ಹಾಲನ್ನು ಯಾವ ಸಮಯದಲ್ಲಿ ಕುಡಿದರೆ ಒಳಿತು, ಆಯುರ್ವೇದ ಏನು ಹೇಳುತ್ತೆ?
ನಿತ್ಯವೂ ಕನಿಷ್ಠವೆಂದರೂ ಎರಡರಿಂದ ಮೂರು ಬಾರಿ ಹಾಲು ಕುಡಿಯುವುದು ರೂಢಿ. ಆದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಹಾಲು ಕುಡಿಯಬೇಡಿ ಎಂದು ಆಯುರ್ವೇದ ಹೇಳುತ್ತೆ.
ನಿತ್ಯವೂ ಕನಿಷ್ಠವೆಂದರೂ ಎರಡರಿಂದ ಮೂರು ಬಾರಿ ಹಾಲು ಕುಡಿಯುವುದು ರೂಢಿ. ಆದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಹಾಲು ಕುಡಿಯಬೇಡಿ ಎಂದು ಆಯುರ್ವೇದ ಹೇಳುತ್ತೆ. ಹಾಗೆಯೇ ಯಾವ ಸಮಯದಲ್ಲಿ ಹಾಲನ್ನು ಕುಡಿದರೆ ಒಳಿತು ಹಾಗೆಯೇ ಹಾಲಿನ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟಿನ್, ಮೆಗ್ನೀಶಿಯಂ, ವಿಟಮಿನ್ ಎ, ಡಿ, ಇ ಇತ್ಯಾದಿಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇವುಗಳು ಮೂಳೆಗಳು ಹಾಗೂ ಹಲ್ಲುಗಳನ್ನು ಬಲಪಡಿಸುತ್ತವೆ.
ಕೆಮ್ಮಿದ್ದರೆ ದಿನಪೂರ್ತಿ ಇದ್ದರೆ ಹಾಲು ಕುಡಿಯಬೇಡಿ ಕಫದ ಕೆಮ್ಮಿದ್ದರೆ ಹಾಲು ಕುಡಿಯಬೇಡಿ, ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಆರೋಗ್ಯಕ್ಕೆ ಹಾನಿಕರ ಮತ್ತು ತಲೆನೋವಿಗೆ ಕಾರಣವಾಗಬಹುದು .
ಗಂಟಲಿನ ತುರಿಕೆ ಇದ್ದರೂ ಹಾಲು ಬೇಡ ಚರ್ಮದ ಸಮಸ್ಯೆಗಳು, ಮೂಗು, ಕಿವಿ, ಕೆಮ್ಮು, ನೆಗಡಿ, ಜ್ವರ ಮತ್ತು ಗಂಟಲಿನ ತುರಿಕೆ ಇರುವವರು ಹಾಲು ಕುಡಿಯಬಾರದು. ಈ ಸಮಸ್ಯೆ ಇರುವವರು ಬೇಸಿಗೆಯಲ್ಲಿ ಮಲಗುವ ಸಮಯದಲ್ಲಿ ಹಾಲು ಕುಡಿಯಬಹುದು.
ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮ
ಎಮ್ಮೆಯ ಹಾಲಿಗಿಂತ ಹಸುವಿನ ಹಾಲು ಆರೋಗ್ಯಕ್ಕೆ ಉತ್ತಮವಾಗಿದ್ದು, ಎದೆಯುರಿ ಇದ್ದರೆ ಹಾಲಿನಲ್ಲಿ ಸ್ವಲ್ಪ ರುಹಾಫ್ಜಾ ಸೇರಿಸಿ ಕುಡಿಯಿರಿ. ದೇಹದ ಉಷ್ಣತೆ, ಎದೆಯುರಿ ಮತ್ತು ದೈಹಿಕ ಚಟುವಟಿಕೆ ಇರುವವರು ಹಸುವಿನ ಹಾಲನ್ನು ಸೇವಿಸಬೇಕು.
ಕಾಲು ಕುಡಿಯಲು ಉತ್ತಮ ಸಮಯ
ಊಟದ ಬಳಿಕ ಹಾಲು ಕುಡಿಬೇಡಿ. ನೀವು ಹಸಿದಿರುವಾಗ ನೀವು ಹಾಲು ಕುಡಿಯಬಹುದು, ಏಕೆಂದರೆ ಇದು ಪರಿಪೂರ್ಣ ಆಹಾರವಾಗಿದೆ. ಹೀಗೆ ಮಾಡುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಜೀರ್ಣವಾಗದಿದ್ದರೆ ಶೀತ, ಕೆಮ್ಮು, ಅತಿಸಾರ, ವಾಂತಿ, ಜ್ವರ ಮತ್ತು ಅಜೀರ್ಣ ಉಂಟಾಗಬಹುದು.
ಊಟದ ಜೊತೆ ಹಾಲು ಕುಡಿಯಬೇಡಿ, ಏಕೆಂದರೆ ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಆಹಾರ ಜೀರ್ಣವಾಗಲು ತೊಂದರೆ ಇರುವವರು ಹಾಲಿನಲ್ಲಿ ಸ್ವಲ್ಪ ಒಣ ಶುಂಠಿ ಪುಡಿಯನ್ನು ಸೇರಿಸಿ ಕುದಿಸಬೇಕು.