Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್

Relationship: ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು.

Relationship: ಸಂಗಾತಿಯೊಂದಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ, ಖುಷಿ ಖುಷಿಯಾಗಿರಲು ಇಲ್ಲಿದೆ ಟಿಪ್ಸ್
Relationship
Follow us
TV9 Web
| Updated By: ನಯನಾ ರಾಜೀವ್

Updated on: Jun 11, 2022 | 12:13 PM

ಸಂಬಂಧ(Relationship)ವೆಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ, ನಾನು ಹೇಳಿದ್ದೇ ಸರಿ ಎನ್ನುವ ವಾದಗಳೂ ಇರುತ್ತದೆ. ಆದರೆ ಬಂಧವೆಂದರೆ ಅಷ್ಟೇ ಅಲ್ಲ ವಾದ, ಮುನಿಸು, ನಂಬಿಕೆ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವಂಥದ್ದು. ಪ್ರತಿಯೊಂದು ಸಂಬಂಧಗಳು ಕೂಡ ಭಿನ್ನ, ನಿಮ್ಮ ಸಂಬಂಧಗಳನ್ನು ಸುಧಾರಿಸಲು, ಸಂತೋಷವಾಗಿರಲು, ಮಾನಸಿಕ ಆರೋಗ್ಯ ಕಾಪಾಡಲು, ಒತ್ತಡವನ್ನು ದೂರವಾಗಿಸಲು, ಸಂಗಾತಿ ಜತೆ ನೆಮ್ಮದಿಯಾಗಿರಲು ಕೆಲವು ಸೂತ್ರಗಳಿವೆ.

ಒಂದೊಮ್ಮೆ ನೀವು ದುಡುಕಿ ಆಡುವ ಮಾತುಗಳು ನಿಮ್ಮ ಸಂಬಂಧವನ್ನೇ ಹಾಳುಮಾಡಬಹುದು, ಹಾಗಾಗಿ ಸಂಗಾತಿಗೆ ಬೇಸರವೆನಿಸುವ ಹಾಗೆ ಮಾತನಾಡುವುದನ್ನು ಕಡಿಮೆ ಮಾಡಿ, ಹೆಚ್ಚು ಪ್ರೀತಿ ಕೊಡಿ ಸದಾ ಜೀವನದಲ್ಲಿ ಖುಷಿಖುಷಿಯಾಗಿರಿ. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳವುದು ಹೇಗೆ, ಸಂಗಾತಿಯೊಂದಿಗೆ ಖುಷಿಯಾಗಿರಲು ಏನು ಮಾಡಬೇಕು ಎಂಬುದರ ಕುರಿತು ಇಲ್ಲಿವೆ ಕೆಲವು ಟಿಪ್ಸ್

ಸಂವಹನ ಇರಲಿ: ಸಂಗಾತಿಯ ಮಾತುಗಳನ್ನು ಮೌನವಾಗಿ ಆಲಿಸುವುದು ಸಂಬಂಧವನ್ನು ಉಳಿಸಿಕೊಳ್ಳುವ ಪ್ರಮುಖ ಘಟ್ಟವಾಗಿದೆ. ಎಂದೂ ನಿಮ್ಮ ಸಂಗಾತಿ ಯಾವುದೋ ಒಂದು ವಿಚಾರವನ್ನು ಪ್ರಸ್ತಾಪ ಮಾಡಿದಾಗ ಮಾತಿಗೂ ಮುಂಚೆಯೇ ನಿಮ್ಮ ಮಾತುಗಳನ್ನಾಡಿ ಮುಗಿಸಬೇಡಿ ಅವರಿಗೂ ಅವಕಾಶ ನೀಡಿ.

ನೀವು ಅಂದುಕೊಂಡಿದ್ದು ಸಂಭವಿಸದೇ ಇರಬಹುದು: ಒಂದೊಮ್ಮೆ ನೀವು ಅಂದುಕೊಂಡಿದ್ದು, ಸಂಭವಿಸದೇ ಇದ್ದಾಗ ಅಥವಾ ಕನಸುಗಳು ನೆರವೇರದೇ ಇದ್ದಾಗ ಸಂಗಾತಿಯೊಂದಿಗೆ ಜಗಳವಾಡಬೇಡಿ, ಆ ಕನಸನ್ನು ನೆರವೇರಿಸಿಕೊಳ್ಳಲು ನಾವು ಏನೆಲ್ಲಾ ಪ್ರಯತ್ನ ಮಾಡಬೇಕು ಎಂಬುದರ ಕಡೆಗೆ ಹೆಚ್ಚು ಗಮನಕೊಡಿ.

ಮನಸ್ಸು ಓದಲು ಸಾಧ್ಯವಿಲ್ಲ: ನೀವು ಮನಸ್ಸಿನಲ್ಲಿ ಅಂದುಕೊಂಡಿರುವುದೇ ನಡೆಯಬೇಕು ಅಥವಾ ವ್ಯಕ್ತಿ ನಡೆದುಕೊಳ್ಳಬೇಕು ಎಂದು ಬಯಸುವುದು ತಪ್ಪು, ನಿಮ್ಮ ಮನಸ್ಸನ್ನು ಓದಲು ಯಾರಿಗೂ ಸಾಧ್ಯವಿಲ್ಲ. ನೀವು ಮೊದಲು ಖುಷಿಯಾಗಿರಿ: ನೀವು ನಿಮ್ಮನ್ನ ಮೊದಲು ಖುಷಿಯಾಗಿಟ್ಟುಕೊಳ್ಳಿ, ನೀವು ಸಂತೋಷದಿಂದಿದ್ದರೆ ನಿಮ್ಮ ಸುತ್ತಮುತ್ತಲಿನವರೂ ಖುಷಿಯಾಗಿರುತ್ತಾರೆ.

ಸಲಹೆಗಳಿರಲಿ ಜಗಳ ಬೇಡ: ನೀವು ಯಾವುದೇ ವಿಚಾರದ ಕುರಿತು ನಿಮ್ಮ ಸಂಗಾತಿಗೆ ಸಲಹೆಗಳನ್ನು ನೀಡಲು ಪ್ರಯತ್ನಿಸಿ, ಆ ವಿಷಯ ಕುರಿತು ಜಗಳವಾಡಬೇಡಿ, ಸುಲಭವಾಗಿ ಅರ್ಥವಾಗುವಂತೆ ಅವರಿಗೆ ತಿಳಿಸಿ.

ಹೊಗಳಿಕೆಯಿರಲಿ: ಸಂಗಾತಿ ಉತ್ತಮ ಕೆಲಸ ಮಾಡಿದರೆ ಹೊಗಳಿಕೆ ಇದ್ದರೆ ಅವರು ಇನ್ನೂ ಉತ್ತಮ ಕೆಲಸಗಳನ್ನು ಮಾಡಬಲ್ಲರು, ಆದರೆ ಏನೋ ತಪ್ಪು ಮಾಡಿದಾಗ ಮನಸ್ಸಿಗೆ ನೋವಾಗುವಂತೆ ಮಾತನಾಡಿಬೇಡಿ, ಆ ಸಮಯದಲ್ಲಿ ಶಾಂತತೆ ಕಾಪಾಡಿಕೊಂಡು ಬಳಿಕ ನಿಧಾನವಾಗಿ ಅವರಿಗೆ ಅರ್ಥಮಾಡಿಸಲು ಪ್ರಯತ್ನಿಸಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ