ಮಹಿಳೆಯರು ತಮ್ಮ ಆರೋಗ್ಯ ಹಾಗೂ ದೇಹದ ಸೌಂದರ್ಯ ಕಾಪಾಡಲು ಫಿಟ್ನೆಸ್(Fitness)ಗೆ ಮಾರುಹೋಗುತ್ತಾರೆ. ಇದು ಇಂದಿನ ದಿನನಗಳಲ್ಲಿ ಸಾಮಾನ್ಯವಾಗಿದ್ದರೂ ಈ ವಿಚಾರದಲ್ಲಿ ಕೆಲವೊಂದು ತಪ್ಪುಗಳನ್ನು(Mistakes) ಮಾಡುತ್ತಾರೆ. ವಿವಿಧ ರೀತಿಯ ಶೇಕ್, ಚಹಾ ಇತ್ಯಾದಿ ಅಲಂಕಾರಿಕ ಆಹಾರಗಳನ್ನು ಸೇವಿಸುತ್ತಾರೆ. ಆದರೆ ಇದು ನೀವು ಬಯಸಿದ ಫಲಿತಾಂಶಗಳನ್ನು ಪಡೆಯುವುದಿಲ್ಲ. ಫಿಟ್‌ನೆಸ್ ಅನ್ವೇಷಣೆಯಲ್ಲಿ ತಪ್ಪುಗಳನ್ನು ಮಾಡುವ ಮಹಿಳೆಯರಿಗೆ ಫಿಟ್ರ್‌ನ ಪ್ರೀಮಿಯಂ ಕೋಚ್ ಅದಿತಿ ಗುಪ್ತಾ ಅವರು ಕೆಲವೊಂದು ಸಹಲೆಗಳನ್ನು ನೀಡಿದ್ದು, ಅವುಗಳು ಈಕೆಳಗಿನಂತಿವೆ:
ಇದನ್ನೂ ಓದಿ: Health Care: ನಿದ್ರೆ ಒಳ್ಳೆಯದು, ಆದರೆ ಅತಿ ಹೆಚ್ಚು ನಿದ್ರೆ ಮಾಡುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು..?
ದೈನಂದಿನ ಸೇವನೆ ಬಗ್ಗೆ ಮೇಲ್ವಿಚಾರಣೆ
ಹೆಚ್ಚಿನ ಮಹಿಳೆಯರು ತಮ್ಮ ದೈನಂದಿನ ಸೇವನೆ ಬಗ್ಗೆ ಮೇಲ್ವಿಚಾರಣೆ ನಡೆಸುವುದಿಲ್ಲ. ಈ ತಪ್ಪನ್ನು ಎಂದಿಗೂ ಮಾಡಬೇಡಿ. ನಿಮ್ಮ ದೇಹಕ್ಕೆ ಪ್ರೋಟೀನ್ ಅಂಶವುಳ್ಳ ಆಹಾರ ಅಗತ್ಯವಾಗಿದ್ದು, ದಿನದ ಪ್ರತಿ ಊಟವು ಪ್ರೋಟೀನ್ ಅಂಶವನ್ನು ಹೊಂದಿದೆಯೇ ಎಂದು ಮೇಲ್ವಿಚಾರಣೆ ಮಾಡಿಕೊಳ್ಳಿ. ಅದಾಗ್ಯೂ ಮಹಿಳೆಯರು ಕನಿಷ್ಟ ಶಿಫಾರಸು ಮಾಡಿದ ದೈನಂದಿನ ಸೇವನೆಗಿಂತ ಹೆಚ್ಚು ಸೇವಿಸುವುದು ಉತ್ತಮ.
ಇದನ್ನೂ ಓದಿ: Health Benefits : ಏಪ್ರಿಕಾಟ್ ಹಣ್ಣಿನಿಂದ ಕಣ್ಣಿನ ಆರೋಗ್ಯ ವೃದ್ಧಿ
ಕಾರ್ಡಿಯೋ ವ್ಯಾಯಾಮ
ಕಾರ್ಡಿಯೋ ವ್ಯಾಯಾಮವು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಚಯಾಪಚಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೀವು ಸೂಕ್ತವಾದ ಫಲಿತಾಂಶಗಳನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ನೀವು ಎರಡೂ ರೀತಿಯ ವ್ಯಾಯಾಮಗಳನ್ನು ಸಂಯೋಜಿಸುವುದು ಅವಶ್ಯಕ. ಅದೇನೆಂದರೆ, ಸ್ನಾಯುಗಳನ್ನು ಬಲಪಡಿಸಬೇಕು ಮತ್ತು ಆ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಇದು ಕೊಬ್ಬನ್ನು ಕರಗಿಸಿಕೊಳ್ಳಲು ಸಹಾಯಕವಾಗಲಿದೆ.
ಸಾಕಷ್ಟು ನಿದ್ರೆ
ಮಹಿಳೆಯರು ಹೆಚ್ಚಿನ ಆದ್ಯತೆಯನ್ನು ತಮ್ಮ ದೈನಂದಿನ ಕೆಲಸ ಮತ್ತು ಉದ್ಯೋಗಕ್ಕೆ ನೀಡುತ್ತಾರೆ. ಆದರೆ ನಿದ್ರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತಾರೆ. ನೀವು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ 7 ಗಂಟೆ ನಿದ್ರೆ ಮಾಡುವುದು ಅತ್ಯಗತ್ಯವಾಗಿರುತ್ತದೆ. ಇದರಿಂದ ದೇಹವು ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ. ಹೀಗಾಗಿ ನೀವು ಉತ್ತಮ ನಿದ್ರೆ ಪಡೆಯುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: Health Tips: ಹಸುವಿನ ಹಾಲು vs ಎಮ್ಮೆಯ ಹಾಲು, ಮಕ್ಕಳಿಗೆ ಯಾವುದು ಬೆಸ್ಟ್?
ಆಹಾರದ ಯೋಜನೆ
ಟ್ರೆಂಡಿಂಗ್ ಅಥವಾ ಫಾಸ್ಟ್ಫುಡ್ ಆಹಾರದ ಯೋಜನೆಯನ್ನು ಅನುಸರಿಸಬೇಡಿ. ಅದಿತಿ ಗುಪ್ತಾ ಸೂಚಿಸುವಂತೆ, ನಿಮ್ಮ ಫಿಟ್‌ನೆಸ್ ದಿನಚರಿಗಳು ಮತ್ತು ಆಹಾರ ಯೋಜನೆಯನ್ನು ತಪ್ಪಾಗಿ ಅನುಸರಿಸುವುದರಿಂದ ನೀವು ಬಯಸಿದ ಫಲಿತಾಂಶಗಳನ್ನು ನೀಡುವುದಿಲ್ಲ. ಹೀಗಾಗಿ ಸರಿಯಾದ ಆಹಾರದ ಯೋಜನೆಯನ್ನು ರೂಪಿಸಿಕೊಳ್ಳಿ.
ಸ್ಥಿರತೆ ಕಾಯ್ದುಕೊಳ್ಳಿ
ಫಿಟ್ನೆಸ್ ಒಂದು ಪ್ರಯಾಣ ಇದ್ದಂತೆ. ಇದನ್ನು ಮುಂದುವರಿಸಲು ಸ್ಥಿರತೆ ಅತೀ ಮುಖ್ಯವಾಗಿದೆ. ಸಾಮಾನ್ಯವಾಗಿ ಫಿಟ್ನೆಸ್ನಿಂದ ನೀವು ಬಯಸಿದ ಫಲಿತಾಂಶಗಳನ್ನು ಪಡೆಯದಿದ್ದಾಗ ಸ್ಥಿರತೆ ಕಳೆದುಕೊಂಡು ಫಿಟ್ನೆಸ್ ಮಾಡುವುದನ್ನು ನಿಲ್ಲಿಸುತ್ತೀರಿ. ಈ ರೀತಿ ಮಾಡಬೇಡಿ. ಕಷ್ಟಪಟ್ಟು ಕೆಲಸ ಮಾಡುವುದು ಉತ್ತಮ ವಿಧಾನವಾಗಿದೆ. ಸ್ಥಿರತೆಯಿಂದ ಮಾತ್ರ ನೀವು ಕನಸು ಕಂಡ ದೇಹವನ್ನು ಪಡೆಯಲು ಸಾಧ್ಯವಾಗುತ್ತದೆ.
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ