- Kannada News Photo gallery Russia Ukraine War How a football field turns into a giant crater after a missile strike
Russia Ukraine War: ರಷ್ಯಾ ಕ್ಷಿಪಣಿ ದಾಳಿಗೆ ಉಕ್ರೇನ್‌ನ ಫುಟ್ಬಾಲ್ ಸ್ಟೇಡಿಯಂನಲ್ಲಿ ಬಿತ್ತು 5 ಮೀ. ಆಳದ ಕುಳಿ
Russia Ukraine War: ಕ್ಷಿಪಣಿ ಬಿದ್ದ ಸೆಂಟ್ರಲ್ ಸಿಟಿ ಸ್ಟೇಡಿಯಂನ ಪ್ರದೇಶದಲ್ಲಿ 15 ಮೀಟರ್ ಅಗಲ ಮತ್ತು 5 ಮೀಟರ್ ಆಳದ ಕುಳಿ ಬಿದ್ದಿದೆ. ಇದರಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಸುದ್ದಿಯಿಲ್ಲ.
Updated on:Jun 30, 2022 | 2:56 PM

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಇನ್ನೂ ಮುಂದುವರೆದಿದೆ. ಈ ಯುದ್ಧವು ಫೆಬ್ರವರಿ 24 ರಂದು ಪ್ರಾರಂಭವಾಯಿಗಿದ್ದು, ಇಂದಿಗೆ 126 ದಿನಗಳು ಕಳೆದಿವೆ. ಈ ಸಮಯದಲ್ಲಿ, ರಷ್ಯಾದ ದಾಳಿಯಲ್ಲಿ ಉಕ್ರೇನ್ ಸಾಕಷ್ಟು ಜೀವ ಮತ್ತು ಆಸ್ತಿ ನಷ್ಟವನ್ನು ಅನುಭವಿಸಿದೆ. ಈಗ ರಷ್ಯಾದ ಕ್ಷಿಪಣಿಗಳು ಆಟದ ಮೈದಾನಗಳನ್ನೂ ಗುರಿಯಾಗಿಸಿ ವಿಧ್ವಂಸಕತೆಗಿಳಿದವೆ. ಉಕ್ರೇನ್‌ನ ದಕ್ಷಿಣ ನಗರವಾದ ಮೈಕೋಲಿವ್‌ನ ಫುಟ್‌ಬಾಲ್ ಕ್ರೀಡಾಂಗಣವು ಕ್ಷಿಪಣಿ ದಾಳಿಯಿಂದ ಸಂಪಾರ್ಣ ಹಾನಿಗೊಳಗಾಗಿರುವುದು ಇತ್ತೀಚಿನ ಅಂತಹ ಪ್ರಕರಣವಾಗಿದೆ.

ಮಂಗಳವಾರವಷ್ಟೇ ಸೆಂಟ್ರಲ್ ಸಿಟಿ ಫುಟ್ಬಾಲ್ ಸ್ಟೇಡಿಯಂ ರಷ್ಯಾದ ಕ್ಷಿಪಣಿ ದಾಳಿಗೆ ಗುರಿಯಾಗಿದ್ದು, ಅದರ ಚಿತ್ರಗಳು ಈಗ ವೈರಲ್ ಆಗಿವೆ. ಆ ದಿನ ರಷ್ಯಾ ಉಕ್ರೇನ್ ಮೇಲೆ 8 ಕ್ಷಿಪಣಿಗಳನ್ನು ಹಾರಿಸಿತು, ಅದರಲ್ಲಿ 3 ಕ್ಷಿಪಣಿಗಳನ್ನು ಉಕ್ರೇನ್ ವಾಯು ರಕ್ಷಣಾ ವ್ಯವಸ್ಥೆ ನಾಶ ಮಾಡುವುದರಲ್ಲಿ ಯಶಸ್ವಿಯಾಗಿತ್ತು. ಆದರೆ 5 ಕ್ಷಿಪಣಿಗಳು ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದವು.

ಕ್ಷಿಪಣಿ ಬಿದ್ದ ಸೆಂಟ್ರಲ್ ಸಿಟಿ ಸ್ಟೇಡಿಯಂನ ಪ್ರದೇಶದಲ್ಲಿ 15 ಮೀಟರ್ ಅಗಲ ಮತ್ತು 5 ಮೀಟರ್ ಆಳದ ಕುಳಿ ಬಿದ್ದಿದೆ. ಇದರಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಸುದ್ದಿಯಿಲ್ಲ, ಆದರೆ ಈ ಬಗ್ಗೆ ಜನರು ಸಾಕಷ್ಟು ಆಕ್ರೋಶ ಹೊರಹಾಕುತ್ತಿದ್ದಾರೆ.

ಉಕ್ರೇನ್‌ನ ಸೆಂಟ್ರಲ್ ಸಿಟಿ ಸ್ಟೇಡಿಯಂ ಅನ್ನು 1965 ರಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 16700 ಆಸನಗಳ ವ್ಯವಸ್ಥೆ ಇದೆ. ಇದು ಫುಟ್‌ಬಾಲ್ ಕ್ಲಬ್ MFK ಮಿಖೈಲೆವ್‌ನ ತವರು ಮೈದಾನವಾಗಿದೆ. ನಗರದ ಮೇಯರ್ ಪ್ರಕಾರ, ಈ ಕ್ರೀಡಾಂಗಣವನ್ನು ಕಳೆದ ವರ್ಷವಷ್ಟೇ ನವೀಕರಿಸಲಾಗಿದೆ. ಅದರಲ್ಲಿ ಹೊಸ ಪೀಠೋಪಕರಣಗಳು ಮತ್ತು ತಾಂತ್ರಿಕ ಉಪಕರಣಗಳನ್ನು ಅಳವಡಿಸಲಾಗಿದೆ.
Published On - 2:56 pm, Thu, 30 June 22



















