ಪ್ರಾಣಘಾತಕ ಹೃದಯಾಘಾತ ದಿಢೀರ್ ಬರುವುದಲ್ಲ, ಎಚ್ಚರವಿರಲಿ! ಹಾಗಾದರೆ ಏನು ಮಾಡಬೇಕು ಎಂಬುದರ ವಿವರಣೆ ಇಲ್ಲಿದೆ

ಉತ್ತಮ ಆಹಾರ ಕ್ರಮ ಅನುಸರಿಸಿ, ಸದಾ ಚಟುವಟಿಕೆಯಿಂದ ಇರಿ, ಸರಳ ಜೀವನ ನಡೆಸಿ ಅದೇ ಬದುಕು. ನಿಮ್ಮ ಕುಟುಂಬ ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಹೆಂಡತಿ ಮಕ್ಕಳು, ನಿಮ್ಮ ಕುಟುಂಬವನ್ನು ನಡುನೀರಿನಲ್ಲಿ ಕೈ ಬಿಡಬೇಡಿ, ಅವರಿಗಾಗಿ ಬಾಳಿ ಬದುಕಬೇಕು. ಹಾಗಾಗಿ ನಿಮ್ಮ ಜೀವ ಅತ್ಯಮೂಲ್ಯ ಎಂಬುದನ್ನ ಮರೆಯಬೇಡಿ.

ಪ್ರಾಣಘಾತಕ ಹೃದಯಾಘಾತ ದಿಢೀರ್ ಬರುವುದಲ್ಲ, ಎಚ್ಚರವಿರಲಿ! ಹಾಗಾದರೆ ಏನು ಮಾಡಬೇಕು ಎಂಬುದರ ವಿವರಣೆ ಇಲ್ಲಿದೆ
ಎಲ್ಲರೂ ತಿಳಿದಿರುವಂತೆ ಪ್ರಾಣಘಾತಕ ಹೃದಯಘಾತ ದಿಢೀರ್ ಎಂದು ಬರುವುದಲ್ಲ, ಎಚ್ಚರವಿರಲಿ! ಹಾಗಾದರೆ ಏನು ಮಾಡಬೇಕು ಎಂಬುದರ ವಿವರಣೆ ಇಲ್ಲಿದೆ
TV9kannada Web Team

| Edited By: sadhu srinath

Jun 12, 2022 | 6:06 AM

ಎಲ್ಲರೂ ತಿಳಿದಿರುವಂತೆ ಪ್ರಾಣಘಾತಕ ಹೃದಯಾಘಾತ ದಿಢೀರ್ ಎಂದು ಬರುವುದಲ್ಲ! ಹೃದಯಾಘಾತಕ್ಕೆ ತುತ್ತಾಗುವ ಯಾವುದೇ ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ (Heart attack golden hour). ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು. ಎಷ್ಟೋ ಜನಕ್ಕೆ ಇದು ಹೃದಯಾಘಾತದ ಲಕ್ಷಣವಾಗಿ ಪರಿಣಮಿಸಿ ಬಿಡುತ್ತದೆ, ಆದರೆ ಮುನ್ಸೂಚನೆ (Heart attack symptoms) ಎಂಬುದು ಅರಿವೆಗೆ ಬರುವುದಿಲ್ಲ. ಇನ್ನೂ ಅಪಾಯಕಾರಿ ಮನೋಭೂಮಿಕೆಯೆಂದರೆ ಅದನ್ನು ಬೇರೆಯವರಿಗಾಗಲಿ, ಮನೆಯವರಿಗಾಗಲಿ ಹೇಳುವುದಿಲ್ಲ. ಗುಪ್ತವಾಗಿ ಆ ಅಪಾಯಕಾರಿಯನ್ನು ಸುಪ್ತಾವಸ್ಥೆಯಲ್ಲಿಟ್ಟು ಬಿಡುತ್ತಾರೆ. (health)

ಎಂತೆಂತಹ ಸೂಚನೆಗಳು ಅವು? ವಿಪರೀತ ಬೆವರುವುದು, ಸುಸ್ತಾಗುವುದು, ಯಾವುದಾದರು ರಟ್ಟೆ ವಿಪರೀತ ನೋಯುವುದು, ಎದೆ ಕಿವುಚಿದಂತೆ ಆಗುವುದು… ಹೀಗೆಲ್ಲಾ ಆದ್ರೆ ಖಂಡಿತಾ ನಿರ್ಲಕ್ಷಿಸಬಾರದು. ಇಂಥ ಲಕ್ಷಣಗಳು ಹೆಚ್ಚಾಗಿ ನಡಿಗೆ ಮಾಡುವಾಗಲೂ, ಮೆಟ್ಟಿಲು ಹತ್ತುವಾಗಲೂ ಕಾಣಿಸುತ್ತವೆ, ತಕ್ಷಣ ಆಸ್ಪತ್ರೆಯನ್ನು ಸೇರುವುದೊಂದೇ ಮಾರ್ಗ.

ಗೊಲ್ಡನ್ ಹವರ್ – ಹೃದಯಾಘಾತವಾದ ಮೊದಲ ಅರ್ಧ ಗಂಟೆ ಅತ್ಯಮೂಲ್ಯವಾಗಿದ್ದು, ಆ ಸಮಯವನ್ನು ವ್ಯರ್ಥ ಮಾಡಬಾರದು. – 40 ವರ್ಷದ ನಂತರ ಪ್ರತಿಯೊಬ್ಬರೂ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. – ವಯಸ್ಸಾದವರು, ಈಗಾಗಲೇ ಏನಾದರೊಂದು ನಿತ್ಯ ಚಿಕಿತ್ಸೆಯಲ್ಲಿ ಇರುವವರು ಹೊರಗೆ ಹೋಗುವಾಗ ಯಾವಾಗಲೂ ಸಾಕಷ್ಟು ಹಣ, ಜಾರ್ಜ್ ಮಾಡಿದ ಮೊಬೈಲ್, ಎಟಿಎಂ ಕಾರ್ಡ್, ಐಡಿ ಕಾರ್ಡ್ ಮತ್ತು ನೀರಿನ ಬಾಟಲಿಯನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವುದು ಶ್ರೇಯಸ್ಕರ. ಹಾಗಂತ ಸಾವಿಗೆ ಭಯಪಟ್ಟುಕೊಂಡು ಇರಬಾರದು, ಆದರೆ ಸಾವು ಹತ್ತಿರ ಸುಳಿಯದಂತೆ ಎಚ್ಚರವಹಿಸಬೇಕು.

ಯೋಗ ಮಾಡುವುದರಿಂದ, ನಿತ್ಯ ನಡಿಗೆ ಮಾಡುವುದರಿಂದ, ಮಾಂಸಾಹಾರ, ಮೊಟ್ಟೆ ತಿನ್ನದೆ ಶುದ್ಧ ಶಾಖಾಹಾರಿ ಯಾಗಿರುವುದರಿಂದ, ಬೊಜ್ಜು ದಪ್ಪ ಇಲ್ಲದೆ ಇರುವುದರಿಂದ, ತೆಳ್ಳಗೆ ಇರುವುದರಿಂದ, ಚಿಕ್ಕ ವಯಸ್ಸು ಇರುವುದರಿಂದ ಹೃದಯಾಘಾತ ಆಗುವುದಿಲ್ಲ ಎಂಬುದು ಶುದ್ಧ ತಪ್ಪು ತಿಳಿವಳಿಕೆ. ಅನುವಂಶಿಕ ಕಾರಣಗಳು ಜೊತೆಗೆ ಇತರೆ ಅನೇಕ ಕಾರಣಗಳು ಇರುತ್ತವೆ ಎಂಬುದನ್ನು ಅರಿಯಿರಿ.

ಪ್ರತಿಯೊಬ್ಬರಿಗೂ ಹೃದಯದಲ್ಲಿ ರಕ್ತದ ಹೆಪ್ಪು (ಕ್ಲಾಟ್) ಸ್ವಲ್ಪವಾದರೂ ಇದ್ದೇ ಇರುತ್ತದೆ. ನಿಧಾನವಾಗಿ ಹೆಚ್ಚಾಗುತ್ತಿರುತ್ತದೆ. ನಡಿಗೆ, ವ್ಯಾಯಾಮ, ಸದಾ ಚಟುವಟಿಕೆ, ಸರಿಯಾದ ಆಹಾರ ಕ್ರಮ, ಸರಳ ಜೀವನ ಇಲ್ಲವಾದಲ್ಲಿ ಬೇಗ ಹೆಪ್ಪುಗಟ್ಟುವುದು (ಕ್ಲಾಟ್) ಹೆಚ್ಚಾಗುತ್ತಿರುತ್ತದೆ, ಆದರೆ ಮೇಲಿನ ಕಾರ್ಯ ಚಟುವಟಿಕೆಗಳನ್ನು ಪಾಲಿಸಿದರೆ ನಿಯಂತ್ರಣದಲ್ಲಿರುತ್ತದೆ.

ಈ ಹೃದಯದ ಖಾಯಿಲೆ ಇ.ಸಿ.ಜಿ ಮಾಡಿದಾಗ ಗೊತ್ತಾಗುತ್ತದೆ. ಆಶ್ಚರ್ಯವೆಂದರೆ ಎಷ್ಟೋ ಜನಕ್ಕೆ ಇ.ಸಿ.ಜಿ ಮತ್ತು ಎಕೋಗ್ರಾಮ್ ಮಾಡಿದಾಗ ಹೃದಯದ ಖಾಯಿಲೆ ತಿಳಿಯುವುದಿಲ್ಲ. ಆದರೆ ಟಿ.ಎಂ.ಟಿ ಪರೀಕ್ಷೆ ಮಾಡಿದಾಗ ಖಂಡಿತ ಸ್ವಲ್ಲ ಪ್ರಮಾಣವಾದರು ಪತ್ತೆ ಹಚ್ಚುತ್ತಾರೆ.

ಆಗ ಅಂಜಿಯೋಗ್ರಾಮ್ ಮಾಡಿಸಬೇಕಾಗುತ್ತದೆ. ಅಂಜಿಯೋಗ್ರಾಮ್ ಪರೀಕ್ಷೆಯಲ್ಲಿ ಅತ್ಯಂತ ನಿಖರವಾಗಿ ಸ್ಪಷ್ಟವಾಗಿ ಕ್ಲಾಟ್ ಪ್ರಮಾಣ ಗೊತ್ತಾಗುತ್ತದೆ. ಕ್ಲಾಟ್‌ಗಳು ಒಂದಕ್ಕಿಂತ ಹೆಚ್ಚು ಮೇಲ್ಪಟ್ಟು ಕೂಡ ಪತ್ತೆಯಾಗುವುದು. ನಂತರ ಸೂಕ್ತ ಚಿಕೆತ್ಸೆ ಪಡೆದುಕೊಂಡು ಆರಾಮವಾಗಿ, ಆರೋಗ್ಯವಾಗಿರಬಹುದು. ಏನೂ ಹೆದರುವ ಅವಶ್ಯಕತೆ ಇಲ್ಲ. ಸದಾ ಚಟುವಟಿಕೆಯಿಂದ ಇದ್ದರೆ ತಾನು ಹೃದ್ರೋಗಿ ಎಂದು ಅನಿಸುವುದೇ ಇಲ್ಲ, ಎಲ್ಲರಂತೆ ಸುಖ ಜೀವನ ನಡೆಸಬಹುದು.

ಬೇರೆ ಎಲ್ಲ ಖಾಯಿಲೆಗಳಿಗೆ ಚಿಕಿತ್ಸೆ ಹೊಂದಲು ಸಮಯವಿರುತ್ತದೆ. ಆದರೆ.. ಹೃದಯ ಖಾಯಿಲೆ ಹಾಗಲ್ಲ, ಕೆಲವೊಮ್ಮೆ ಒಂದೇ ಒಂದು ನಿಮಿಷ ಕೂಡ ಸಮಯ ನೀಡುವುದಿಲ್ಲ, ತಕ್ಷಣ ಸಾವಿಗೆ ನೂಕಿ ಬಿಡುತ್ತದೆ.

ವೈದ್ಯರು ಹೇಳುವುದು ಒಂದೇ… ಉತ್ತಮ ಆಹಾರ ಕ್ರಮ ಅನುಸರಿಸಿ, ಸದಾ ಚಟುವಟಿಕೆಯಿಂದ ಇರಿ, ಸರಳ ಜೀವನ ನಡೆಸಿ ಅದೇ ಬದುಕು. ನಿಮ್ಮ ಕುಟುಂಬ ಹಾಗೂ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ. ಹೆಂಡತಿ ಮಕ್ಕಳು, ನಿಮ್ಮ ಕುಟುಂಬವನ್ನು ನಡುನೀರಿನಲ್ಲಿ ಕೈ ಬಿಡಬೇಡಿ, ಅವರಿಗಾಗಿ ಬಾಳಿ ಬದುಕಬೇಕು. ಹಾಗಾಗಿ ನಿಮ್ಮ ಜೀವ ಅತ್ಯಮೂಲ್ಯ ಎಂಬುದನ್ನ ಮರೆಯಬೇಡಿ. (ವಾಟ್ಸಪ್ ಸಂಗ್ರಹ)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada