Gastritis: ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ ಈ ಸಮಸ್ಯೆ ಕಾಡಬಹುದು
ಬೆಳಗ್ಗೆ ತಿಂಡಿಯನ್ನು ತಿಂದ ಬಳಿಕ ಹೊಟ್ಟೆಯಲ್ಲಿ ನೋವಿನ ಅನುಭವವಾಗುತ್ತಿದೆಯೇ?, ನೀವು ಯಾವುದೇ ಖಾರದ ಪದಾರ್ಥ ತಿನ್ನದಿದ್ದರೂ ನೋವಿನ ಅನುಭವ ಆಗುತ್ತಿದೆಯೇ ಹಾಗಾದರೆ ನಿಮಗೆ ಗ್ಯಾಸ್ಟ್ರೈಟಿಸ್ ಅಗಿದೆ ಎಂದರ್ಥ.
ಬೆಳಗ್ಗೆ ತಿಂಡಿಯನ್ನು ತಿಂದ ಬಳಿಕ ಹೊಟ್ಟೆಯಲ್ಲಿ ನೋವಿನ ಅನುಭವವಾಗುತ್ತಿದೆಯೇ?, ನೀವು ಯಾವುದೇ ಖಾರದ ಪದಾರ್ಥ ತಿನ್ನದಿದ್ದರೂ ನೋವಿನ ಅನುಭವ ಆಗುತ್ತಿದೆಯೇ ಹಾಗಾದರೆ ನಿಮಗೆ ಗ್ಯಾಸ್ಟ್ರೈಟಿಸ್ ಅಗಿದೆ ಎಂದರ್ಥ. ಫಾಸ್ಟ್ಫುಡ್ ಆಹಾರ ಪದ್ಧತಿಯಿಂದಾಗಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಅಂತೆಯೇ ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವುದರಿಂದ ಗ್ಯಾಸ್ಟ್ರೈಟಿಸ್ನಂತಹ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಗ್ಯಾಸ್ಟ್ರೈಟಿಸ್ನಿಂದ ಹೊಟ್ಟೆಯ ಒಳಪದರದಲ್ಲಿ ನೋವುಂಟಾಗುತ್ತದೆ. ಈ ಸಮಸ್ಯೆಗೆ ಹೆಲಿಕೋಬ್ಯಾಕ್ಟರ್ ಪಿಲೋರಿ ಎಂಬ ಬ್ಯಾಕ್ಟೀರಿಯಾ ಕಾರಣ. ಗ್ಯಾಸ್ಟ್ರೈಟಿಸ್ ಸಮಸ್ಯೆಯು 2 ರಿಂದ 10 ದಿನಗಳವರೆಗೆ ಇರಬಲ್ಲದು.
ಹೊರಗಡೆ ಏನಾದರೂ ತಿಂದಾಗ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡರೆ, ಆ ಸಮಯದಲ್ಲಿ ನೀವು ಮನೆಯಿಂದ ದೂರವಿದ್ದರೆ, ತೊಂದರೆಯು ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮ ಸುತ್ತಲಿನ ಯಾವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ನಿಮಗೆ ಅರ್ಥವಾಗುವುದಿಲ್ಲ.
ಶುಂಠಿ ಅಥವಾ ಪೆಪ್ಪರ್ ಮಿಂಟ್ ಚಹಾ ನಿಮಗೆ ಪ್ರಯೋಜನಕಾರಿ ಇದು ಗ್ಯಾಸ್ ಮತ್ತು ನೋವು ಎರಡನ್ನೂ ನಿವಾರಿಸುತ್ತದೆ. ಒಂದು ಗ್ಲಾಸ್ ನೀರಿಗೆ ಶುಂಠಿಯನ್ನು ಜಜ್ಜಿ ಹಾಕಿ.
ಅದಕ್ಕೆ ಪುದಿನ ಎಲೆಗಳನ್ನು ಗುದ್ದಿ ಹಾಕಬೇಕು. ಇದು ಚೆನ್ನಾಗಿ ಕುದಿ ಬಂದ ಬಳಿಕ ಇಳಿಸಿ, ಸೋಸಿ ಸೇವಿಸಿ. ಗ್ಯಾಸ್ನಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ನೋವು ಕಾಣಿಸಿಕೊಂಡರೆ ಆಗ ನೀವು ಬಿಸಿ ನೀರನ್ನು ಬಾಟಲಿಯಲ್ಲಿ ತುಂಬಿ ಹೊಟ್ಟೆಯ ಮೇಲೆ ಸ್ವಲ್ಪ ಸಮಯ ಇಡಬಹುದು. ಇದರಿಂದ ತುಂಬಾ ಅನುಕೂಲಗಳಿವೆ ಇದು ಆರಾಮದಾಯಕ ಅನುಭವ ನೀಡುತ್ತದೆ. ಹೊರಗಡೆ ನೀವು ಒಬ್ಬರೇ ಇದ್ದ ಸಂದರ್ಭದಲ್ಲಿ ಈ ಟ್ರಿಕ್ಸ್ ನಿಮ್ಮ ನೆರವಿಗೆ ಬರುತ್ತದೆ.
ಗ್ಯಾಸ್ಟ್ರೈಟಿಸ್ನಲ್ಲಿ ಎರಡು ವಿಧಗಳಿವೆ ಎರೋಸಿವ್ ಗ್ಯಾಸ್ಟ್ರೈಟಿಸ್: ಎರೋಸಿವ್ ಗ್ಯಾಸ್ಟ್ರೈಟಿಸ್ನಿಂದ ಹೊಟ್ಟೆಯ ಒಳಪದರದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಉಬ್ಬಸದ ಅನುಭವವಾಗುತ್ತದೆ, ಅದಕ್ಕೆ ರಿಯಾಕ್ಟೀವ್ ಗ್ಯಾಸ್ಟ್ರೈಟಿಸ್ ಎಂದು ಕರೆಯುತ್ತಾರೆ. ನಾನ್ ಎರೋಸಿವ್ ಗ್ಯಾಸ್ಟ್ರೈಟಿಸ್: ಆದರೆ ಇದರಲ್ಲಿ ಹೊಟ್ಟೆ ಉಬ್ಬಿದಂತಹ ಅನುಭವ, ಇರುವುದಿಲ್ಲ ಆದರೆ ನೋವಿರುತ್ತದೆ.
ಗ್ಯಾಸ್ಟ್ರೈಟಿಸ್ಗೆ ಕಾರಣಗಳೇನು? ಮದ್ಯಪಾನ: ಹೆಚ್ಚಿನ ಪ್ರಮಾಣದಲ್ಲಿ ಮದ್ಯಸೇವನೆಯಿಂದಾಗಿ ಹೊಟ್ಟೆಯಲ್ಲಿ ಹುಣ್ಣಾದ ಅನುಭವವಾಗುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ.
ನೋವು ನಿವಾರಕ ಮಾತ್ರೆಗಳು: ನೋವು ನಿವಾರಕ ಮಾತ್ರೆಗಳು ಅಕ್ಯೂಟ್ ಗ್ಯಾಸ್ಟ್ರೈಟಿಸ್ ಹಾಗೂ ಕ್ರೋನಿಕ್ ಗ್ಯಾಸ್ಟ್ರೈಟಿಸ್ ಅನ್ನು ಉಂಟು ಮಾಡುತ್ತದೆ. ಬ್ಯಾಕ್ಟೀರಿಯಲ್ ಇನ್ಫೆಕ್ಷನ್: ಯಾವುದೇ ರೀತಿಯ ಬ್ಯಾಕ್ಟೀರಿಯಾದ ಇನ್ಫೆಕ್ಷನ್ನಿಂದಾಗಿ ಗ್ಯಾಸ್ಟ್ರೈಟಿಸ್ ಸಮಸ್ಯೆ ಹೆಚ್ಚಾಗಲಿದೆ. ಹೆಲಿಕೋಬ್ಯಾಕ್ಟರ್ ಪೈಲೋರಿ ಬ್ಯಾಕ್ಟೀರಿಯಾವು ಗ್ಯಾಸ್ಟ್ರೋಇಂಟೆಸ್ಟಿನಲ್ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಗ್ಯಾಸ್ಟ್ರೈಟಿಸ್ ಲಕ್ಷಣಗಳೇನು? -ಹೊಟ್ಟೆಯಲ್ಲಿ ಬೆಂಕಿಯ ಅನುಭವ -ವಾಕರಿಕೆ -ಡೀಸೆಂಟ್ರಿ -ರಕ್ತದ ವಾಂತಿ -ಅನಿಮಿಯಾ ಮದ್ಯಪಾನ ಮಾಡುವಾಗ ಸ್ಪೈಸಿ ಆಹಾರಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಅವೆಲ್ಲವೂ ಶೇಖರಣೆಗೊಂಡು ನೋವು ಉತ್ಪತ್ತಿ ಮಾಡುತ್ತದೆ.
ಆಹಾರದಲ್ಲಿ ಇವೆಲ್ಲದರ ಬಳಕೆ ಇರಲಿ
-ಗ್ರೀನ್ ಟೀ -ಜೇನುತುಪ್ಪ -ಶುಂಠಿ -ಸೇಬುಹಣ್ಣು -ಈರುಳ್ಳಿ -ಸೋಯಾಬೀನ್ ಬಳಕೆ ಮಾಡಿ
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ