AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Menstrual Cups: ಮುಟ್ಟಿನ ಕಪ್ ಮಹಿಳೆಯರಿಗೆ ಎಷ್ಟು ಸೇಫ್!

ಸಾಮಾನ್ಯವಾಗಿ ಮುಟ್ಟಿನ ಹರಿವನ್ನು ತಡೆಯಲು ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಅನ್ನು ಪ್ಯಾಡ್ ಗಳ ಬದಲಾಗಿ ಬಳಸಲಾಗುತ್ತಿದೆ. ಆದರೂ ಕೆಲವರಿಗೆ ಇದು ಒಳ್ಳೆಯದೇ? ಇದನ್ನು ಬಳಸುವುದು ಸುರಕ್ಷಿತವೇ? ಎಂಬಂತಹ ಹಲವಾರು ಪ್ರಶ್ನೆಗಳು ಕಾಡುತ್ತದೆ. ಹಾಗಾದರೆ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಇದನ್ನು ಮುಟ್ಟಿನ ಸಮಯದಲ್ಲಿ ಬಳಸಬಹುದೇ? ಇಲ್ಲಿದೆ ಮಾಹಿತಿ.

Menstrual Cups: ಮುಟ್ಟಿನ ಕಪ್ ಮಹಿಳೆಯರಿಗೆ ಎಷ್ಟು ಸೇಫ್!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jul 17, 2024 | 12:28 PM

Share

ಋತುಚಕ್ರದ ಸಮಯದಲ್ಲಿ ಪ್ರತಿಯೊಂದು ಹೆಣ್ಣು ಕೂಡ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಈ ಸಂದರ್ಭಗಳಲ್ಲಿ ಆಗುವ ಮುಟ್ಟಿನ ಹರಿವನ್ನು ತಡೆಯಲು ನಾನಾ ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುವಲ್ ಕಪ್ ಅನ್ನು ಪ್ಯಾಡ್ ಗಳ ಬದಲಾಗಿ ಬಳಸಲಾಗುತ್ತಿದೆ. ಆದರೂ ಕೆಲವರಿಗೆ ಇದು ಒಳ್ಳೆಯದೇ? ಇದನ್ನು ಬಳಸುವುದು ಸುರಕ್ಷಿತವೇ? ಎಂಬಂತಹ ಹಲವಾರು ಪ್ರಶ್ನೆಗಳು ಕಾಡುತ್ತದೆ. ಹಾಗಾದರೆ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ಇದನ್ನು ಮುಟ್ಟಿನ ಸಮಯದಲ್ಲಿ ಬಳಸಬಹುದೇ? ಇಲ್ಲಿದೆ ಮಾಹಿತಿ.

ಮುಟ್ಟಿನ ಕಪ್ ಕಡಿಮೆ ಖರ್ಚಿನಲ್ಲಿ ನಿಮಗೆ ಸಿಗುತ್ತದೆ ಅಲ್ಲದೆ ಅದನ್ನು ಮತ್ತೆ ಮತ್ತೆ ಬಳಸಬಹುದಾಗಿದೆ. ಮರುಬಳಕೆ ಮಾಡಬಹುದಾದ ಹಲವು ಬ್ರಾಂಡ್ ಗಳು ಲಭ್ಯವಿವೆ. ಕೀಪರ್ ಕಮ್, ಮೂನ್ ಕಪ್, ಲುನೆಟ್ ಕಪ್ ಮತ್ತು ಲಿಲಿ ಕಪ್ ಇವೆ. ಇವೆಲ್ಲವೂ ಮರುಬಳಕೆ ಮಾಡಬಹುದಾದ ಕಪ್ ಗಳಾಗಿವೆ. ಇದನ್ನು ಹೊರತುಪಡಿಸಿ ಬಳಸಿ ಬಿಸಾಡಬಹುದಾದ ಮುಟ್ಟಿನ ಕಪ್ಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಮಗೆ ಯಾವ ರೀತಿಯದ್ದು ಬೇಕು ಎಂಬುದನ್ನು ನಿರ್ಧರಿಸಿ ತೆಗೆದುಕೊಳ್ಳಿ.

ಪ್ರಯೋಜನಗಳೇನು?

ಮೆನ್ಸ್ಟ್ರುವಲ್ ಕಪ್ ಅನ್ನು ಒಮ್ಮೆ ಖರೀದಿಸಿದರೆ ಸುಮಾರು 10 ವರ್ಷಗಳವರೆಗೆ ಬಳಸಬಹುದು. ಅಲ್ಲದೆ ಪ್ಯಾಡ್ಗಳು ಅಥವಾ ಟ್ಯಾಂಪೂನ್ ಗಳಿಗಿಂತ ಹೆಚ್ಚಿನ ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಇದು ತುಂಬಾ ಒಳ್ಳೆಯದು ಮತ್ತು ಪರಿಸರ ಸ್ನೇಹಿ. ಹೆಣ್ಣು ಮಕ್ಕಳಲ್ಲಿ, ಯೋನಿಗೆ ಸಂಬಂಧಿಸಿದಂತೆ ದದ್ದು, ತುರಿಕೆ ಉಂಟಾಗುವಂತಹ ಸಮಸ್ಯೆ ಇರುವುದಿಲ್ಲ. 6 ರಿಂದ 12 ಗಂಟೆಗಳ ಕಾಲ ಮುಟ್ಟಿನ ಕಪ್ ಧರಿಸಬಹುದು. ಅಂದರೆ ನೀವು ರಾತ್ರಿಯ ರಕ್ಷಣೆಗಾಗಿ ಒಂದು ಕಪ್ ಬಳಸಬಹುದು. ಹಾಗಾಗಿ ಮಹಿಳೆಯರು ಮೆನ್ಸ್ಟ್ರುವಲ್ ಕಪ್ ಬಳಸುವುದು ತುಂಬಾ ಉತ್ತಮವಾಗಿದೆ.

ಇದನ್ನೂ ಓದಿ: ಬೆನ್ನು ನೋವನ್ನು ಕಡಿಮೆ ಮಾಡಲು ಸರಳ ವ್ಯಾಯಾಮ..!

ಗರ್ಭ ಕೋಶಕ್ಕೆ ಮುಟ್ಟಿನ ಕಪ್ ನಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಇದನ್ನು ಬಳಸುವ ಮೊದಲು ನಿಮ್ಮ ಸ್ತ್ರೀರೋಗತಜ್ಞರೊಂದಿಗೆ ಮಾತನಾಡಿ. ನಂತರ ನೀವು ಯಾವ ಗಾತ್ರದ ಕಪ್ ಬೇಕು ಎಂಬುದನ್ನು ಸರಿಯಾಗಿ ತಿಳಿದು ಬಳಿಕ ಬಳಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ