Loneliness: ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?

ಒಂಟಿಯಾಗಿ ಕುಳಿತು ಕೊರಗುವುದು, ನನ್ನ ಬಗ್ಗೆ ಕಾಳಜಿ ಮಾಡುವವರು ಯಾರೂ ಇಲ್ಲ ಎಂದು ಚಿಂತೆ ಮಾಡುವುದು ಇದೆಲ್ಲವನ್ನೂ ಬಿಟ್ಟುಬಿಡಿ.

Loneliness: ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?
ಒಂಟಿತನ
Follow us
TV9 Web
| Updated By: ನಯನಾ ರಾಜೀವ್

Updated on:Jun 10, 2022 | 10:02 AM

ಒಂಟಿಯಾಗಿ ಕುಳಿತು ಕೊರಗುವುದು, ನನ್ನ ಬಗ್ಗೆ ಕಾಳಜಿ ಮಾಡುವವರು ಯಾರೂ ಇಲ್ಲ ಎಂದು ಚಿಂತೆ ಮಾಡುವುದು ಇದೆಲ್ಲವನ್ನೂ ಬಿಟ್ಟುಬಿಡಿ. ಒಂಟಿತನಕ್ಕೆ ಗುಡ್​ಬೈ ಹೇಳಿ, ನಿಮಗೆ ನಿಮಗಿಂತ ಒಳ್ಳೆಯ ಕಂಪನಿ ಬೇಕೇ?. ಸಾಕಷ್ಟು ಮಂದಿ ಒಂಟಿಯಾಗಿದ್ದರೂ ಎಂಜಾಯ್ ಮಾಡುತ್ತಾರೆ, ಇನ್ನೂ ಕೆಲವರು ಸ್ನೇಹಿತರಿದ್ದರೂ ಒಂಟಿಯೆಂಬಂತೆ ಒಬ್ಬರೇ ಕುಳಿತಿರುತ್ತಾರೆ. ನಿಮ್ಮ ಕಂಪನಿಯನ್ನು ನೀವೇ ಎಂಜಾಯ್ ಮಾಡಿ.

ಸಾಮಾನ್ಯವಾಗಿ ಎರಡು ರೀತಿಯ ಮನಸ್ಥಿತಿಯವರಿರುತ್ತಾರೆ ಅವರನ್ನು ಎಕ್ಟ್ರಾವರ್ಟ್​​ ಹಾಗೂ ಇಂಟ್ರಾವರ್ಟ್​ಗಳೆಂದು ಕರೆಯಲಾಗುತ್ತದೆ, ಎಕ್ಟ್ರಾವರ್ಟ್​ಗಳು ಸಮಾಜದ ಜತೆ ಬೆರೆಯುತ್ತಾರೆ, ಸ್ನೇಹಿತರ ಜತೆ ಸಮಯ ಕಳೆಯುತ್ತಾರೆ, ಇನ್​ಟ್ರಾವರ್ಟ್​ಗಳು ಯಾರ ಜತೆಯೂ ಬೆರೆಯುವುದಿಲ್ಲ ಒಂಟಿಯಾಗಿರಲು ಇಷ್ಟಪಡುತ್ತಾರೆ.

ನಿಮ್ಮ ಜತೆಗೆ ನೀವೇ ಹೆಚ್ಚು ಸಮಯ ಕಳೆಯಿರಿ, ನಿಮ್ಮ ಬಗ್ಗೆ ನೀವು ಅರಿಯುವುದು ತುಂಬಾ ಇದೆ, ನಿಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ನಿಮ್ಮ ಜತೆ ನಿಮ್ಮ ಸಂಬಂಧ ಇನ್ನೂ ಗಟ್ಟಿಯಾಗುತ್ತದೆ.

ಹೊಸ ಕೌಶಲ್ಯವನ್ನು ಅಳವಡಿಸಿಕೊಳ್ಳಿ: ಸಾಕಷ್ಟು ಮಂದಿ ಒಂಟಿಯಾಗಿರಲು ಇಷ್ಟಪಡುವುದಿಲ್ಲ, ಆದರೆ ಸಂದರ್ಭಗಳು ಎಂದೂ ನಾವಂದುಕೊಂಡಂತೆ ಇರುವುದಿಲ್ಲ, ಒಂಟಿಯಾಗಿರುವ ಸಾಕಷ್ಟು ಸಂದರ್ಭಗಳು ಒದಗಿಬರಬಹುದು. ಹೀಗಾಗಿ ನೀವು ಹೊಸ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ, ಹೊಸತನ್ನು ಕಲಿಯಲು ಪ್ರಯತ್ನಿಸಿ, ಓದುವುದು, ಕುಕಿಂಗ್, ನೃತ್ಯ, ಫೋಟೊಗ್ರಫಿ ಸೇರಿದಂತೆ ಇತರೆ ವಿಷಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಒಂಟಿಯಾಗಿದ್ದೇನೆ ಎಂಬ ಭಾವನೆ ಮೂಡದಂತೆ ನೋಡಿಕೊಳ್ಳಿ.

ಬೇರೆಯವರ ಜೊತೆ ಹೋಲಿಕೆ ಬೇಡ: ನೀವು ನಿಮ್ಮನ್ನು ಬೇರೆಯವರ ಜತೆ ಹೋಲಿಕೆ ಮಾಡಿಕೊಂಡಾಗ ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಜೀವನ ಹಾಗೂ ಸ್ನೇಹಿತರ ಜೀವನ ಅಥವಾ ಇನ್ಯಾರದೇ ಜೀವನವನ್ನು ಹೋಲಿಕೆ ಮಾಡಬೇಡಿ. ಯಾಕೆಂದರೆ ಪ್ರತಿಯೊಬ್ಬರೂ ಭಿನ್ನ ಮನಸ್ಥಿತಿಯನ್ನು ಹೊಂದಿರುತ್ತಾರೆ. ಜೀವನವೆಂದ ಮೇಲೆ ಸಾಕಷ್ಟು ಅಡೆತಡೆಗಳಿರುವುದು ಸಾಮಾನ್ಯ.

ದೈಹಿಕ ಚಟುವಟಿಕೆ: ನಿಮ್ಮನ್ನು ನೀವು ಆರೈಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ, ನಿಮಗೆ ಹೋಟೆಲ್​ನಲ್ಲಿ ನಿಮಗಿಷ್ಟವಾದ ಆಹಾರವನ್ನು ತಿನ್ನಿ, ನಿತ್ಯವೂ ವ್ಯಾಯಾಮ ಮಾಡಿ ಸದಾ ಹ್ಯಾಪಿಯಾಗಿರಿ.

ಟ್ರಿಪ್​ಗಳಿಗೆ ತೆರಳಿ: ಮನೆಯಿಂದ ಆಚೆಬನ್ನಿ ಪರಿಸರದಲ್ಲಿ ಹೆಚ್ಚು ಸಮಯ ಕಳೆಯಿರಿ, ಪಾರ್ಕ್, ಹೆಚ್ಚು ಸಮಯ ನೀವು ಗಿಡ, ಮರಗಳ ಜತೆ ಕಳೆಯುವುದರಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಜತೆಗೆ ಖಿನ್ನತೆಯಿಂದ ದೂರವಾಗುತ್ತೀರಿ ಹಾಗೂ ರಕ್ತದೊತ್ತಡವೂ ನಿಯಂತ್ರಣದಲ್ಲಿರಲಿದೆ.

ನೀವು ನೀವಾಗಿರಿ: ನೀವು ನಿಮ್ಮ ಜತೆಯಲ್ಲೇ ಹೆಚ್ಚಿನ ಸಮಯವನ್ನು ಕಳೆಯಿರಿ, ಸದಾ ಖುಷಿಯಿಂದಿರಿ. ಎಂದೂ ನಿಮ್ಮ ತನವನ್ನು ಬಿಟ್ಟುಕೊಡಬೇಡಿ. ಎಂದೂ ನೀವು ಒಬ್ಬಂಟಿ ಎಂದುಕೊಳ್ಳಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:59 am, Fri, 10 June 22

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ