Ramsay Hunt Syndrome: ರಾಮ್​ಸೇ ಹಂಟ್ ಸಿಂಡ್ರೋಮ್ ಎಂದರೇನು?, ಲಕ್ಷಣಗಳು ಹೇಗಿರುತ್ತೆ, ಚಿಕಿತ್ಸೆಗಳೇನು?

ಪಾಪ್​ಸ್ಟಾರ್ ಜಸ್ಟಿನ್ ಬೀಬರ್​ ರಾಮ್​ಸೇ ಹಂಟ್ ಸಿಂಡ್ರೋಮ್​ನಿಂದ ಬಳಲುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಕಾಯಿಲೆಯಿಂದಾಗಿ ಮುಖವು ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದೆ.

Ramsay Hunt Syndrome: ರಾಮ್​ಸೇ ಹಂಟ್ ಸಿಂಡ್ರೋಮ್ ಎಂದರೇನು?, ಲಕ್ಷಣಗಳು ಹೇಗಿರುತ್ತೆ, ಚಿಕಿತ್ಸೆಗಳೇನು?
Justin
Follow us
TV9 Web
| Updated By: ನಯನಾ ರಾಜೀವ್

Updated on:Jun 11, 2022 | 10:41 AM

ಪಾಪ್​ಸ್ಟಾರ್ ಜಸ್ಟಿನ್ ಬೀಬರ್​ ರಾಮ್​ಸೇ ಹಂಟ್ ಸಿಂಡ್ರೋಮ್​ನಿಂದ ಬಳಲುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಕಾಯಿಲೆಯಿಂದಾಗಿ ಮುಖವು ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದೆ. 21 ವರ್ಷದ ಜಸ್ಟಿನ್ ವಿಡಿಯೋವೊಂದನ್ನು ಜೂನ್ 11ರಂದು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಡಯಾಗ್ನಿಸಿಸ್​ಗೆ ತೆರಳುವ ಅಗತ್ಯವಿರುವ ಕಾರಣ ಶೋ ರದ್ದಾಗಿದೆ ಎಂದು ಎಂದು ಬರೆದುಕೊಂಡಿದ್ದಾರೆ. ‘ಶೋ ರದ್ದಾಗಿರುವ ಕಾರಣ ಸಾಕಷ್ಟು ಮಂದಿಯಲ್ಲಿ ಬೇಸರ ಮೂಡಿದೆ ಎಂದು ತಿಳಿದಿದೆ.

ಆದರೆ ಶೋ ನಡೆಸುವಷ್ಟು ಶಕ್ತಿ ನನ್ನಲ್ಲಿಲ್ಲ, ಮುಖವು ಪಾರ್ಶ್ವವಾಯುವಿಗೆ ತುತ್ತಾಗಿರುವ ಕಾರಣ ಶೋ ನಡೆಸಲು ಸಾಧ್ಯವಿಲ್ಲ’ ಎಂದಿದ್ದಾರೆ. ಇದರ ನಂತರ ಅವರು ಸಹಜ ಸ್ಥಿತಿಗೆ ಮರಳಲು ಏನು ಮಾಡಬೇಕೋ ಅದೇ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಮುಖದ ವ್ಯಾಯಾಮದ ಜೊತೆಗೆ, ಅವರು ವಿಶ್ರಾಂತಿ ಪಡೆಯಲಿದ್ದಾರೆ.

ನಿಮ್ಮ ಮಾಹಿತಿಗಾಗಿ, ಜಸ್ಟಿನ್ ಬೀಬರ್ ಇತ್ತೀಚೆಗೆ ತಮ್ಮ ಆಲ್ಬಂನ ಪ್ರಚಾರಕ್ಕಾಗಿ ಅನೇಕ ದೇಶಗಳಿಗೆ ಪ್ರಯಾಣಿಸಲಿದ್ದೇನೆ ಎಂದು ಪ್ರಪಂಚದಾದ್ಯಂತ ಇರುವ ಅವರ ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದರು. ಈ ಸುದ್ದಿ ತಿಳಿದ ಬಳಿಕ ಅಭಿಮಾನಿಗಳು ಕೂಡ ತುಂಬಾ ಉತ್ಸುಕರಾಗಿದ್ದರು. ಆದರೆ ಜಸ್ಟಿನ್ ಇದೀಗ ಈ ರೋಗಕ್ಕೆ ತುತ್ತಾಗಿರುವುದರಿಂದ ಅಭಿಮಾನಿಗಳು ಕೂಡ ದುಃಖದಲ್ಲಿದ್ದಾರೆ.

ಇದು ಅಪರೂಪದ ನರ ಸಮಸ್ಯೆಯಾಗಿದೆ, ವರಿಸೆಲ್ಲಾ ಜೋಸ್ಟರ್​ ವೈರಸ್​ನಿಂದ ಈ ಕಾಯಿಲೆ ಬರಲಿದೆ. ಇದೇ ವೈರಸ್ ಹರ್ಪಸ್ ಜೋಸ್ಟರ್ ಹಾಗೂ ಚಿಕನ್​ಪಾಕ್ಸ್​ಗೆ ಕಾರಣವಾಗಲಿದೆ. ನ್ಯಾಷನಲ್ ಆರ್ಗನೈಸೇಷನ್ ಫಾರ್ ರೇರ್ ಡಿಸಾರ್ಡರ್ಸ್​ ನೀಡಿರುವ ಮಾಹಿತಿ ಪ್ರಕಾರ, ವೈರಸ್ ರಿಯಾಕ್ಟ್​ ಮಾಡಿದಾಗ ಮುಖದಲ್ಲಿರುವ ನರಗಳ ದೌರ್ಬಲ್ಯಕ್ಕೆ ಕಾರಣವಾಗುತ್ತದೆ.

ರಾಮ್​ಸೇ ಕಾಯಿಲೆ ಲಕ್ಷಣಗಳೇನು? ಪಾರ್ಶ್ವವಾಯು, ಮುಖದ ಒಂದು ಭಾಗದಲ್ಲಿ ನರದ ದೌರ್ಬಲ್ಯ, ಆಹಾರ ಸೇವಿಸಲು ಸಮಸ್ಯೆ, ಕಣ್ಣುಗಳನ್ನು ಮುಚ್ಚುವುದಕ್ಕೂ ಸಮಸ್ಯೆಯುಂಟಾಗುವುದು. ಕಿವಿಯಲ್ಲಿ ತುರಿಕೆ ಗಾಯ, ನೋವು, ನಾಲಿಗೆಯಲ್ಲಿ ರುಚಿ ಇಲ್ಲದಿರುವುದು, ಕಣ್ಣು ಒಣಗುವಿಕೆ.

ಚಿಕಿತ್ಸೆ ಹೇಗೆ? ರಕ್ತದ ಪರೀಕ್ಷೆ ಮಾಡಬೇಕು, ತಲೆಯ ಎಂಆರ್​ಐ ಮಾಡಬೇಕು, ಚರ್ಮದ ಪರೀಕ್ಷೆ ಮಾಡಬೇಕು, ಸೆರೆಬ್ರೋಸ್ಪೈನಲ್ ಫ್ಲೂಯೆಡ್​ ಅನ್ನು ಪರೀಕ್ಷೆಗೆ ಕಳುಹಿಸಬೇಕು. ಇನ್​ಫ್ಲಾಮೇಟರಿ ಆಂಟಿವೈರಲ್ ಔಷಧಗಳನ್ನು ನೀಡಲಾಗುತ್ತದೆ, ಕಣ್ಣಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:40 am, Sat, 11 June 22

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ