AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದಲ್ಲಿ ಹೊಸ ವೈರಸ್ ಪತ್ತೆ, ನೊರೊವೈರಸ್ ಹೇಗೆ ಹರಡುತ್ತದೆ?

ಚೀನಾದ್ದೇ ಒಂದು ಕಥೆಯಾದರೆ, ಈ ಅಮೆರಿಕದೊಂದು ಕಥೆ, ಚೀನಾದಲ್ಲಿ ಈಗಾಗಲೇ ಎಚ್‌ಎಂಪಿವಿ ವೈರಸ್​​ ಹಬ್ಬಿದೆ ಎಂಬ ಸುದ್ದಿಯಾಗುತ್ತಿದೆ. ಇದರ ಮಧ್ಯೆ ಅಮೆರಿಕದಲ್ಲಿ ಇನ್ನೊಂದು ಹೊಸ ವೈರಸ್​​ ಪತ್ತೆಯಾಗಿದೆ. ಇದು ವೇಗವಾಗಿ ಹರಡುತ್ತದೆ ಎಂದು ಅಮೆರಿಕದ ವೈದ್ಯರು ಹಾಗೂ ವಿಜ್ಞಾನಿಗಳು ಹೇಳಿದ್ದಾರೆ. ಹಾಗಾದರೆ ಈ ವೈರಸ್​ ಎಲ್ಲಿಂದ ಪತ್ತೆಯಾಗಿದೆ. ಇದರ ರೋಗಲಕ್ಷಣಗಳೇನು? ಇದರ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಅಮೆರಿಕದಲ್ಲಿ ಹೊಸ ವೈರಸ್ ಪತ್ತೆ, ನೊರೊವೈರಸ್ ಹೇಗೆ ಹರಡುತ್ತದೆ?
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on:Jan 07, 2025 | 3:55 PM

Share

ಈಗಾಗಲೇ ಚೀನಾದಲ್ಲಿ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್‌ಎಂಪಿವಿ) ವೈರಸ್‌ ಇಡೀ ಜಗತ್ತು ಭಯಗೊಂಡಿದೆ. ಇದೀಗ ಯುಎಸ್​​​ನಲ್ಲಿ ನೊರೊವೈರಸ್ ಪ್ರಕರಣಗಳ ಉಲ್ಬಣಗೊಂಡಿದೆ. ನೊರೊವೈರಸ್ ಸೋಂಕು ಮತ್ತು ಅದರ ಹರಡುವಿಕೆ, ಲಕ್ಷಣಗಳೇನು ಎಂಬ ಬಗ್ಗೆ ಅಲ್ಲಿ ವೈದ್ಯರು ಪತ್ತೆ ಮಾಡಿದ್ದಾರೆ. ಇದೀಗ ಈ ವೈರಸ್​​ ಅಮೆರಿಕದಲ್ಲಿ ಹೆಚ್ಚಳಗೊಂಡಿದ್ದು, ಬೇಗವಾಗಿ ಹರಡುತ್ತಿದೆ. ಇದನ್ನು “ಚಳಿಗಾಲದ ವಾಂತಿ ದೋಷ” ಎಂದು ಕರೆಯಲಾಗುತ್ತದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (ಸಿಡಿಸಿ) ಯಿಂದ ಇತ್ತೀಚಿನ ಮಾಹಿತಿ ಪ್ರಕಾರ ತೀವ್ರವಾಗಿ ಹೆಚ್ಚಳಗೊಳ್ಳುತ್ತಿದೆ. ಡಿಸೆಂಬರ್ 2024ರ ಮೊದಲ ವಾರದಲ್ಲಿ 91 ಏಕಾಏಕಿ ವರದಿಯಾಗಿತ್ತು. ನವೆಂಬರ್ ಕೊನೆಯ ವಾರದಲ್ಲಿ 69 ರಿಂದ ಹೆಚ್ಚಾಗಿದೆ. ಈ ವೈರಸ್ ಗ್ಯಾಸ್ಟ್ರೋಎಂಟರೈಟಿಸ್‌ಗೆ ಕಾರಣವಾಗುತ್ತದೆ. ವಾಂತಿ, ಅತಿಸಾರ, ವಾಕರಿಕೆ ಮತ್ತು ಹೊಟ್ಟೆ ನೋವಿನಂತಹ ರೋಗಲಕ್ಷಣಗಳನ್ನು ಕಂಡು ಬರುತ್ತದೆ. ನೊರೊವೈರಸ್ ಪ್ರಕರಣಗಳ ಹೆಚ್ಚಳವು ಸಾರ್ವಜನಿಕ ಆರೋಗ್ಯ ಮತ್ತು ನೊರೊವೈರಸ್ ಸೋಂಕು ಮತ್ತು ಅದರ ಪ್ರಸರಣ, ರೋಗಲಕ್ಷಣಗಳು, ಕಾರಣಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳನ್ನು ಬಗ್ಗೆ ಆತಂಕವನ್ನು ಸೃಷ್ಟಿಸಿದೆ.

ನೊರೊವೈರಸ್ ಹೇಗೆ ಹರಡುತ್ತದೆ

ನೊರೊವೈರಸ್ ವೇಗವಾಗಿ ಹರಡುತ್ತದೆ, ವಿಶೇಷವಾಗಿ ಶಾಲೆಗಳು, ಕ್ರೂಸ್ ಹಡಗುಗಳು ಮತ್ತು ನರ್ಸಿಂಗ್ ಹೋಮ್‌ಗಳಂತಹ ನಿಕಟ ಪರಿಸರದಲ್ಲಿ ಇದು ಹರಡುತ್ತದೆ. ಆದರೆ ಈ ನೊರೊವೈರಸ್ ಪ್ರಕರಣಗಳನ್ನು ನಿಯಂತ್ರಿಸಲು ಸವಾಲಾಗಿದೆ ಎಂದು ಅಲ್ಲಿ ವೈದ್ಯರು ಹೇಳಿದ್ದಾರೆ.

1. ನೇರ ಸಂಪರ್ಕ

2. ಕಲುಷಿತ ಆಹಾರ ಅಥವಾ ನೀರು

3.ಕಲುಷಿತ ವಸ್ತುಗಳನ್ನು ಸ್ಪರ್ಶಿಸುವುದು

ನೊರೊವೈರಸ್ನ ಲಕ್ಷಣಗಳು

1. ವಾಕರಿಕೆ

2. ವಾಂತಿ

3. ಅತಿಸಾರ

4. ಹೊಟ್ಟೆ ನೋವು

5. ಜ್ವರ

6. ತಲೆನೋವು

7. ದೇಹದ ನೋವು

ನೊರೊವೈರಸ್ನ ಕಾರಣಗಳು

1. ಕಲುಷಿತ ಆಹಾರವನ್ನು ತಿನ್ನುವುದು

2. ಕಲುಷಿತ ನೀರು ಕುಡಿಯುವುದು

3. ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಮತ್ತು ನಂತರ ಮುಖವನ್ನು ಸ್ಪರ್ಶಿಸುವುದು

ನೊರೊವೈರಸ್ ಚಿಕಿತ್ಸೆ

1.ಪುನರ್ಜಲೀಕರಣ ಹೊಂದಿರುವ ನೀರುಗಳು ಅಥವಾ ಪಾನಿಯಗಳನ್ನು ಕುಡಿಯಿರಿ.

2.ಹೆಚ್ಚು ವಿಶ್ರಾಂತಿ ಪಡೆಯಿರಿ, ನೊರೊವೈರಸ್ನ ಬಂದ ನಂತರ ವಿಶ್ರಾಂತಿ ಅಗತ್ಯವಾಗಿರುತ್ತದೆ.

3.ವಾಂತಿ ಕಡಿಮೆಯಾದ ನಂತರ ಅಕ್ಕಿ, ಟೋಸ್ಟ್ ಮತ್ತು ಬಾಳೆಹಣ್ಣುಗಳಂತಹ ಸಪ್ಪೆ ಆಹಾರಗಳನ್ನು ಸೇವಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Tue, 7 January 25

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್