಾಗುವ ಸಮಸ್ಯೆಗಳು ಉಂಟು. ಮನಷ್ಯನ ಕಣ್ಣುಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಆದ್ದರಿಂದ ಅವುಗಳ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕಣ್ಣುಗಳಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಯಾದರೂ ತಕ್ಷಣ  ವೈದ್ಯರನ್ನು ಸಂಪರ್ಕಿಸಬೇಕು. ಮಳೆಗಾಲದಲ್ಲಿ ಕಣ್ಣುಗಳು ಆರೋಗ್ಯವಾಗಿರಲು ಯಾವ ಸಲಹೆಗಳನ್ನು ಅನುಸರಿಬೇಕು  ಎಂಬುದನ್ನು ತಜ್ಞರು ಹೇಳಿದ್ದಾರೆ ಕೇಳಿ.

ತಜ್ಞರು ಹೇಳುವುದು ಏನು? ಬಜಾಜ್ ಐ ಕೇರ್ ಸೆಂಟರ್​ನ ನೇತ್ರತಜ್ಞ ಡಾ. ರಾಜೀವ್ ಬಜಾಜ್ ಹೇಳುವ ಪ್ರಕಾರ ಮಳೆಗಾಲದಲ್ಲಿ ವೈರಲ್ ಕಾಂಜಂಕ್ಟಿವಿಟಿಸ್ ಅಪಾಯವು ಹೆಚ್ಚಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ಕಣ್ಣಿನ ಜ್ವರ ಎಂದು ಕರೆಯಲಾಗುತ್ತದೆ. ಇದಲ್ಲದೆ, ಮಳೆಗಾಲದಲ್ಲಿ ಕಾರ್ನಿಯಾಕ್ಕೆ ಸಂಬಂಧಿಸಿದ ಶಿಲೀಂಧ್ರಗಳ ಸೋಂಕಿನ ಪ್ರಕರಣಗಳು ಸಹ ಹೆಚ್ಚಾಗುತ್ತವೆ. ಪರಿಸರದಲ್ಲಿ ಹೆಚ್ಚಿದ ಆರ್ದ್ರತೆಯಿಂದಾಗಿ, ಸೋಂಕು ಮತ್ತು ವೈರಲ್ ಅಪಾಯವು ಹೆಚ್ಚಾಗುತ್ತದೆ. ಮಳೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ, ಆದರೆ ನಂತರ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.

ಕಣ್ಣುಗಳ ಕಾಳಜಿ ಹೇಗೆ:

ಡಾ. ರಾಜೀವ್ ಬಜಾಜ್ ಹೇಳುವ ಪ್ರಕಾರ ಮಳೆಗಾಲದಲ್ಲಿ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಈ ಋತುವಿನಲ್ಲಿ ಕೈ ತೊಳೆಯಬೇಕು ಹಾಗೂ ಪದೇ ಪದೇ ಕಣ್ಣುಗಳನ್ನು ಮುಟ್ಟಬಾರದು. ದಿನಕ್ಕೆ ಎರಡು ಬಾರಿ ಶುದ್ಧ ನೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಕಣ್ಣಿನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ, ತಕ್ಷಣ ಕಣ್ಣಿನ ತಜ್ಞರನ್ನು ಸಂಪರ್ಕಿಸಿಬೇಕು. ವೈದ್ಯರ ಸಲಹೆಯಿಲ್ಲದೆ ಕಣ್ಣುಗಳಿಗೆ ಚಿಕಿತ್ಸೆ ನೀಡಬಾರದು. ಹೀಗೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ, ಯಾವುದೇ ಕಣ್ಣಿನ ಕಾಯಿಲೆಯಿಂದ ಬಳಲುತ್ತಿರುವವರು ಈ ಋತುವಿನಲ್ಲಿ ಹೊರಗೆ ಹೋಗಬಾರದು. ಮಳೆಗಾಲದ ಸಂದರ್ಭದಲ್ಲಿ ತಜ್ಞರು ನೀಡಿರುವ ಈ ಸಲಹೆಗಳನ್ನು ಪಾಲಿಸುವುದರಿಂದ ನಮ್ಮ ಕಣ್ಣುಗಳನ್ನು ನಾವು ಸುರಕ್ಷಿತ ಮತ್ತು ಆರೋಗ್ಯವಾಗಿಟ್ಟುಕೊಳ್ಳಬಹುದು.

ಇದನ್ನೂ ಓದಿ: Personality Test: ನಿಮ್ಮ ಪಾದಗಳ ಆಕಾರಕ್ಕೂ ವ್ಯಕ್ತಿತ್ವಕ್ಕೂ ಏನು ಸಂಬಂಧ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್