Pushpa 2: ಈ ಕ್ವಾಲಿಟಿ ಇದ್ರೆ ‘ಪುಷ್ಪ 2’ ಚಿತ್ರದಲ್ಲಿ ನೀವೂ ನಟಿಸಬಹುದು

ಜುಲೈ 3, ಜುಲೈ 4 ಹಾಗೂ ಜುಲೈ 5ರಂದು ಆಡಿಷನ್ ನಡೆಯುತ್ತಿದೆ. ಯಾವುದೇ ವಯಸ್ಸಿನ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಈ ಆಡಿಷನ್​ನಲ್ಲಿ ಪಾಲ್ಗೊಳ್ಳಬಹುದು.

Pushpa 2: ಈ ಕ್ವಾಲಿಟಿ ಇದ್ರೆ ‘ಪುಷ್ಪ 2’ ಚಿತ್ರದಲ್ಲಿ ನೀವೂ ನಟಿಸಬಹುದು
ಅಲ್ಲು ಅರ್ಜುನ್-ರಶ್ಮಿಕಾ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 02, 2022 | 2:31 PM

ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರವನ್ನು (Pushpa Movie) ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಬಾಚಿಕೊಂಡಿದೆ. ಹೀಗಾಗಿ ‘ಪುಷ್ಪ 2’ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಕಾರಣಕ್ಕೆ ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಕಾಳಜಿ ವಹಿಸಿ ಎರಡನೇ ಪಾರ್ಟ್ ಮಾಡುತ್ತಿದ್ದಾರೆ. ಆರು ತಿಂಗಳಿಗೂ ಹೆಚ್ಚು ಕಾಲ ಅವರು ಸ್ಕ್ರಿಪ್ಟ್​ ವರ್ಕ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಅದಕ್ಕೂ ಮೊದಲು ‘ಪುಷ್ಪ 2’ಗೆ ಆಡಿಷನ್ ಕರೆಯಲಾಗಿದೆ.

‘ಪುಷ್ಪ’ ಚಿತ್ರದಲ್ಲಿ ಹೈಲೈಟ್ ಆಗಿದ್ದು ಚಿತ್ತೂರು ಭಾಗದಲ್ಲಿ ಮಾತನಾಡುವ ತೆಲುಗು ಭಾಷೆ. ಚಿತ್ತೂರು ಭಾಗದಲ್ಲಿ ಸಿನಿಮಾದ ಕಥೆ ಸಾಗಿದ್ದರಿಂದ ಅಲ್ಲಿನ ಸೊಗಡನ್ನೇ ನಿರ್ದೇಶಕರು ಬಳಕೆ ಮಾಡಿಕೊಂಡಿದ್ದರು. ‘ಪುಷ್ಪ 2’ ಸಿನಿಮಾದಲ್ಲೂ ಅದು ಮುಂದುವರಿಯುತ್ತಿದೆ. ಈ ವಿಚಾರವನ್ನು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ಆಡಿಷನ್​ನಲ್ಲಿ ಪಾಲ್ಗೊಳ್ಳುವವರಿಗೆ ಚಿತ್ತೂರು ಶೈಲಿಯ ತೆಲುಗು ಬರಲೇಬೇಕು ಎಂಬ ಷರತ್ತನ್ನು ನಿರ್ದೇಶಕರು ವಿಧಿಸಿದ್ದಾರೆ.

ತಿರುಪತಿಯಲ್ಲಿ ಜುಲೈ 3, ಜುಲೈ 4 ಹಾಗೂ ಜುಲೈ 5ರಂದು ಆಡಿಷನ್ ನಡೆಯುತ್ತಿದೆ. ಯಾವುದೇ ವಯಸ್ಸಿನ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಈ ಆಡಿಷನ್​ನಲ್ಲಿ ಪಾಲ್ಗೊಳ್ಳಬಹುದು. ಮೇಕ್ ಮೈ ಬೇಬಿ ಜೀನಿಯಸ್ ಸ್ಕೂಲ್​​ನಲ್ಲಿ ಆಡಿಷನ್ ನಡೆಯಲಿದೆ. ಮುಂಜಾನೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಆಡಿಷನ್ ಜರುಗಲಿದೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಆಡಿಷನ್​ನಲ್ಲಿ ಪಾಲ್ಗೊಳ್ಳುವವರು ಅದ್ಭುತವಾಗಿ ನಟನೆ ತೋರಬೇಕು. ಮೇಲೆ ಹೇಳಿದಂತೆ ಚಿತ್ತೂರ್ ಶೈಲಿಯ ತೆಲುಗು ಬರಬೇಕು. ಇದೆರಡು ಕ್ವಾಲಿಟಿ ನಿಮ್ಮಲ್ಲಿ ಇದ್ದರೆ ನೀವು ಆಡಿಷನ್​ನಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ಪಾಸ್ ಆದರೆ ‘ಪುಷ್ಪ 2’ ಚಿತ್ರದಲ್ಲಿ ನಟಿಸುವ ಅವಕಾಶ ನಿಮ್ಮದಾಗಲಿದೆ.

ಪುಷ್ಪ ಚಿತ್ರದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ‘ಪುಷ್ಪ’ ಚಿತ್ರವನ್ನು ಹಿಂದಿಯಲ್ಲಿ ‘ಗೋಲ್ಡ್​ಮೈನ್​ ಫಿಲ್ಮ್ಸ್​’ ಹಂಚಿಕೆ ಮಾಡಿತ್ತು. ಈಗ ಹಲವು ದೊಡ್ಡ ನಿರ್ಮಾಣ ಸಂಸ್ಥೆಗಳು ‘ಪುಷ್ಪ 2’ ಹಂಚಿಕೆಗೆ ಆಸಕ್ತಿ ತೋರಿಸಿವೆ. ಆದರೆ, ಮೈತ್ರಿ ಮೂವೀ ಮೇಕರ್ಸ್​ ಇದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ. ಬದಲಿಗೆ ಹಿಂದಿ ಬೆಲ್ಟ್​​ನಲ್ಲಿ ತಾವೇ ಸಿನಿಮಾ ರಿಲೀಸ್ ಮಾಡಲು ಆಸಕ್ತಿ ತೋರಿಸಿದೆ ಎನ್ನಲಾಗುತ್ತಿದೆ. ಈ ಮೂಲಕ ಹಿಂದಿ ಚಿತ್ರರಂಗದಲ್ಲೂ ತಮ್ಮ ಹೆಜ್ಜೆ ಇಡಲು ಈ ನಿರ್ಮಾಣ ಸಂಸ್ಥೆ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಬರಬೇಕಿದೆ. ‘ಪುಷ್ಪ 2’ ಚಿತ್ರ 2023ರ ಬೇಸಿಗೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Pushpa 2: ಫಾರಿನ್​ ಹುಡುಗಿ ಜತೆ ಅಲ್ಲು ಅರ್ಜುನ್​​ ರೊಮ್ಯಾನ್ಸ್​; ‘ಪುಷ್ಪ 2’ ಚಿತ್ರದಲ್ಲಿ ರಶ್ಮಿಕಾ ಪಾತ್ರಕ್ಕೆ ಬೀಳುತ್ತಾ ಕತ್ತರಿ?

‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್