ರಾತ್ರಿ ಹೊತ್ತು ತಿಂದ ಪಾತ್ರೆಯನ್ನು ತೊಳೆಯದೇ ಇಡಬಾರದು ಏಕೆ?

ಮುಂಜಾನೆ ಏಳುವುದು, ಸ್ನಾನ ಮಾಡಿ ಪೂಜೆ ಮಾಡುವುದು, ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗುವುದು, ರಾತ್ರಿ ಮಲಗುವ ಮುನ್ನ ಕಾಲು ತೊಳೆಯುವುದು ಸೂರ್ಯಾಸ್ತದ ನಂತರ ಮತ್ತು ರಾತ್ರಿ ಮನೆ ಗುಡಿಸಬಾರದು ಎಂಬುದನ್ನು ಬಾಯಿಂದ ಕೇಳಿದ್ದೇವೆ.

ರಾತ್ರಿ ಹೊತ್ತು ತಿಂದ ಪಾತ್ರೆಯನ್ನು ತೊಳೆಯದೇ ಇಡಬಾರದು ಏಕೆ?
PlatesImage Credit source: Mental Floss
Follow us
TV9 Web
| Updated By: ನಯನಾ ರಾಜೀವ್

Updated on: Aug 09, 2022 | 1:44 PM

ಮುಂಜಾನೆ ಏಳುವುದು, ಸ್ನಾನ ಮಾಡಿ ಪೂಜೆ ಮಾಡುವುದು, ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗುವುದು, ರಾತ್ರಿ ಮಲಗುವ ಮುನ್ನ ಕಾಲು ತೊಳೆಯುವುದು ಸೂರ್ಯಾಸ್ತದ ನಂತರ ಮತ್ತು ರಾತ್ರಿ ಮನೆ ಗುಡಿಸಬಾರದು ಎಂದು ಹಲವಾರು ನಿಯಮಗಳನ್ನು ಪೂರ್ವಜರ ಬಾಯಿಂದ ಕೇಳಿದ್ದೇವೆ. ಹಾಗೆಯೇ ರಾತ್ರಿ ಹೊತ್ತು ಊಟವಾದ ಬಳಿಕ ತಿಂದ ಪಾತ್ರೆಗಳನ್ನು ತೊಳೆಯದೇ ಹಾಗೆ ಇಡಬಾರದು.

ಈ ಎಲ್ಲಾ ನಿಯಮಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಶಿಸ್ತು ಉಳಿಯುತ್ತದೆ ಮತ್ತು ನಮ್ಮ ದೈನಂದಿನ ಚಟುವಟಿಕೆಗಳು ಸಹ ಸುಗಮವಾಗಿ ನಡೆಯುತ್ತದೆ ಎಂದು ನಂಬಲಾಗಿದೆ. ನಾವು ಶತಮಾನಗಳಿಂದ ಅನುಸರಿಸುತ್ತಿರುವ ಶಾಸ್ತ್ರಗಳಲ್ಲಿ ಇಂತಹ ಅನೇಕ ವಿಷಯಗಳನ್ನು ಬರೆಯಲಾಗಿದೆ, ಆದರೆ ಅದರ ಹಿಂದಿನ ಕಾರಣಗಳು ನಮಗೆ ತಿಳಿದಿಲ್ಲ.

ಅಂತಹ ಒಂದು ವಿಷಯವೆಂದರೆ ರಾತ್ರಿಯಲ್ಲಿ ಪಾತ್ರೆಗಳನ್ನು ತೊಳೆಯದೇ ಹಾಗೆಯೇ ಬಿಡಬಾರದು ಎಂಬ ನಿಯಮ.

ವೈಜ್ಞಾನಿಕ ಕಾರಣಗಳು ರಾತ್ರಿಯಲ್ಲಿ ತಿಂದ ಪಾತ್ರೆಯನ್ನು ತೊಳೆಯದೇ ಹಾಗೆಯೇ ಬಿಟ್ಟರೆ ಅದರಲ್ಲಿ ಉಳಿದಿರುವ ಆಹಾರದಿಂದ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ. ರಾತ್ರೋರಾತ್ರಿ ಬ್ಯಾಕ್ಟೀರಿಯಾಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ಪಾತ್ರೆಗಳನ್ನು ರಾತ್ರಿಯಿಡೀ ಇಟ್ಟುಕೊಂಡು ಬೆಳಿಗ್ಗೆ ಸ್ವಚ್ಛಗೊಳಿಸಿದರೂ ಅದರಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ದೇಹವನ್ನು ಪ್ರವೇಶಿಸಿ ಆರೋಗ್ಯವನ್ನು ಹಾಳುಮಾಡುತ್ತವೆ. ರೋಗಗಳು ಕೂಡ ಹೆಚ್ಚು.

ಜ್ಯೋತಿಷ್ಯ ಕಾರಣಗಳು ರಾತ್ರಿಯಲ್ಲಿ ಪಾತ್ರೆಯನ್ನು ತೊಳೆಯದೇ ಹಾಗೆಯೇ ಇಡುವುದರಿಂದ ಮನೆಯಲ್ಲಿ ದುಃಖ ಹೆಚ್ಚಾಗುತ್ತದೆ.

ಕೊಳಕು ಪಾತ್ರೆಯನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಚಂದ್ರ ಮತ್ತು ಶನಿ ಕೋಪಗೊಳ್ಳಬಹುದು ಇದರಿಂದ ನಿಮಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಇದರೊಂದಿಗೆ ಈ ರೀತಿ ಮಾಡುವುದರಿಂದ ವ್ಯಕ್ತಿಯ ಮಾನಸಿಕ ಒತ್ತಡವೂ ಹೆಚ್ಚುತ್ತದೆ.

ಧಾರ್ಮಿಕ ಕಾರಣಗಳು ನೀವು ಮನೆಯಲ್ಲಿ ಶುದ್ಧತೆ ಮತ್ತು ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅದು ಮನೆಯಲ್ಲಿ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.

ಆದ್ದರಿಂದ, ನೀವು ರಾತ್ರಿಯಲ್ಲಿ ಕೊಳಕು ಪಾತ್ರೆಗಳನ್ನು ಬಿಟ್ಟರೆ, ಅದು ಲಕ್ಷ್ಮಿ ದೇವಿಯುಕೋಪಗೊಳ್ಳಲು ಕಾರಣವಾಗಬಹುದು ಮತ್ತು ಅಂತಹ ಮನೆಯಲ್ಲಿ ಯಾವುದೇ ಆಶೀರ್ವಾದ ಇರುವುದಿಲ್ಲ ಮತ್ತು ಹಣವನ್ನು ಅನುಪಯುಕ್ತ ಕೆಲಸಗಳಲ್ಲಿ ಖರ್ಚು ಮಾಡಲಾಗುತ್ತದೆ. ಈ ಪಾತ್ರೆಗಳು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತವೆ.

ಆಹಾರ ಸೇವಿಸಿದ ಕೂಡಲೇ ಪಾತ್ರೆಗಳನ್ನು ತೊಳೆಯಬೇಕು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆದರೆ ನೀವು ಇದನ್ನು ಮಾಡದಿದ್ದರೂ ಸಹ, ನೀವು ಕೊಳಕು ಪಾತ್ರೆಗಳನ್ನು ರಾತ್ರಿಯಿಡೀ ಬಿಡಬಾರದು ಆದರೆ ಕನಿಷ್ಠಪಕ್ಷ ಆ ಪಾತ್ರೆಗಳಿಗೆ ನೀರು ಹಾಕು ಎಂಜಿಲನ್ನು ತೆಗೆಯಿರಿ.

ಈ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್