Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು

Monsoon Foods: ಬೇಸಿಗೆ ಕಳೆದು ಇನ್ನೇನು ಮುಂಗಾರು( Monsoon)ಶುರುವಾಗಲಿದೆ, ನೀವು ಸೇವಿಸುವ ಆಹಾರದ ಮೇಲೆ ನಿಮ್ಮ ಆರೋಗ್ಯ ನಿಂತಿದೆ. ಹೌದು ಹವಾಮಾನ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು.

Monsoon Foods: ಮಳೆಗಾಲದಲ್ಲಿ ನೀವು ತಿನ್ನುವ ಆಹಾರಗಳು ಹೇಗಿರಬೇಕು? ಇಲ್ಲಿವೆ ಸಲಹೆಗಳು
Monsoon Foods
Follow us
TV9 Web
| Updated By: ನಯನಾ ರಾಜೀವ್

Updated on: Jun 11, 2022 | 9:54 AM

ಬೇಸಿಗೆ ಕಳೆದು ಇನ್ನೇನು ಮುಂಗಾರು( Monsoon)ಶುರುವಾಗಲಿದೆ, ನೀವು ಸೇವಿಸುವ ಆಹಾರದ ಮೇಲೆ ನಿಮ್ಮ ಆರೋಗ್ಯ ನಿಂತಿದೆ. ಹೌದು ಹವಾಮಾನ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳಬೇಕು. ಒಂದು ವೇಳೆ ಬೇಸಿಗೆಯಲ್ಲಿ ಸೇವಿಸಿದ ಆಹಾರವನ್ನೇ ಮಳೆಗಾಲದಲ್ಲಿ ಸೇವಿಸಿದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹಾಗಾದರೆ ಮುಂಗಾರು ಅಥವಾ ಮಳೆಗಾಲದಲ್ಲಿ ನೀವು ಎಂತಹ ಆಹಾರ ಸೇವಿಸಬೇಕು ಎನ್ನುವುದರ ಕುರಿತು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಮಳೆಗಾಲದಲ್ಲಿ ದೇಹದ ಉಷ್ಣಾಂಶವು ಕಡಿಮೆ ಇರಲಿದ್ದು, ದೇಹ ಬೆವರದ ಕಾರಣ ಆಹಾರಗಳು ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ, ಹಾಗಾಗಿ ಮಳೆಗಾಲದಲ್ಲಿ ಲಘುವಾದ ಆಹಾರವನ್ನೇ ಆದಷ್ಟು ಸೇವನೆ ಮಾಡಿದರೆ ಒಳಿತು.

ಸ್ಟ್ರೀಟ್​ಫುಡ್ ಅವಾಯ್ಡ್​ ಮಾಡಿ: ಮಳೆಗಾಲದ ಸಂದರ್ಭದಲ್ಲಿ ಸ್ಟ್ರೀಟ್​ ಫುಡ್, ಹೊರಗಡೆ ಜ್ಯೂಸ್​ ಕುಡಿಯುವುದರಿಂದ ಕಲುಷಿತ ನೀರಿನಿಂದಾಗಿ ಹೊಟ್ಟೆಯಲ್ಲಿ ಇನ್​ಫೆಕ್ಷನ್ ಉಂಟಾಗಲಿದ್ದು, ಹೊಟ್ಟೆನೋವು, ಡೀಸೆಂಟ್ರಿ, ವಾಂತಿ ಸೇರಿದಂತೆ ಅನೇಕ ರೀತಿಯ ಉದರ ಸಮಸ್ಯೆಗಳು ಉಂಟಾಗಬಹುದು.

ಮಜ್ಜಿಗೆ ಬಳಕೆ ಮಾಡಿ: ಯೋಗರ್ಟ್​, ಮಜ್ಜಿಗೆ, ಸೋಯಾಬೀನ್, ಬೆಣ್ಣೆ ಸೇರಿದಂತೆ ಪ್ರೊಬಯಾಟಿಕ್​ಗಳನ್ನು ಬಳಕೆ ಮಾಡಿ ಇವುಗಳು ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ.

ಹೆಚ್ಚು ನೀರು ಕುಡಿಯಿರಿ: ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆ, ಹಾಗೆಂದ ಮಾತ್ರಕ್ಕೆ ನೀರು ಕುಡಿಯದೇ ಇರಬೇಡಿ, ದೇಹವನ್ನು ಹೈಡ್ರೇಟ್​ ಆಗಿರಿಸಿಕೊಳ್ಳುವುದು ಬಹುಮುಖ್ಯವಾದದ್ದು, ನೀರು ನಿಮ್ಮ ದೇಹದಲ್ಲಿರುವ ಬೇಡದ ಅಂಶವನ್ನು ಹೊರಹಾಕುತ್ತದೆ.

ಹಸಿ ತರಕಾರಿಗಳನ್ನು ತಿನ್ನಬೇಡಿ: ಮಳೆಗಾಲದಲ್ಲಿ ಹಸಿ ತರಕಾರಿಗಳನ್ನು ತಿನ್ನಬೇಡಿ ಅವುಗಳಲ್ಲಿ ಬ್ಯಾಕ್ಟೀರಿಯಾ, ವೈರಸ್​ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ತರಕಾರಿಗಳನ್ನು ಬೇಯಿಸಿಯೇ ತಿನ್ನಿ.

ಕುದಿಸಿದ ನೀರನ್ನು ಬಳಸಿ: ಒಂದೊಮ್ಮೆ ನೀವು ನಲ್ಲಿ ನೀರನ್ನು ಕುಡಿಯಲು ಬಳಸುತ್ತಿದ್ದರೆ ನೀವು ಕುದಿಸಿದ ನೀರನ್ನು ಬಳಸಿ, ಹಾಗೆಯೇ ಒಂದೊಮ್ಮೆ ನೀವು ಹೊರಗಡೆ ಹೋಗುವಂತಿದ್ದರೆ ಮನೆಯಿಂದಲೇ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಿ.

ಸೀಫುಡ್​ಗಳಿಂದ ದೂರವಿರಿ: ನೀವು ಮಳೆಗಾಲದ ಸಂದರ್ಭದಲ್ಲಿ ಸೀಫುಡ್​ಗಳನ್ನು ತಿನ್ನುವಾಗ ಎಚ್ಚರದಿಂದಿರಿ, ಸಮುದ್ರದ ನೀರು ಕಲುಷಿತವಾಗಿದ್ದರೆ, ಅಲ್ಲಿಯ ಮೀನುಗಳನ್ನು ತಿಂದರೆ ಡೀಸೆಂಟ್ರಿ ರೀತಿಯ ಸಮಸ್ಯೆಗಳು ಕಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ