Relationship: ಮನಸ್ಸಿನಲ್ಲೇ ಬಚ್ಚಿಟ್ಟಿರುವ ನಿರೀಕ್ಷೆಗಳು ಸಂಗಾತಿ ಜತೆ ಭಿನ್ನಾಭಿಪ್ರಾಯ ಸೃಷ್ಟಿಸಬಹುದು
ನೀವು ಸಂಗಾತಿಯಿಂದ ಏನನ್ನಾದರೂ ಬಯಸುತ್ತೀರಿ ಎಂದಾದರೆ ಅವರ ಬಳಿ ಹೇಳಿಕೊಳ್ಳಿ, ಮನಸ್ಸಿನಲ್ಲಿ ಬಚ್ಚಿಟ್ಟಿರುವ ನಿರೀಕ್ಷೆಗಳು ನಿಮ್ಮಿಬ್ಬರ ಸಂಬಂಧಕ್ಕೆ ಮುಳ್ಳಾಗಬಹುದು. ನಿಮ್ಮ ನಿರೀಕ್ಷೆಗಳು ಒಂದು ದಿನ ಗೊಂದಲ, ಭಿನ್ನಾಭಿಪ್ರಾಯವನ್ನು ಸೃಷ್ಟಿಸಬಹುದು.
ನೀವು ಸಂಗಾತಿಯಿಂದ ಏನನ್ನಾದರೂ ಬಯಸುತ್ತೀರಿ ಎಂದಾದರೆ ಅವರ ಬಳಿ ಹೇಳಿಕೊಳ್ಳಿ, ಮನಸ್ಸಿನಲ್ಲಿ ಬಚ್ಚಿಟ್ಟಿರುವ ನಿರೀಕ್ಷೆಗಳು ನಿಮ್ಮಿಬ್ಬರ ಸಂಬಂಧಕ್ಕೆ ಮುಳ್ಳಾಗಬಹುದು. ನಿಮ್ಮ ನಿರೀಕ್ಷೆಗಳು ಒಂದು ದಿನ ಗೊಂದಲ, ಭಿನ್ನಾಭಿಪ್ರಾಯವನ್ನು ಸೃಷ್ಟಿಸಬಹುದು.
ನಿಮ್ಮ ಮನಸ್ಸನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ನಿರೀಕ್ಷಿಸದಿರಿ. ನಿಮ್ಮ ಪತಿ ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೋ, ಇಲ್ಲವೋ ಎಂಬುದರ ಬಗ್ಗೆ ಗಮನವಿರಲಿ. ನಿಮ್ಮ ಭಾವನೆಗಳನ್ನು ಅವರು ಅರ್ಥ ಮಾಡಿಕೊಳ್ಳಲಿ ಎಂಬ ನಿರೀಕ್ಷೆ ಮಾಡದಿರಿ.
ಅವರ ಭಾವನೆ, ಮೌಲ್ಯಗಳನ್ನು ಗೌರವಿಸಿ. ಪರಸ್ಪರರ ಅಭಿಪ್ರಾಯ, ಮೌಲ್ಯ, ಹೊಂದಾಣಿಕೆಯಿಂದ ಒಬ್ಬರನ್ನೊಬ್ಬರು ಅರಿತು ನಡೆವುದು ಸಹಬಾಳ್ವೆಗೆ ಸಹಕಾರಿ.
ನಿಮ್ಮ ಪತಿ/ಪತ್ನಿ ರೂಢಿಸಿಕೊಂಡು ಬಂದಿರುವ ಮೌಲ್ಯಗಳನ್ನು ಬಿಟ್ಟು ಹಾಕಿ ನೀವು ಹೇಳಿದಂತೆ ಕೇಳಬೇಕು. ಅಥವಾ ನೀವು ಆಚರಿಸುತ್ತಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಲಿ ಎಂಬ ನಿರೀಕ್ಷೆ ಮಾಡಬೇಡಿ.
ಕೆಲವು ನಿರೀಕ್ಷೆಗಳು ಹೀಗಿರುತ್ತೆ: ನೀವು ಯಾವುದೋ ಒಂದು ವಿಷಯದಲ್ಲಿ ನಿಮ್ಮ ಸಂಘಾತಿಗೆ ಸಹಾಯ ಮಾಡುರುತ್ತೀರಿ ಎಂದರೆ ಅದೇ ವಿಷಯದಲ್ಲಿ ನಿಮ್ಮ ಸಂಗಾತಿಯೂ ಕೂಡ ನಿಮಗೆ ಸಹಾಯ ಮಾಡಬೇಕು ಎನ್ನುವ ಮನೋಭಾವವನ್ನು ಬಿಟ್ಟುಬಿಡಿ.
ನಿಮ್ಮ ನಿರೀಕ್ಷೆಯನ್ನು ತಿಳಿಸಿ: ನೀವು ಏನನ್ನೋ ಇಷ್ಟಪಟ್ಟಿದ್ದರೆ, ನಿಮ್ಮ ಮನಸ್ಸಿನಲ್ಲಿರುವ ನಿರೀಕ್ಷೆಯನ್ನು ಮನೆಯಲ್ಲಿ ತಿಳಿಸಿ, ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದರಿಂದ ನಿಮ್ಮ ಯಾವ ನಿರೀಕ್ಷೆಗಳೂ ಈಡೇರುವುದಿಲ್ಲ. ನಾವು ಒಂದು ಆತ್ಮೀಯತೆ, ಸಂಬಂಧ ಅಥವಾ ಭಾವನಾತ್ಮಕ ಬೆಸುಗೆಯೊಂದಿಗೆ ಜೀವನ ನಡೆಸುತ್ತಿದ್ದಲ್ಲಿ ನಿರೀಕ್ಷೆ ಹುಟ್ಟುವುದು ಸಹಜ. ನಿರೀಕ್ಷೆ
ಪ್ರೀತಿ ಹಾಗೂ ಕಾಳಜಿಯಿರಲಿ: ನೀವು ಸಂಗಾತಿಗೆ ಪ್ರೀತಿ ನೀರಿ, ಕಾಳಜಿಯಿಂದ ನೋಡಿಕೊಳ್ಳಿ, ನಿಮ್ಮ ಬೇಡಿಕೆಗಳು ನಿಮಗೇ ಅರಿವಿಲ್ಲದಂತೆ ಈಡೇರುವುದು.
ನಿರಾಶೆ: ನಾವು ನಮ್ಮ ಸಂಗಾತಿಯಿಂದ ಏನನ್ನಾದರೂ ನಿರೀಕ್ಷೆ ಇಟ್ಟುಕೊಂಡರೆ ನಾವು ಬಯಸುವ ರೀತಿಯಲ್ಲೇ ಅವರು ನಡೆದುಕೊಳ್ಳಬೇಕು ಎಂಬುದನ್ನು ಮೊದಲು ಬಿಡಬೇಕು.
ಕಿರಿಕಿರಿ ಮಾಡದಿರಿ: ನಿಮ್ಮ ಪತಿಗೆ ನೀವು ಹೇಳುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಅವರಿಂದ ತಿಳಿದು ಬಂದರೆ, ಪದೇ ಪದೆ ಆ ಕೆಲಸವನ್ನು ಅವರಿಗೆ ಹೇಳಿ ಕಿರಿ ಕಿರಿ ಮಾಡದಿರಿ.