Monsoon Diseases: ಮಳೆಗಾಲದಲ್ಲಿ ಕಾಣಿಸಿಕೊಳ್ಳುವಂತಹ ಈ ಕಾಯಿಲೆಗಳ ಬಗ್ಗೆ ಎಚ್ಚರಿಕೆಯಿರಲಿ
Monsoon Diseases:ರಾಜ್ಯದ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಕಾಣಿಸಿಕೊಳ್ಳುತ್ತಿದೆ, ಮುಂದಿನ ಒಂದೆರಡು ವಾರಗಳಲ್ಲಿ ಮುಂಗಾರು ಅಧಿಕೃತವಾಗಿ ಶುರುವಾಗಬಹುದು. ಆದರೆ ಮಳೆಗಾಲವು ಮಳೆಯ ಜತೆಗೆ ರೋಗಗಳನ್ನೂ ಹೊತ್ತು ತರಲಿದೆ.
ರಾಜ್ಯದ ಅಲ್ಲಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ(Rain) ಕಾಣಿಸಿಕೊಳ್ಳುತ್ತಿದೆ, ಮುಂದಿನ ಒಂದೆರಡು ವಾರಗಳಲ್ಲಿ ಮುಂಗಾರು ಅಧಿಕೃತವಾಗಿ ಶುರುವಾಗಬಹುದು. ಆದರೆ ಮಳೆಗಾಲವು ಮಳೆಯ ಜತೆಗೆ ರೋಗಗಳನ್ನೂ ಹೊತ್ತು ತರಲಿದೆ. ಕೆಲವು ರೋಗಗಳು ಸೊಳ್ಳೆಗಳಿಂದ, ಇನ್ನೂ ಕೆಲವು ನೀರು, ಗಾಳಿ, ಆಹಾರಗಳಿಂದ ಬರುವಂಥದ್ದಾಗಿವೆ. ಅವುಗಳಲ್ಲಿ ಡೆಂಗ್ಯೂ, ಮಲೇರಿಯಾ, ಜಾಂಡೀಸ್, ಉಸಿರಾಟದ ಸಮಸ್ಯೆಯೂ ಸೇರಿದೆ.
ಮಳೆಗಾಲದಲ್ಲಿ ನೀರಿನಿಂದ ಹರಡುವ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಒಂದೊಮ್ಮೆ ನೀವು ಸೊಳ್ಳೆ ಕಡಿತದಿಂದ ಬಚಾವಾಗಬೇಕಿದ್ದರೆ, ಉದ್ದ ತೋಳಿನ ಅಂಗಿಗಳು, ಟ್ರೌಸರ್ಸ್ಗಳನ್ನು ಧರಿಸಬೇಕು. ಹೊರಗಡೆಯ ಆಹಾರ, ನೀರನ್ನು ಕುಡಿಯುವ ಮುನ್ನ ಎರಡು ಬಾರಿ ಯೋಚಿಸಿ. ನೀವು ಮಳೆಗಾಲದಲ್ಲಿ ಕಾಡುವ ರೋಗಗಳಿಂದ ದೂರವಿರಬೇಕೆಂದರೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಶುಚಿತ್ವ ಕಾಪಾಡಿಕೊಳ್ಳಬೇಕು, ಮನೆಯಲ್ಲಿ ಸೊಳ್ಳೆ ಬತ್ತಿಯನ್ನು ಬಳಕೆ ಮಾಡಬೇಕು.
ಮಳೆಗಾಲದಲ್ಲಿ ಈ ರೋಗಗಳಿಂದ ದೂರವಿರಿ
ಮಲೇರಿಯಾ: ಮಲೇರಿಯಾವು ಅನಾಫಿಲಿಸ್ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಬರುವ ರೋಗವಾಗಿದೆ. ಮಳೆಗಾಲದಲ್ಲೇ ಈ ರೋಗ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಎಲ್ಲಿ ಹೆಚ್ಚು ಸಮಯಗಳ ಕಾಲ ನೀರು ಸಂಗ್ರಹವಾಗಿರುತ್ತೋ ಅದರಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮಲೇರಿಯಾ ಲಕ್ಷಣಗಳು: ಜ್ವರ, ಮೈಕೈ ನೋವು, ಬೆವರುವುದು, ನೀವುಮಲೇರಿಯಾದಿಂದ ದೂರವಿರಬೇಕೆಂದರೆ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಿ.
ಶೀತ ಮತ್ತು ಜ್ವರ: ಶೀತ ಹಾಗೂ ಜ್ವರು ಸಾಮಾನ್ಯವಾಗಿ ಮಳೆಗಾಲದಲ್ಲಿ ಅಥವಾ ಯಾವುದೇ ಹವಾಮಾನ ಬದಲಾವಣೆಯಾದ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ನೀವು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ, ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ.
ಡೆಂಗ್ಯೂ: ಮುಂಗಾರಿನ ಸಂದರ್ಭದಲ್ಲಿ ಸೊಳ್ಳೆಗಳ ಸಂಖ್ಯೆಯೂ ಅಧಿಕವಾಗುತ್ತದೆ. ಏಡಿಸ್ ಈಜಿಪ್ಟಿ ಸೊಳ್ಳೆಯ ಮೂಲಕ ಡೆಂಗ್ಯೂ ಹರಡುತ್ತದೆ. ಇದರಿಂದ ಜ್ವರ, ತಲೆನೋವು, ಮೈಕೈ ನೋವು, ತುರಿಕೆ ಉಂಟಾಗುತ್ತದೆ.
ಚಿಕನ್ಗುನ್ಯಾ: ಚಿಕನ್ಗುನ್ಯಾ ಕೂಡ ಸೊಳ್ಳೆಯ ಮೂಲಕವೇ ಬರುವ ಕಾಯಿಲೆಯಾಗಿದೆ. ಏಡಿಸ್ ಆಲ್ಬೋಪಿಕ್ಟಸ್ ಸೊಳ್ಳೆಯಿಂದ ಬರುವಂಥದ್ದಾಗಿದೆ. ಸಂಧಿ ನೋವು, ಚಳಿ, ಜ್ವರ ಕಾಣಿಸಿಕೊಳ್ಳಲಿದೆ. ಪಾಟ್, ಟೈರ್, ಟ್ಯಾಂಕ್ಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ.
ಕಾಲೆರಾ: ಕಾಲೆರಾ ರೋಗವು ನೀರಿನ ಮೂಲಕ ಬರುವ ರೋಗವಾಗಿದೆ. ವಿಬ್ರಿಯೋ ಕಾಲೆರಾ ಎಂಬ ಬ್ಯಾಕ್ಟೀರಿಯಾದ ಮೂಲಕ ಹರಡುತ್ತದೆ. ಕಾಲೆರಾ ಬಂದರೆ ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ. ಡೀಸೆಂಟ್ರಿ ಆಗುವ ಸಾಧ್ಯತೆ ಇರುತ್ತದೆ. ನೀರನ್ನು ಕುದಿಸಿ ಕುಡಿಯಿರಿ.
ಟೈಫಾಯಿಡ್: ಟೈಫಾಯಿಡ್ ಕೂಡ ನೀರಿನಿಂದ ಬರುವ ಕಾಯಿಲೆಯಾಗಿದೆ. ಇದನ್ನು ತಡೆಗಟ್ಟಲು ಶುಚಿತ್ವವನ್ನು ಕಾಪಾಡಿಕೊಳ್ಳುವುದು ಒಳಿತು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ