ಬಾಳೆ ಎಲೆಯಲ್ಲಿ ಏಕೆ ಊಟ ಮಾಡಬೇಕು? ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ
ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರ. ಜೊತೆಗೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಕೆಲ ಆರೋಗ್ಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.
ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ (Old) ಆಚಾರ ವಿಚಾರಗಳನ್ನು ಮೂಲೆ ಗುಂಪಾಗಿಸಿದ್ದೇವೆ. ಅವುಗಳಲ್ಲಿ ಬಾಳೆ ಎಲೆಯಲ್ಲಿ (Banana Leaf) ಊಟ ಮಾಡುವ ಪದ್ಧತಿಯೂ ಒಂದು. ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ. ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ. ಅದು ಸಂಪ್ರದಾಯ ಕೂಡಾ ಹೌದು. ಹಾಗಾಗಿಯೇ, ಮದುವೆ, ದೇವಾಲಯಗಳ ಪ್ರಸಾದ ಭೋಜನ, ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ.
ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರ. ಜೊತೆಗೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಕೆಲ ಆರೋಗ್ಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು.
ಜೀರ್ಣಕ್ರಿಯೆ: ಬಾಳೆ ಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ. ಬಿಸಿ ಆಹಾರ ಎಲೆಗೆ ಬಿದ್ದ ತಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಇದನ್ನೂ ಓದಿ: Pushpa 2: ಈ ಕ್ವಾಲಿಟಿ ಇದ್ರೆ ‘ಪುಷ್ಪ 2’ ಚಿತ್ರದಲ್ಲಿ ನೀವೂ ನಟಿಸಬಹುದು
ಕ್ಯಾನ್ಸರ್ ರೋಗ ತಡೆಯುತ್ತದೆ: ಬಾಳೆ ಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ. ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ. ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ದೇಹ ಸೇರಲು ಬಿಡಲ್ಲ.
ದೇಹಕ್ಕೆ ತಂಪು: ಬಾಳೆ ಎಲೆ ಊಟ ದೇಹಕ್ಕೆ ತಂಪು. ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.
ಭೋಜನದಲ್ಲಿ ಬಡಿಸುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ: 1. ಉಪ್ಪು (ಸೌಗಂಧಿ ಸಹಿತ ಜನಾರ್ಧನ). 2. ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ). 3. ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ). 4. ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಷಿಕೇಶ). 5. ಹುಳಿ ರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ). 6. ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ). 7. ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ). 8. ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಮಾಧವ). 9. ಹೋಳಿಗೆ (ಕಮಲಾಲಯ ಮಧುಸೂದನ). 10. ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಅಧೋಕ್ಷಜ). 11. ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಅಚ್ಯುತ). 12. ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸಹಿತ ನರಸಿಂಹ). 13. ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ). 14. ತೊವ್ವೆ (ಧಾನ್ಯ ಸಹಿತ ಶ್ರೀಧರ). 15. ಪರಮಾನ್ನ – ಪಾಯಸ (ಲಕ್ಷ್ಮೀ ಸಹಿತ ನಾರಾಯಣ). 16. ಅನ್ನ (ಶ್ರೀ ಕೇಶವ). 17. ತುಪ್ಪ (ಪದ್ಮಾ ಸಹಿತ ಗೋವಿಂದ). 18. ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ). 19. ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ). 20. ಮೊಸರು (ವೃಕ್ಷಾಕಪಿ ಸಹಿತ ವಾಮನ). 21. ಕುಡಿಯುವ ನೀರು (ಶ್ರೀ ಕೃಷ್ಣ). 22. ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ). 23. ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ). 24. ವೀಳ್ಯದೆಲೆ (ಶ್ರೀ ಹರಿ). 25. ಪಾನಕ – ನಿಂಬೆ (ವಿಶ್ವ).