Health Tips: ಒಳ ಉಡುಪಿನ ಆಯ್ಕೆ ಹೇಗಿರಬೇಕು? ಯಾವುದು ಉತ್ತಮ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2024 | 1:56 PM

ತುಂಬಾ ಬಿಗಿಯಾಗಿರುವಂತಹ ಬಟ್ಟೆಗಳನ್ನು ದೀರ್ಘ ಸಮಯದ ತನಕ ಧರಿಸಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಯಾವಾಗಲೂ ಸ್ವಲ್ಪ ಸಡಿಲ ವಾಗಿರುವ ಬಟ್ಟೆ ಧರಿಸಿದರೆ ತುಂಬಾ ಒಳ್ಳೆಯದು. ಇಲ್ಲಿ ಮುಖ್ಯವಾಗಿ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ಕೂಡ ಸಮಸ್ಯೆಯಾಗುವುದು ಎಂದು ಸಂಶೋಧನೆಗಳು ಹೇಳಿವೆ. ಹಾಗಾದರೆ ಇದರಿಂದ ಆಗುವ ಸಮಸ್ಯೆಗಳೇನು? ಯಾವ ರೀತಿಯ ಒಳ ಉಡುಪುಗಳನ್ನು ಆಯ್ಕೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Health Tips: ಒಳ ಉಡುಪಿನ ಆಯ್ಕೆ ಹೇಗಿರಬೇಕು? ಯಾವುದು ಉತ್ತಮ
ಸಾಂದರ್ಭಿಕ ಚಿತ್ರ
Follow us on

ನಾವು ಪ್ರತಿನಿತ್ಯ ಧರಿಸುವಂತಹ ಬಟ್ಟೆಯೂ ಕೂಡ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದರೆ ನೀವು ನಂಬುತ್ತೀರಾ? ಹೌದು ಇದು ನಿಜ. ತುಂಬಾ ಬಿಗಿಯಾಗಿರುವಂತಹ ಬಟ್ಟೆಗಳನ್ನು ದೀರ್ಘ ಸಮಯದ ತನಕ ಧರಿಸಿದರೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಬರಬಹುದು. ಹೀಗಾಗಿ ಯಾವಾಗಲೂ ಸ್ವಲ್ಪ ಸಡಿಲ ವಾಗಿರುವ ಬಟ್ಟೆ ಧರಿಸಿದರೆ ತುಂಬಾ ಒಳ್ಳೆಯದು. ಇಲ್ಲಿ ಮುಖ್ಯವಾಗಿ ಬಿಗಿ ಒಳ ಉಡುಪು ಧರಿಸಿದರೆ ಅದರಿಂದ ಕೂಡ ಸಮಸ್ಯೆಯಾಗುವುದು ಎಂದು ಸಂಶೋಧನೆಗಳು ಹೇಳಿವೆ. ಹಾಗಾದರೆ ಇದರಿಂದ ಆಗುವ ಸಮಸ್ಯೆಗಳೇನು? ಯಾವ ರೀತಿಯ ಒಳ ಉಡುಪುಗಳನ್ನು ಆಯ್ಕೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ವೀರ್ಯದ ಉತ್ಪತ್ತಿ ಮೇಲೆ ಪರಿಣಾಮ

ಮುಖ್ಯವಾಗಿ ಬಿಗಿ ಬಟ್ಟೆಯಿಂದಾಗಿ ರಕ್ತ ಸಂಚಾರದ ಮೇಲೆ ಪರಿಣಾಮ ಉಂಟಾಗಬಹುದು. ಜೊತೆಗೆ ಪುರುಷರಲ್ಲಿ ವೀರ್ಯದ ಚಲನೆ ಮೇಲೆ ತುಂಬಾ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳಿಂದ ಬಹಿರಂಗಗೊಂಡಿದೆ. ಬಿಗಿಯಾದ ಒಳ ಉಡುಪಿನಿಂದಾಗಿ ವೃಷಣದ ಸುತ್ತಲು ಉಷ್ಣತೆಯು ಹೆಚ್ಚಾಗುವುದು ಮತ್ತು ಇದರಿಂದಾಗಿ ವೀರ್ಯದ ಉತ್ಪತ್ತಿ ಮೇಲೆ ಪರಿಣಾಮವಾಗುವುದು.

ಯೋನಿಯ ಸೋಂಕು

ಮಹಿಳೆಯರಲ್ಲಿ ಬಿಗಿಯಾದ ಒಳ ಉಡುಪಿನಿಂದಾಗಿ ತೊಡೆಯ ಮೇಲಿನ ಭಾಗದಲ್ಲಿ ರಕ್ತ ಸಂಚಾರ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಕಿರಿಕಿರಿ, ಸ್ಪರ್ಶವಿಲ್ಲದೆ ಇರುವುದು, ಮೈ ಜುಮ್ಮೆನಿಸುವ ಅನುಭವ ಆಗಬಹುದು. ತುಂಬಾ ಬಿಗಿಯಾದ ಬಟ್ಟೆಗಳನ್ನು ತೊಡುವುದರಿಂದ ಇದು ಹೊಟ್ಟೆಯ ಮೇಲೆ ಒತ್ತಡ ಹಾಕಬಹುದು ಮತ್ತು ಇದರಿಂದಾಗಿ ಆಮ್ಲೀಯ ಪ್ರತಿರೋಧವು ಕಾಣಿಸಿಕೊಂಡು ಎದೆಯುರಿ ಬರಬಹುದು. ಇದಕ್ಕಿಂತ ಮಿಗಿಲಾಗಿ ಯೋನಿಯ ಸೋಂಕು, ಚರ್ಮದಲ್ಲಿ ಕಿರಿಕಿರಿ, ದದ್ದು, ತುರಿಕೆ ಉಂಟಾಗಬಹುದು.

ಬಿಗಿ ಒಳ ಉಡುಪು ಧರಿಸುವುದು ಆಲ್ಕೋಹಾಲ್ ಮತ್ತು ಧೂಮಪಾನದಷ್ಟೇ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ ಅತಿಯಾಗಿ ಸಡಿಲ ವಾಗಿರುವ ಬಟ್ಟೆಗಳನ್ನು ಧರಿಸುವುದು ಕೂಡ ಒಳ್ಳೆಯದಲ್ಲ. ಆರೋಗ್ಯವಾಗಿರಲು ನೀವು ಹೆಚ್ಚು ಬಿಗಿಯಿಲ್ಲದೆ ಇರುವಂತಹ ಒಳ ಉಡುಪು ಧರಿಸಬೇಕು. ಸರಿಯಾಗಿ ಸ್ವಚ್ಛತೆ ಮತ್ತು ಸೋಂಕಿನ ವಿರುದ್ಧ ಹೋರಾಡಲು ದೇಹಕ್ಕೆ ಸರಿಯಾಗಿ ಗಾಳಿಯು ಬೇಕಾಗಿರುತ್ತದೆ. ಹಾಗಾಗಿ ದಿನನಿತ್ಯ ಮತ್ತು ವ್ಯಾಯಾಮದ ವೇಳೆ ಬಿಗಿಯಾದ ಒಳ ಉಡುಪು ಧರಿಸುವುದನ್ನು ತಪ್ಪಿಸಿ.

ಇದನ್ನೂ ಓದಿ: ಮುಟ್ಟಿನ ಕಪ್ ಮಹಿಳೆಯರಿಗೆ ಎಷ್ಟು ಸೇಫ್!

ಒಳ ಉಡುಪಿನ ಆಯ್ಕೆ ಹೇಗಿರಬೇಕು?

ಪುರುಷರು ವಿ- ಆಕಾರದ ಒಳಉಡುಪುಗಳನ್ನು ಬಳಸುವುದು ಉತ್ತಮ. ಇದು ಸಾಂಪ್ರದಾಯಿಕ ಲಂಗೋಟಿಗೆ ಹತ್ತಿರವಾಗಿದ್ದು ದೇಹಕ್ಕೆ ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇನ್ನು ಮಹಿಳೆಯರು ಹತ್ತಿ ಮತ್ತು ಹೈಪೋಲಾರ್ಜನಿಕ್ ಬಟ್ಟೆಗಳನ್ನು ಆಯ್ಕೆ ಮಾಡುವುದು ಉತ್ತಮ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ