Ego:ಇಗೋವನ್ನು ಬದಿಗಿಟ್ಟು ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?

ಇಗೋವಿಗೆ ಎಂತಹ ಗಟ್ಟಿ ಬಂಧವನ್ನಾದರೂ ಅಲುಗಾಡಿಸುವ ಶಕ್ತಿ ಇದೆ. ಯಾರ್ಯಾರು ತಮ್ಮ ಮನಸ್ಸಿನಲ್ಲಿ ಇಗೋವನ್ನಿಟ್ಟುಕೊಂಡಿರುತ್ತಾರೋ ಅಂತವರು ಬಹುಬೇಗ ಎಲ್ಲಾ ಬಂಧವನ್ನು ಕಳೆದುಕೊಳ್ಳುತ್ತಾರೆ. ನಿಮ್ಮಲ್ಲಿರುವ ಇಗೋ ನಿಮ್ಮ ನೂರು ಒಳ್ಳೆಯತನವನ್ನು ಇಲ್ಲವಾಗಿಸುತ್ತದೆ.

Ego:ಇಗೋವನ್ನು ಬದಿಗಿಟ್ಟು ಸಂಬಂಧವನ್ನು ಉಳಿಸಿಕೊಳ್ಳುವುದು ಹೇಗೆ?
ಅಹಂಕಾರ
Follow us
TV9 Web
| Updated By: ನಯನಾ ರಾಜೀವ್

Updated on: Jun 10, 2022 | 8:00 AM

ಅಹಂಕಾರಕ್ಕೆ ಎಂತಹ ಗಟ್ಟಿ ಬಂಧವನ್ನಾದರೂ ಅಲುಗಾಡಿಸುವ ಶಕ್ತಿ ಇದೆ. ಯಾರ್ಯಾರು ತಮ್ಮ ಮನಸ್ಸಿನಲ್ಲಿ ಇಗೋವನ್ನಿಟ್ಟುಕೊಂಡಿರುತ್ತಾರೋ ಅಂತವರು ಬಹುಬೇಗ ಎಲ್ಲಾ ಬಂಧವನ್ನು ಕಳೆದುಕೊಳ್ಳುತ್ತಾರೆ. ನಿಮ್ಮಲ್ಲಿರುವ ಇಗೋ ನಿಮ್ಮ ನೂರು ಒಳ್ಳೆಯತನವನ್ನು ಇಲ್ಲವಾಗಿಸುತ್ತದೆ.

ಅಹಂಕಾರ ಎಂಬುದು ಜನರಿಂದ ನೀವು ದೂರವಾಗುವಂತೆ ಮಾಡುತ್ತದೆ. ಇಗೋ ಇಟ್ಟುಕೊಂಡರೆ ಯಾರೂ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ, ಇಗೋ ಎಂಬುದು ಆ ಕ್ಷಣಕ್ಕೆ ಉತ್ತಮವೆನಿಸಿದರೂ ಬಳಿಕ ನೋವು ನೀಡುತ್ತದೆ. ಕೋಪವನ್ನೂ ತರಿಸುತ್ತದೆ.

ಗೆಲ್ಲಲೇಬೇಕು ಎಂಬ ಮನೋಭಾವ ಬಿಡಿ: ನೀವು ಗೆಲ್ಲಬೇಕು ಹಾಗೂ ಮತ್ತೊಬ್ಬರನ್ನು ತಪ್ಪು ಎಂದು ಸಾಬೀತುಪಡಿಸಲು ಹೋಗಬೇಡಿ, ಯಾವಾಗಲೂ ನೀವೇ ಗೆಲ್ಲಬೇಕು ಎನ್ನುವ ಹಠವನ್ನು ಬಿಡಿ.

ಹಳೆಯ ವಿಷಯಗಳನ್ನು ಕೆದಕಬೇಡಿ: ಯಾವುದೇ ವಿಷಯ ಮಾತನಾಡುತ್ತಿದ್ದರೆ, ನೀವು ಎಲ್ಲೋ ಸೋಲುತ್ತೀರಿ ಎನಿಸಿದರೆ ಹಳೆಯ ವಿಷಯವನ್ನು ಕೆದಕುವುದನ್ನು ಬಿಡಿ, ಅಹಂಕಾರ ಬದಿಗಿಟ್ಟು ಮಾತನಾಡಿ.

ಇಗೋ ಬಗ್ಗೆ ಗಮನವಿರಲಿ: ಇಗೋ ಯಾವ ಸಂದರ್ಭದಲ್ಲಿ ನಿಮ್ಮನ್ನು ಆವರಿಸುತ್ತದೆ ಎಂಬುದರ ಬಗ್ಗೆ ಗಮನವಿರಲಿ, ಆ ಸಂದರ್ಭದಲ್ಲಿ ಇಗೋ ಬಿಟ್ಟು ಜನರ ಜೊತೆ ಬೆರೆಯಿರಿ, ನಿಮ್ಮ ಭಾವನೆಗಳನ್ನು ಶೇರ್ ಮಾಡಿ. ನಿಮ್ಮ ಅಹಂಕಾರದ ಮಾತುಗಳು ಬೇರೆಯವರನ್ನು ನೋವಿನ ಕೂಪಕ್ಕೆ ತಳ್ಳಬಹುದು.

ಬೇರೆಯವರ ಭಾವನೆಗಳಿಗೂ ಗೌರವ ಕೊಡಿ: ಕೇವಲ ನಿಮ್ಮ ದೃಷ್ಟಿಯಿಂದ ಮಾತ್ರ ನೋಡುವುದಲ್ಲ ಬೇರೆಯವರ ಭಾವನೆಗಳಿಗೂ ಬೆಲೆ ಕೊಡಿ. ಹಾಗೆಂದ ಮಾತ್ರಕ್ಕೆ ಬೇರೆಯವರ ಗುಣವನ್ನು ನೀವು ಅಳವಡಿಸಿಕೊಳ್ಳಬೇಕೆಂದೇನಿಲ್ಲ ಆದರೆ ಯಾರಾದರೂ ಯಾವ ವಿಷಯವನ್ನಾದರೂ ಪ್ರಸ್ತಾಪಿಸುತ್ತಿದ್ದರೆ ಅವರ ಮಾತುಗಳನ್ನು ಆಲಿಸಿ.

ಬೇರೊಬ್ಬರು ಅಹಂಕಾರ ತೋರಿಸಿದರೆ?: ಒಂದೊಮ್ಮೆ ಬೇರೊಬ್ಬರು ಇಗೋದಲ್ಲಿದ್ದರೆ ನೀವು ಅವರ ಬಳಿ ಹೆಚ್ಚು ಹೊತ್ತು ಮಾತನಾಡುವ ಅಗತ್ಯವಿಲ್ಲ, ನೀವು ಸರಿಯಿದ್ದೀರಿ ಎಂಬುದು ನಿಮಗೆ ತಿಳಿದಿದೆ. ಬೇರೆಯವರ ಮಾತುಗಳು ಕೂಡ ನಾನು ಸರಿ ಎಂಬಂತಿದ್ದರೆ ಮಾತು ನಿಲ್ಲಿಸಿಬಿಡಿ.

ಇಬ್ಬರೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ: ಒಂದೊಮ್ಮೆ ಇಬ್ಬರಲ್ಲೂ ಅಹಂಕಾರವಿದ್ದರೆ ಅಥವಾ ನಿಮಗೆ ಇಗೋ ಇದೆ ಎಂದು ಅನಿಸಿದರೆ, ಭಿನ್ನಾಭಿಪ್ರಾಯವಿದ್ದರೆ ಆ ವಿಷಯದಲ್ಲಿ ಯಾವ ರೀತಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಇಬ್ಬರೂ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್