Nail Care: ನಿಮಗೆ ಉಗುರು ಕಚ್ಚುವ ಅಬ್ಯಾಸವಿದೆಯೇ? ಕೂಡಲೇ ಬಿಟ್ಟುಬಿಡಿ
ನಿಮಗೆ ಉಗುರು ಕಚ್ಚುವ ಅಭ್ಯಾಸವಿದ್ದರೇ ಕೂಡಲೇ ಬಿಟ್ಟುಬಿಡಿ, ಉಗುರು ಕಚ್ಚುವುದು ಕೈಗಳ ಸೌಂದರ್ಯವನ್ನು ಹಾಳು ಮಾಡುವುದಷ್ಟೇ ಅಲ್ಲದೆ ಆರೋಗ್ಯಕ್ಕೂ ಕೂಡ ಹಾನಿಕಾರಕ. ಉಗುರುಗಳು ಮಾನವ ದೇಹದ ಅತ್ಯಗತ್ಯ ಭಾಗವಾಗಿದೆ. ಉಗುರುಗಳು ದಿನನಿತ್ಯದ ಸರಳ ಮತ್ತು ಸಂಕೀರ್ಣ ಕಾರ್ಯಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ನಿಮ್ಮ ಉಗುರುಗಳನ್ನು ಕಳೆದುಕೊಳ್ಳಲು ಈ ಕಾರಣಗಳಿರಬಹುದು -ಐರನ್ ಡಿಫಿಶಿಯೆನ್ಸಿ -ಥೈರಾಯ್ಡ್ -ರೇನಾಡ್ಸ್ ಸಿಂಡ್ರೋಮ್ -ಕೆಮಿಕಲ್ ಬಳಕೆಯಿಂದ -ಉಗುರು ಕಚ್ಚುವುದು
ನಿಮ್ಮ ಉಗುರುಗಳ ಆರೋಗ್ಯ ಕಾಮಾಡಿಕೊಳ್ಳುವುದು ಹೇಗೆ? -ಬಟ್ಟೆಯಿಂದ ಕೈ ಹಾಗೂ ಉಗುರುಗಳನ್ನು ಕವರ್ ಮಾಡಿ -ಮಾಯ್ಚುರೈಸ್ ಮಾಡಿ -ಉತ್ತಮ ಕ್ವಾಲಿಟಿಯ ಉಗುರುಬಣ್ಣವನ್ನು ಹಚ್ಚಿ -ಉಗುರನ್ನು ಕಚ್ಚಬೇಡಿ ಒಂದೆಡೆ ಬಹಳಷ್ಟು ಮಹಿಳೆಯರು ತಮ್ಮ ಉಗುರುಗಳನ್ನು ಬೇರೆಯ ರೀತಿಯಲ್ಲೇ ಪ್ರೀತಿಸುತ್ತಾರೆ, ಇನ್ನೂ ಕೆಲವರು ನಿರ್ವಹಿಸಲು ವಿಫಲರಾಗುತ್ತಾರೆ ಹಾಗೆಯೇ ಉಗುರು ಕಚ್ಚುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಾರೆ.
ಉಗುರು ಕಚ್ಚಲು ಕಾರಣವೇನೆಂಬುದನ್ನು ತಿಳಿದುಕೊಳ್ಳಬೇಕು ನೀವು ಉಗುರುಗಳನ್ನು ಕಚ್ಚುವುದಕ್ಕೆ ಕಾರಣವೇನೆಂದು ಮೊದಲು ನೀವು ತಿಳಿದುಕೊಳ್ಳಬೇಕು. ಯಾವುದೇ ಕಾಯಿಲೆ, ಸಮಸ್ಯೆ ಅಥವಾ ಕೆಟ್ಟ ಅಭ್ಯಾಸವನ್ನು ಗುಣಪಡಿಸಲು ನೀವು ಹಾಗೆ ಮಾಡಲು ಕಾರಣವೇನೆಂದು ತಿಳಿದಿರಬೇಕು.
ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ ಈ ಅಭ್ಯಾಸವನ್ನು ತೊಡೆದುಹಾಕಲು, ನಿಮ್ಮ ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ. ಇದು ಖಂಡಿತವಾಗಿಯೂ ನಿಮಗೆ ಸ್ವಲ್ಪ ಸಮಯ ತೊಂದರೆಯಾಗಬಹುದು ಆದರೆ ನಿಮ್ಮ ಈ ಕೆಟ್ಟ ಅಭ್ಯಾಸ ದೂರವಾಗಲಿದೆ. ಸಣ್ಣ ಉಗುರುಗಳು ರೋಗಾಣುಗಳು ಮತ್ತು ಉಗುರು ಸೋಂಕು ಹರಡುವುದನ್ನು ತಡೆಯುತ್ತದೆ.
ಉಗುರುಗಳನ್ನು ಶುಚಿಯಾಗಿಟ್ಟುಕೊಳ್ಳಿ ನೀವು ನಿಮ್ಮ ಉಗುರುಗಳನ್ನು ಪ್ರೀತಿಸುತ್ತೀರಿ ಎಂಬುದು ತಿಳಿದಿರುವುದೇ, ಆದರೆ ನಿಜವಾಗಿಯೂ ನಿಮ್ಮ ಉಗುರಿನ ಮೇಲೆ ನಿಮಗೆ ಪ್ರೀತಿ ಇದ್ದರೆ ಅವುಗಳನ್ನು ಶುಚಿಯಾಗಿಟ್ಟುಕೊಳ್ಳಿ.