ಬೆಂಗಳೂರಿನ ಆಸ್ಪತ್ರೆಗಳಲ್ಲಿ H1N1 ರೋಗಿಗಳ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ
ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎಚ್1 ಎನ್1 ಹಾಗೂ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ನಗರದಲ್ಲಿ ಹಲವು ರೀತಿಯ ಕಾಯಿಲೆಗಳು ಶುರುವಾಗುತ್ತಿವೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹಂದಿ ಜ್ವರ( ಎಚ್1ಎನ್1) ಹಾಗೂ ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬರುತ್ತದೆ. ಹವಾಮಾನ ಬದಲಾವಣೆಯಿಂದಾಗಿ ನಗರದಲ್ಲಿ ಹಲವು ರೀತಿಯ ಕಾಯಿಲೆಗಳು ಶುರುವಾಗುತ್ತಿವೆ. ಕಳೆದ ತಿಂಗಳು ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿದ್ದವು. ಹಾಗೆಯೇ ಎಚ್1ಎನ್1 ಹಾಗೂ ಡೆಂಗ್ಯೂ ಪ್ರಕರಣಗಳು ಕೂಡ ಹೆಚ್ಚಾಗಿದ್ದವು.
ಇನ್ನು ಅಪೋಲೊ ಆಸ್ಪತ್ರೆಯಲ್ಲಿ ಶೇ.50 ರಷ್ಟು ರೋಗಿಗಳು ಎಚ್1ಎನ್1 ಹಾಗೂ ಸಾಮಾನ್ಯ ಜ್ವರದಿಂದ ಬಳಲುತ್ತಿದ್ದಾರೆ ಎಂದು ಡಾ. ರವೀಂದ್ರ ಮೆಹ್ತಾ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಒಪಿಡಿಯಲ್ಲಿ ನಿತ್ಯ 50 ರಿಂದ 70 ಜ್ವರಕ್ಕೆ ಸಂಬಂಧಿಸಿದ ರೋಗಿಗಳು ದಾಖಲಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ,. ಹಂದಿಜ್ವರದ ಲಕ್ಷಣಗಳೇನು? * ಅತಿಯಾದ ಮೈ ಕೈ ನೋವು * ಕೆಮ್ಮು ಮತ್ತು ಹಳದಿ ಕಫ * ನೆಗಡಿ ಮತ್ತು ಗಂಟಲು ಕೆರೆತ * ಉಸಿರಾಟ ತೊಂದರೆ
* ತೀವ್ರ ಸ್ವರೂಪದ ಜ್ವರ * ಅತಿ ಭೇದಿ ಮತ್ತು ವಾಂತಿ
ಅನುಸರಿಸಬೇಕಾದ ಕ್ರಮಗಳು * ಧಾರಾಳ ನೀರು ಕುಡಿಯಿತಿ, ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ * ಜನಸಂದಣಿ ಸ್ಥಳಕ್ಕೆ ತೆರಳಿದಾಗ ಮಾಸ್ಕ್ ಧರಿಸುವುದು ಒಳ್ಳೆಯದು
* ಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಮುಚ್ಚಿಕೊಳ್ಳಿ * ಬಾಯಿ ಅಥವಾ ಮೂಗನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ * ಚೆನ್ನಾಗಿ ನಿದ್ದೆಮಾಡಿ, ಒತ್ತಡವನ್ನು ನಿವಾರಿಸಿಕೊಳ್ಳಿ, ಚಟುವಟಿಕೆಯಿಂದಿರಿ
ಏನೇನು ಮಾಡಬಾರದು ?
* ಹಸ್ತ ಲಾಘವ ಅಥವಾ ಇತರೆ ರೂಪದ ದೈಹಿಕ ಸಂಪರ್ಕದ ಶುಭಕೋರಿಕೆ
* ವೈದ್ಯರ ಸಲಹೆ ಇಲ್ಲದೇ ಔಷಧಿ ತೆಗೆದುಕೊಳ್ಳಬೇಡಿ
* ರಸ್ತೆಯಲ್ಲಿ ಮತ್ತು ಎಲ್ಲೆಂದರಲ್ಲಿ ಉಗುಳಬೇಡಿ
* ಅನಾವಶ್ಯಕವಾಗಿ ಜನಸಂದಣಿ ಪ್ರದೇಶಕ್ಕೆ ತೆರಳಬೇಡಿ
* ಜ್ವರ ಸೋಂಕು ಕಾಣಿಸಿಕೊಂಡ ಮಕ್ಕಳನ್ನು ಶಾಲೆಗೆ ಕಳುಹುಸಬೇಡಿ
ಡೆಂಗೀ ಜ್ವರದ ಲಕ್ಷಣಗಳು: ಅಜೀರ್ಣ, ಹಸಿವು ಕುಂದುವುದು, ಚಡಪಡಿಕೆ, ಬಿಸಿ-ಶೀತಗಳ ಇಚ್ಛೆ, ಮೈಭಾರ, ತಲೆಭಾರ, ಆಲಸ್ಯ ಇತ್ಯಾದಿ ಪೂರ್ವಲಕ್ಷಣಗಳನ್ನೂ ತೋರುವುದಿಲ್ಲ. ಹಾಗಾಗಿ ತಕ್ಷಣ 103 ಡಿಗ್ರಿಗಿಂತಲೂ ಏರುವ ತೀವ್ರತಾಪ, ಕಣ್ಣುಗುಡ್ಡೆಯ ಹಿಂದೆ ಸೆಳೆತ, ನೋವು, ಬೆನ್ನುಹುರಿಯ ಗುಂಟ ನೋವು, ಸೊಂಟ ಮೊದಲಾದ ಸಂದುಗಳ ನೋವು, ತಲೆನೋವು, ಮಾಂಸಖಂಡ ಮತ್ತು ಸ್ನಾಯುಗಳ ಸೆಳೆತ, ಹಸಿವು ಅತಿಯಾಗಿ ಕುಂದುವುದು, ಹೊಟ್ಟೆಯ ನೋವು – ಅಸ್ವಸ್ಥತೆ, ಮಕ್ಕಳಲ್ಲಿ ಹೆಚ್ಚಾಗಿ ವಾಂತಿ, ಭೇದಿ, ತುರಿಕೆ, ಸುಸ್ತಾಗುವುದು.