Breast Cancer: ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆಯಾದರೆ ರೇಡಿಯೋಥೆರಪಿ ಅಗತ್ಯವಿಲ್ಲ
ಸ್ತನ ಕ್ಯಾನ್ಸರ್( Breast Cancer) ಅನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡಿದರೆ ಶಸ್ತ್ರಚಿಕಿತ್ಸೆ ಬಳಿಕ ರೇಡಿಯೋಥೆರಪಿಯ ಅಗತ್ಯವಿರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೌದು ಮ್ಯಾಕ್ಮಾಸ್ಟರ್ ಯೂನಿವರ್ಸಿಟಿಯ ವರದಿ ಪ್ರಕಾರ ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿದರೆ ರೇಡಿಯೋ ಥೆರಪಿ ಇಲ್ಲದೆ ಗುಣಪಡಿಸಬಹುದು ಎಂದು ಹೇಳಲಾಗಿದೆ
ಸ್ತನ ಕ್ಯಾನ್ಸರ್( Breast Cancer) ಅನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡಿದರೆ ಶಸ್ತ್ರಚಿಕಿತ್ಸೆ ಬಳಿಕ ರೇಡಿಯೋಥೆರಪಿಯ ಅಗತ್ಯವಿರುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಹೌದು ಮ್ಯಾಕ್ಮಾಸ್ಟರ್ ಯೂನಿವರ್ಸಿಟಿಯ ವರದಿ ಪ್ರಕಾರ ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿದರೆ ರೇಡಿಯೋ ಥೆರಪಿ ಇಲ್ಲದೆ ಗುಣಪಡಿಸಬಹುದು ಎಂದು ಹೇಳಲಾಗಿದೆ. ಅವರ ತಂಡವು ಓಂಟಾರಿಯೋ ಕ್ಲಿನಿಕಲ್ ಆಂಕೊಲಜಿ ಗ್ರೂಪ್ ಜತೆ ಕೆಲಸ ಮಾಡುತ್ತಿದ್ದು, 501 ಕ್ಯಾನ್ಸರ್ ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿತ್ತು.
ಸಾಮಾನ್ಯವಾಗಿ ಕ್ಯಾನ್ಸರ್ ಪತ್ತೆಯಾದ ಬಳಿಕ ಐದು ವಾರಗಳವರೆಗೆ ರೇಡಿಯೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಾರೆ. ಆದರೆ ರೇಡಿಯೋ ಥೆರಪಿಯಿಂದ ಸಾಕಷ್ಟು ಅಡ್ಡಪರಿಣಾಮಗಳಿವೆ. ಕೂದಲು ಉದುರುವಿಕೆ, ಮೈ ಕೈ ತುರಿಕೆ ಸೇರಿದಂತೆ ಹಲವು ಸಮಸ್ಯೆಗಳಿವೆ.
ಎಲ್ಲಾ ಕ್ಯಾನ್ಸರ್ಗಳೂ ಒಂದೇ ಮಾದರಿಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ, ಬೆಂಗಳೂರಿನಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಹಿಳೆಯರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿ 1 ಲಕ್ಷ ಮಹಿಳೆಯರಲ್ಲಿ 41 ಮಂದಿಯಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಅಲ್ಲದೆ, ಬೆಂಗಳೂರಿನಲ್ಲಿ ಪ್ರತಿ 1 ಲಕ್ಷ ಮಂದಿಯಲ್ಲಿ 126 ಜನರಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿವೆ.
ಬೆಂಗಳೂರಿನಲ್ಲಿ ಪ್ರತಿ ವರ್ಷ 1,600 ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾಗುತ್ತಿದ್ದು, ಸದ್ಯ ಐದು ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ತನ ಕ್ಯಾನ್ಸರ್ ಲಕ್ಷಣಗಳು
ಸ್ತನದ ಮೇಲಿನ ಚರ್ಮ ಕೆಂಪಾಗುವಿಕೆ, ಕಂಕುಳು ಭಾಗದಲ್ಲಿ ಗಂಟು ಕಾಣಿಸಿಕೊಳ್ಳುವುದು. ಸ್ತನದಲ್ಲಿ ಗಂಟು, ಸ್ತನ ಗಾತ್ರ ಜಾಸ್ತಿಯಾಗುವುದು, ತೊಟ್ಟಿನಲ್ಲಿ ಹುಣ್ಣು ಕಾಣಿಸಿಕೊಳ್ಳುವುದು, ಸ್ತನದ ತೊಟ್ಟಿನಲ್ಲಿ ದ್ರವದಂತಹ ವಸ್ತು ಅಥವಾ ರಕ್ತ ಸ್ರಾವ ಕಂಡು ಬರುವುದು.
ಸ್ತನ ಕ್ಯಾನ್ಸರ್‌ಗೆ ಕಾರಣ -ಮದುವೆ ವಿಳಂಬ -ತಡವಾಗಿ ಮಕ್ಕಳಾಗುವುದು (30 ವರ್ಷದ ನಂತರ) -ಚಿಕ್ಕವಯಸ್ಸಿನಲ್ಲಿಯೇ ಋುತುಮತಿ ಹಾಗೂ ತಡವಾಗಿ ಮುಟ್ಟು ನಿಲ್ಲುವುದು -ಋುತು ಚಕ್ರದಲ್ಲಿ ದೀರ್ಘಾವಧಿ ವ್ಯತ್ಯಯ -ಮಕ್ಕಳಿಗೆ ಸ್ತನ್ಯಪಾನ ಮಾಡಿಸಲು ಹಿಂಜರಿಕೆ -ವಂಶವಾಹಿ -ಒತ್ತಡದ ಜೀವನ ಶೈಲಿ -ಮದ್ಯ ಹಾಗೂ ಧೂಮಪಾನ -ಬೊಜ್ಜು
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ